RSS Chief s Canada Visit: ಭಾಗ್ವತ್ ಕೆನಡಾ ಭೇಟಿಗೆ ನೂರಕ್ಕೂ ಹೆಚ್ಚು ಸಂಘಟನೆಗಳ ಭಾರೀ ಬೆಂಬಲ! ಯಾವಾಗ ಪ್ರವಾಸ?

Kannadaprabha News   | Kannada Prabha
Published : Aug 21, 2026, 07:02 AM IST
100 Groups Back RSS Chief s Canada Visit Urge Ottawa To Reject Calls For Blocking

ಸಾರಾಂಶ

ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗ್ವತ್‌ ಅವರ ಪ್ರಸ್ತಾವಿತ ಕೆನಡಾ ಭೇಟಿಗೆ ವಿರೋಧ ವ್ಯಕ್ತವಾದ ಬೆನ್ನಲ್ಲೇ, 100ಕ್ಕೂ ಹೆಚ್ಚು ಕೆನಡಾದ ಸಂಸ್ಥೆಗಳು ಬೆಂಬಲ. ಭಾಗ್ವತ್‌ ಭೇಟಿಗೆ ಅವಕಾಶ ನೀಡುವಂತೆ ಕೋರಿ ಈ ಸಂಘಟನೆಗಳು ಪ್ರಧಾನಿ ಮಾರ್ಕ್‌ ಕಾರ್ನಿಗೆ ಪತ್ರ ಬರೆದಿದ್ದು, ವಿರೋಧಿಗಳ ಷಡ್ಯಂತ್ರಕ್ಕೆ ಟೀಕೆ

  • ಭೇಟಿಯನ್ನು ವಿರೋಧಿಸುತ್ತಿರುವ ಶಕ್ತಿಗಳ ವಿರುದ್ಧ ಆಕ್ರೋಶ
  • ಆ.25ರಿಂದ ಅಮೆರಿಕ, ಕೆನಡಾ, ಯುಕೆಗೆ ಭಾಗ್ವತ್‌ ಪ್ರವಾಸ

ಒಟ್ಟಾವಾ: ಆರ್‌ಎಸ್‌ಎಸ್‌ ಮುಖ್ಯಸ್ಥ ಡಾ. ಮೋಹನ್‌ ಭಾಗ್ವತ್‌(RSS Chief Mohan Bagwat) ಅವರ ಪ್ರಸ್ತಾವಿತ ಕೆನಡಾ ಭೇಟಿಯನ್ನು ಬೆಂಬಲಿಸಿ, ಕೆನಡಾದ 100ಕ್ಕೂ ಅಧಿಕ ಸಂಸ್ಥೆಗಳು ಹಾಗೂ ನಾಗರಿಕ ಹಕ್ಕು ಸಂಘಟನೆಗಳು ಪ್ರಧಾನಿ ಮಾರ್ಕ್‌ ಕಾರ್ನಿ ಹಾಗೂ ಹಿರಿಯ ಸಚಿವರಿಗೆ ಪತ್ರ ಬರೆದಿವೆ. ಜತೆಗೆ, ಭಾಗ್ವತ್‌ ಭೇಟಿಯನ್ನು ವಿರೋಧಿಸುತ್ತಿರುವ ಶಕ್ತಿಗಳ ಹಿಂದಿನ ಷಡ್ಯಂತ್ರವನ್ನು ಖಂಡಿಸಿವೆ.

‘ಭಾಗ್ವತ್‌ ದ್ವೇಷ ಭಾಷಣದ ಇತಿಹಾಸ ಹೊಂದಿದ್ದಾರೆ. ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ಹಿಂಸಾಚಾರ ಪ್ರತಿಪಾದಿಸುತ್ತಾರೆ ಹಾಗೂ ಅವರಿಗೆ ಬೆದರಿಕೆ ಹಾಕುತ್ತಾರೆ. ಹಾಗಾಗಿ ಭಾಗ್ವತ್‌ರ ಭೇಟಿಯನ್ನು ನಿರ್ಬಂಧಿಸಬೇಕು’ ಎಂದು ಎನ್‌ಡಿಪಿ ಸಂಸದರಾದ ಜೆನ್ನಿ ಕ್ವಾನ್, ಹೀದರ್ ಮೆಕ್‌ಫರ್ಸನ್ ಮತ್ತು ಇತರ ಸಂಘಟನೆಗಳು ಆಗ್ರಹಿಸಿದ್ದವು.

ಇದಕ್ಕೆ ಪ್ರತಿಯಾಗಿ ಪ್ರಧಾನಿಗೆ ಪತ್ರ ಬರೆದಿರುವ ಸಂಘಟನೆಗಳು, ‘ಕೆನಡಾದಲ್ಲಿ 19 ಲಕ್ಷಕ್ಕೂ ಅಧಿಕ ಹಿಂದೂಗಳಿದ್ದಾರೆ. ಅವರ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಭಾಗ್ವತ್‌ ಕೆನಡಾಕ್ಕೆ ಬರುತ್ತಿದ್ದಾರೆ. ಹಾಗಾಗಿ ಅವರ ಭೇಟಿಗೆ ಅವಕಾಶ ಕೊಡಬೇಕು ಹಾಗೂ ವಿರೋಧಿ ಶಕ್ತಿಗಳ ಅಪಸ್ವರಕ್ಕೆ ಮಣೆ ಹಾಕಬಾರದು’ ಎಂದು ಮನವಿ ಮಾಡಿವೆ. ಜತೆಗೆ, ಭಾಗ್ವತ್‌ ಮೇಲೆ ಮಾಡಿರುವ ಆರೋಪಗಳಿಗೆ ಸೂಕ್ತ ಪುರಾವೆ ಒದಗಿಸುವಂತೆ ಆಗ್ರಹಿಸಿವೆ.

ಆರ್‌ಎಸ್‌ಎಸ್‌ನ ಶತಮಾನೋತ್ಸವದ ನಿಮಿತ್ತ ವಿದೇಶಿ ಸಂಪರ್ಕದ ಭಾಗವಾಗಿ ಆ.25ರಿಂದ ಅಮೆರಿಕ, ಕೆನಡಾ ಮತ್ತು ಯುಕೆಗೆ ಭಾಗ್ವತ್‌ ಭೇಟಿ ನೀಡಲಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಕ್ಷಿಣ ಭಾರತದಲ್ಲೇ ಒಂದೇ ವರ್ಷಕ್ಕೆ 806 ಕೋಟಿ ರೂ. ಆದಾಯ!: ನಷ್ಟದಲ್ಲಿದ್ದ ಭಾರತೀಯ ರೈಲ್ವೆಗೆ ಬಂಪರ್ 'ಖಜಾನೆ'ಯಾದ ವಂದೇ ಭಾರತ್!
ಶ್ರಾವಣ ಮಾಸದಲ್ಲಿ ನಿತಿನ್ ನಬಿನ್ ಮಾಂಸಾಹಾರ ತಿಂದ್ರಾ? 'ಇದು ಸುಳ್ಳು ಸುದ್ದಿ' ಕಾಂಗ್ರೆಸ್ ಪೋಸ್ಟ್‌ಗೆ ಬಿಜೆಪಿ ಕೆಂಡಾಮಂಡಲ!