10 ವರ್ಷದ ಬಾಲಕಿ ಹುಟ್ಟುಹಬ್ಬಕ್ಕೆ ಆನ್‌ಲೈನ್ ಮೂಲಕ ಕೇಕ್ ತರಿಸಲಾಗಿದೆ. ಕುಟುಂಬಸ್ಥರು, ಆಪ್ತರು ಬಾಲಕಿ ಬರ್ತ್ ಡೇ ಸೆಲೆಬ್ರೇಷನ್‌ನಲ್ಲಿ ಪಾಲ್ಗೊಂಡಿದ್ದಾರೆ. ಕೇಕ್ ಕತ್ತರಿಸಿ ಎಲ್ಲರಿಗೂ ಹಂಚಲಾಗಿದೆ. ಹುಟ್ಟು ಹಬ್ಬದ ಬಾಲಕಿಗೆ ಎಲ್ಲರೂ ಕೇಕ್ ತಿನ್ನಿಸಿದ್ದಾರೆ. ಆದರೆ ಕೆಲವೇ ಹೊತ್ತಲ್ಲಿ ಬಾಲಕಿ ಸೇರಿದಂತೆ ಕುಟುಂಬಸ್ಥರು ಅಸ್ವಸ್ಥಗೊಂಡಿದ್ದಾರೆ. ಆಸ್ಪತ್ರೆ ದಾಖಲಿಸಿದ್ದರೂ ಬಾಲಕಿ ಬದುಕುಳಿಯಲಿಲ್ಲ
ಪಟಿಯಾಲ(ಮಾ.30) ಹುಟ್ಟುಹಬ್ಬ ಸಂಭ್ರಮಕ್ಕೆ ಕೇಕ್ ಕತ್ತರಿಸದೇ ಸೆಲೆಬ್ರೇಷನ್ ಅಂತ್ಯವಾಗುವುದಿಲ್ಲ. ಮಕ್ಕಳಿಗಂತೂ ಹುಟ್ಟುಹಬ್ಬದ ದಿನ ಕೇಕ್ ಕತ್ತರಿಸಿ ಸೆಲೆಬ್ರೇಷನ್ ಕಡ್ಡಾಯವಾಗಿದೆ. ಹೀಗೆ 10 ವರ್ಷದ ಬಾಲಕಿ ಮಾನ್ವಿಯ ಹುಟ್ಟುಹಬ್ಬಕ್ಕೆ ಪೋಷಕರು ಆನ್‌ಲೈನ್ ಮೂಲಕ ಕೇಕ್ ಆರ್ಡರ್ ಮಾಡಿದ್ದಾರೆ. ಕುಟುಂಬಸ್ಥರು, ಆಪ್ತರು ಮಾನ್ವಿಯ ಹುಟ್ಟಹಬ್ಬಕ್ಕೆ ಹಾಜರಾಗಿದ್ದಾರೆ. ಎಲ್ಲರ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಹಂಚಲಾಗಿದೆ. ಬಾಲಕಿ ಮಾನ್ವಿ ಕೂಡ ಕತ್ತರಿಸಿದ ಕೇಕ್ ತಿಂದಿದ್ದಾಳೆ. ಇತ್ತ ಕುಟುಂಬಸ್ಥರು, ಆಪ್ತರು ಬರ್ತ್‌ಡೇ ಗರ್ಲ್‌ಗೆ ಕೇಕ್ ತಿನ್ನಿಸಿ ಸಂಭ್ರಮದಿಂದ ಹುಟ್ಟುಹಬ್ಬ ಆಚರಿಸಿದ್ದಾರೆ. ಆದರೆ ಕೆಲವೇ ಹೊತ್ತಲ್ಲಿ ಕೇಕ್ ತಿಂದವರು ಅಸ್ವಸ್ಥಗೊಂಡಿದ್ದಾರೆ. ತುಸು ಹೆಚ್ಚು ಕೇಕ್ ತಿಂದಿದ್ದ ಬಾಲಕಿ ಆರೋಗ್ಯ ತೀವ್ರವಾಗಿ ಹದಗೆಟ್ಟಿದೆ. ತಕ್ಷಣವೇ ಆಸ್ಪತ್ರೆ ದಾಖಲಿಸಿದರೂ ಪ್ರಯೋಜನವಾಗಿಲ್ಲ. ಬಾಲಕಿ ಮೃತಪಪಟ್ಟಿದ್ದಾಳೆ. ಈ ಘಟನೆ ಪಂಜಾಬ್‌ನ ಪಟಿಯಾಲದಲ್ಲಿ ನಡೆದಿದೆ.
ಪಟಿಯಾಲದಲ್ಲಿ ನೆಲೆಸಿರುವ ಕುಟುಂಬ 10 ವರ್ಷದ ಮಗಳು ಮಾನ್ವಿ ಹುಟ್ಟುಹಬ್ಬಕ್ಕೆ ಆನ್‌ಲೈನ್ ಮೂಲಕ ಕೇಕ್ ಆರ್ಡರ್ ಮಾಡಿದ್ದಾರೆ. ಮಾರ್ಚ್ 24ರಂದು ಮಾನ್ವಿಯ ಹುಟ್ಟು ಹಬ್ಬ. ಇದೇ ದಿನ ಆರ್ಡರ್ ಮಾಡಿದ ಕೇಕ್ ಮನೆಗೆ ಆಗಮಿಸಿದೆ. ಮನೆಯಲ್ಲಿ ಸಂಭ್ರಮದ ವಾತಾವರಣ. ಆಪ್ತರು, ಕುಟುಂಬಸ್ಥರಿಗೆ ಹುಟ್ಟುಹಬ್ಬಕ್ಕೆ ಆಹ್ವಾನ ನೀಡಲಾಗಿತ್ತು. ಎಲ್ಲರೂ ಕೇಕ್ ಕತ್ತರಿಸಿ ಸಂಭ್ರಮಿಸಲು ಆಗಮಿಸಿದ್ದರು.
undefined
ರೆಸ್ಟೋರೆಂಟ್‌ನಲ್ಲಿ ಡ್ರೈ ಐಸ್ ತಿಂದು ರಕ್ತ ಕಕ್ಕಿದ ಐವರು, ಹೊಟೆಲ್ ಮ್ಯಾನೇಜರ್ ಅರೆಸ್ಟ್!
ಎಲ್ಲರ ಆಗಮನದ ಬಳಿಕ ಬರ್ತ್‌ಡೇ ಗರ್ಲ್ ಮಾನ್ವಿ ಕೇಕ್ ಕತ್ತರಿಸಿದ್ದಾಳೆ. ಚಪ್ಪಾಳೆ, ಸಂಭ್ರಮದಲ್ಲಿ ಎಲ್ಲರೂ ಖುಷಿಯಾಗಿದ್ದಾರೆ. ಕೇಕ್ ಕತ್ತರಿಸಿದ ಬಳಿಕ ಪೋಷಕರು, ಆಪ್ತರು ಬಾಲಕಿಗೆ ಕೇಕ್ ತಿನ್ನಿಸಿ ಶುಭಕೋರಿದ್ದಾರೆ. ಇತ್ತ ಬಾಲಕಿ ಕೇಕ್ ಕತ್ತರಿಸಿ ಎಲ್ಲರಿಗೂ ಹಂಚಿದ್ದಾಳೆ. ಬಳಿಕ ತಾನೂ ಕತ್ತರಿಸಿದ ಕೇಕ್ ತೆಗೆದು ತಿಂದಿದ್ದಾಳೆ. ಬರ್ತ್‌ಡೇ ಗರ್ಲ್ ಆಗಿರುವ ಕಾರಣ ಎಲ್ಲರೂ ಬಾಲಕಿಗೆ ಕೇಕ್ ತಿನ್ನಿಸಿದ್ದಾರೆ.
ಕೇಕ್ ತಿಂದ ಕೆಲ ಹೊತ್ತಿನ ಬಳಿಕ ಬಾಲಕಿ ಸೇರಿದಂತೆ ಕುಟುಂಬಸ್ಥರು ಅಸ್ವಸ್ಥಗೊಂಡಿದ್ದಾರೆ. ಹಲವರಿಗೆ ವಾಂತಿಯಾಗಿದೆ. ಬಾಲಕಿ ಮಾನ್ವಿ ಆರೋಗ್ಯ ಕ್ಷೀಣಿಸಿದೆ. ಇತ್ತ ಕುಟುಂಬಸ್ಥರು ಕೂಡ ಅಸ್ವಸ್ಥಗೊಂಡಿದ್ದಾರೆ. ತೀವ್ರ ಅಸ್ವಸ್ಥಗೊಂಡ ಬಾಲಕಿಯನ್ನು ಆಸ್ಪತ್ರೆ ದಾಖಲಿಸಲಾಗಿದೆ. ಇದರ ಜೊತೆಗೆ ಕುಟುಂಬಸ್ಥರೂ ವೈದ್ಯರಿಗೆ ಮಾಹಿತಿ ನೀಡಿ ಚಿಕಿತ್ಸೆ ಪಡೆಯಲು ಮುಂದಾಗಿದ್ದಾರೆ.
ಕೇರಳದಲ್ಲಿ ಚಿಕನ್ ಶವರ್ಮ ತಿಂದು 22 ವರ್ಷದ ಯುವಕ ಸಾವು: ಹೊಟೇಲ್ ಬಂದ್ ಮಾಡಿಸಿದ ಅಧಿಕಾರಿಗಳು
ಆಸ್ಪತ್ರೆ ದಾಖಲಿಸಿದ ಬೆನ್ನಲ್ಲೇ ತಪಾಸಣೆ ನಡೆಸಿದ ವೈದ್ಯರು ಬಾಲಕಿ ಮೃತಪಟ್ಟಿರುವುದಾಗಿ ಖಚಿತಪಡಿಸಿದ್ದಾರೆ. ಇತ್ತ ಕಟುಂಬಸ್ಖರಿಗೆ ಚಿಕಿತ್ಸೆ ನೀಡಲಾಗಿದೆ. ಈ ಘಟನೆಯಿಂದ ಕುಟುಂಬ ಆಘಾತಕ್ಕೊಳಗಾಗಿದೆ. ಫುಡ್ ಪಾಯ್ಸನ್ ಕಾರಣದಿಂದ ಬಾಲಕಿ ಮೃತಪಟ್ಟಿರುವುದಾಗಿ ಆಸ್ಪತ್ರೆ ಮೂಲಗಳು ಹೇಳಿವೆ. ಇದೀಗ ಸೆಕ್ಷನ್ 273 ಹಾಗೂ 304A ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಇದೀಗ ಬೇಕರಿಯ ಉತ್ಪನ್ನ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.