ಮರುಕಳಿಸುತ್ತಿದೆ ಜಮ್ಮು ಕಾಶ್ಮೀರ ಗತವೈಭವ, ಸೂರ್ಯ ಮಂದಿರ ಪುನರ್ ನಿರ್ಮಾಣಕ್ಕೆ ಅಸ್ತು!

Published : Mar 30, 2024, 03:48 PM ISTUpdated : Mar 30, 2024, 03:51 PM IST
ಮರುಕಳಿಸುತ್ತಿದೆ ಜಮ್ಮು ಕಾಶ್ಮೀರ ಗತವೈಭವ, ಸೂರ್ಯ ಮಂದಿರ ಪುನರ್ ನಿರ್ಮಾಣಕ್ಕೆ ಅಸ್ತು!

ಸಾರಾಂಶ

8ನೇ ಶತಕಮಾನದ ಮಾರ್ತಾಂಡ ಸೂರ್ಯ ದೇವಸ್ಥಾನ ಇದೀಗ ಪುನರ್ ನಿರ್ಮಾಣಗೊಳ್ಳುತ್ತಿದೆ. ಸಿಕಂದರ್ ಶಾ ಮೀರಿ ಧ್ವಂಸಗೊಳಿಸಿದ ಬಳಿಕ ಈ ದೇವಸ್ಥಾನ ಪುನರ್ ನಿರ್ಮಾಣಕ್ಕೆ ಸುಲ್ತಾನರು ಅವಕಾಶವೇ ನೀಡಲಿಲ್ಲ. ಸ್ವತಂತ್ರ ಭಾರತದಲ್ಲಿ ನಿರ್ಲಕ್ಷ್ಯಕ್ಕೊಳಗಾದ ಈ ದೇವಸ್ಥಾನ ಮರು ನಿರ್ಮಾಣಕ್ಕೆ ನಿರ್ಧಾರ ಮಾಡಲಾಗಿದೆ  

ಶ್ರೀನಗರ(ಮಾ.30) ಸೂರ್ಯ ದೇವನಿಗೆ ಸಮರ್ಪಿತವಾಗಿರುವ ಕೆಲವೇ ಕೆಲವು ಮಂದಿಗಳಲ್ಲಿ ಜಮ್ಮು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿರುವ ಮಾರ್ತಾಂಡ ಸೂರ್ಯ ಮಂದಿರ ಕೂಡ ಒಂದು. 8ನೇ ಶತಮಾನದ ಈ ದೇವಾಲಯ ಅತ್ಯಂತ ಶ್ರೀಮಂತ ವಾಸ್ತುಶಿಲ್ಪ ಹಾಗೂ ವಿಶೇಷ ವೈಜ್ಞಾನಿಕತೆಯನ್ನೂ ಹೊಂದಿತ್ತು. ಆದರೆ  ಕಾಶ್ಮೀರವನ್ನು ತೆಕ್ಕೆಗೆ ತೆಗೆದುಕೊಂಡು ಆಳ್ವಿಕೆ ನಡೆಸಲು ಆರಂಭಿಸಿದ ಸುಲ್ತಾನರ ದಾಳಿಗೆ ಈ ದೇವಾಲಯ ಧ್ವಂಸಗೊಂಡಿತ್ತು. ಸಿಕಂದರ್ ಶಾ ಮೀರಿ ಧ್ವಂಸಗೊಳಿಸಿದ ಈ ದೇವಾಲಯ ಇದೀಗ ಪುನರ್ ನಿರ್ಮಾಣಕ್ಕೆ ನಿರ್ಧಾರ ಕೈಗೊಳ್ಳಲಾಗಿದೆ.

ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಕೆ ಸಿನ್ಹ ಈಗಾಗಲೇ ಕೇಂದ್ರ ಸರ್ಕಾರದ ಜೊತೆ ಮಾತುಕತೆ ನಡೆಸಿದ್ದಾರೆ. ಬಳಿಕ ಜಮ್ಮು ಮತ್ತು ಕಾಶ್ಮೀರ ಆಡಳಿತಾಧಿಕಾರಿಗಳ ಜೊತೆ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಈ ಸಭೆ ಬಳಿಕ ಜಮ್ಮು ಮತ್ತು ಕಾಶ್ಮೀರ ಪ್ರಧಾನ ಕಾರ್ಯದರ್ಶಿ ಈ ಕುರಿತು ಅಧಿಸೂಚನೆ ಹೊರಡಿಸಿದ್ದಾರೆ. 

 

ಲಷ್ಕರ್‌ ಉಗ್ರನಾಗಿ ಬದಲಾದ ಯೋಧ ರಿಯಾಜ್‌ ಅಹ್ಮದ್‌: ದೆಹಲಿಯಲ್ಲಿ ಬಂಧನ 

ಜಮ್ಮು ಮತ್ತು ಕಾಶ್ಮೀರದಲ್ಲಿನ ಐತಿಹಾಸಿಕ ಹಾಗೂ ಪುರಾತನ ದೇವಾಲಯಗಳ ಪುನರ್ ನಿರ್ಮಾಣದ ಭಾಗವಾಗಿ ಅನಂತನಾಗ್ ಜಿಲ್ಲೆಯ ಮಾರ್ತಾಂಡ ದೇವಾಲಯ ಪುನರ್ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. ಈ ದೇವಸ್ಥಾನದ ಆವರಣದಲ್ಲಿ ಜಮ್ಮು ಮತ್ತು ಕಾಶ್ಮೀರದ ರಾಜ ಲಲಿತಾದಿತ್ಯ ಮುಕ್ತಪಿಡಾ ಪ್ರತಿಮೆಯನ್ನೂ ಕೆತ್ತಲಾಗುತ್ತದೆ ಎಂದು ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದಾರೆ.

ಕಾರ್ಕೋಟಕ ವಂಶದ ರಾಜ ಲಲಿತಾದಿತ್ಯ ಮುಕ್ತಪಿಡಾ 7 ಮತ್ತು 8ನೇ ಶತಮಾನದಲ್ಲಿ ಜಮ್ಮು ಮತ್ತು ಕಾಶ್ಮೀರದ ರಾಜನಾಗಿದ್ದ. ಹಿಂದೂ ರಾಜ ಕಾಶ್ಮೀರದಲ್ಲಿ ಅತ್ಯುತ್ತಮ ಆಳ್ವಿಕೆ ಜೊತೆಗೆ ಐತಿಹಾಸಿಕ ಸ್ಥಳಗಳು, ಗುಡಿಗಳನ್ನು ಅತೀ ದೊಡ್ಡ ದೇವಸ್ಥಾನಗಳಾಗಿ ಪರಿವರ್ತಿಸಿದ್ದ. ಹೀಗೆ ಲಲಿತಾದಿತ್ಯ ಅನಂತನಾಗ್ ಜಿಲ್ಲೆಯಲ್ಲಿ ಮಾರ್ತಾಂಡ ಸೂರ್ಯ ದೇವಸ್ಥಾನ ಕಟ್ಟಿಸಿದ್ದ. ಇದು ಭಾರತದ ಅತ್ಯಂತ ಪುರಾತನ ಸೂರ್ಯ ದೇವಸ್ಥಾನವಾಗಿದೆ. 

ಪ್ರಧಾನಿ ಸಿಂಗ್ ಕೈಕುಲುಕಿ ಆತಿಥ್ಯ ಸ್ವೀಕರಿಸಿದ ಉಗ್ರ ಯಾಸಿನ್ ಮಲಿಕ್‌ಗೆ ಸಂಕಷ್ಟ, 1990ರ ಹತ್ಯೆ ಸಾಕ್ಷಿ ಲಭ್ಯ!

ಸಿಕಂದರ್ ಶಾ ಮೀರಿ ಸೂಚನೆ ಮೇರೆಗೆ 1389-1413ರ ಅವಧಿಯಲ್ಲಿ ಈ ದೇವಸ್ಥಾನವನ್ನು ಧ್ವಂಸಗೊಳಿಸಲಾಯಿತು. ಸೂಫಿ ಪ್ರವಚಕ ಮೀರ್ ಮೊಹಮ್ಮದ್ ಹಮದಾನಿ ಸೂಚನೆಯಂತೆ ಸುಲ್ತಾನ ಸಿಕಂದರ್ ಶಾ ಮೀರಿ ಈ ದೇವಸ್ಥಾನ ಧ್ವಂಸಗೊಳಿಸಲು ಆಜ್ಞೆ ನೀಡಿದ್ದ. ಇದೇ ವೇಳೆ ಸ್ಥಳೀಯರನ್ನು ಹತ್ಯೆ ಮಾಡಲಾಗಿತ್ತು. ಬಳಿಕ ಈ ದೇವಸ್ಥಾನವನ್ನು ಹಲವು ರಾಜಕರು ಪುನರ್ ಸ್ಥಾಪಿಸಲು ಪ್ರಯತ್ನಿಸಿದ್ದರು. ಇದೀಗ ಭಾರತೀಯ ಪುರಾತತ್ವ ಇಲಾಖೆ ಅಡಿಯಲ್ಲಿ ಈ ದೇವಸ್ಥಾನ ನಿರ್ವಹಣೆಯಾಗುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
ಸಿಎಂ ಕುರ್ಚಿಗೆ 500 ಕೋಟಿ, ಸ್ಫೋಟಕ ಹೇಳಿಕೆ ಬೆನ್ನಲ್ಲೇ ಸಿಧು ಪತ್ನಿ ಕಾಂಗ್ರೆಸ್‌ನಿಂದ ಅಮಾನತು