80 ವರ್ಷದ ಅಜ್ಜಿ ಮೇಲೆ ಅತ್ಯಾಚಾರ ಎಸಗಿದ 22ರ ಸಂಬಂಧಿಕ ಯುವಕ!

Published : Mar 30, 2024, 06:32 PM IST
80 ವರ್ಷದ ಅಜ್ಜಿ ಮೇಲೆ ಅತ್ಯಾಚಾರ ಎಸಗಿದ 22ರ ಸಂಬಂಧಿಕ ಯುವಕ!

ಸಾರಾಂಶ

80 ವರ್ಷದ ಅಜ್ಜಿಯ ಮೇಲೆ 22 ವರ್ಷದ ಸಂಬಂಧಿಕ ಹುಡುಗನೇ ಅತ್ಯಾಚಾರವೆಸಗಿದ ಘಟನೆ ವರದಿಯಾಗಿದೆ.

ಕಾನ್ಪುರ: ಇಲ್ಲಿನ ಬಿಲ್ಹಾಪುರ ಪ್ರದೇಶದಲ್ಲಿ 80 ವರ್ಷದ ಅಜ್ಜಿಯ ಮೇಲೆ 22 ವರ್ಷದ ಸಂಬಂಧಿಕ ಹುಡುಗನೇ ಅತ್ಯಾಚಾರವೆಸಗಿದ ಘಟನೆ ವರದಿಯಾಗಿದೆ. ಅಮಿತ್ ಗೌತಮ್ ಎಂಬಾತನನ್ನು ಪೋಲೀಸರು ಬಂಧಿಸಿದ್ದಾರೆ. 

ಪೋಲೀಸ್ ಮೂಲಗಳ ಪ್ರಕಾರ, ಕಳೆದ ಗುರುವಾರ ರಾತ್ರಿ ಅಜ್ಜಿಯು ತನ್ನ ಮನೆಯಲ್ಲಿ ನಿದ್ರಿಸುತ್ತಿದ್ದ ಸಮಯದಲ್ಲಿ ಮನೆಗೆ ನುಗ್ಗಿ ಬಂದ ಯುವಕ ಅತ್ಯಾಚಾರ ಎಸಗಿದ್ದಾನೆ. ಆತ ಅಜ್ಜಿಗೆ ಹೊಡೆದಿದ್ದು ಅಜ್ಜಿಯ ಹಲ್ಲು ಮುರಿದಿದೆ. ಅಜ್ಜಿ ಕೂಗಿಕೊಳ್ಳುತ್ತಿದ್ದಂತೆ ಅಪರಾಧಿಯು ಗೋಡೆ ಹಾರಿ ಓಡಿ ಹೋಗಿದ್ದಾನೆ. 


 

ಅಪರಾಧಿಯ ವಿರುದ್ಧ ಐಪಿಸಿ ಸೆಕ್ಷನ್ 376(ಅತ್ಯಾಚಾರ), 325(ಸುಖಾಸುಮ್ಮನೆ ನೋವುಂಟು ಮಾಡಿದ್ದಕ್ಕೆ ಶಿಕ್ಷೆ), 452 (ಒಬ್ಬರಿಗೆ ತೊಂದರೆ ಕೊಡಲು ಸಜ್ಜಾಗಿ ಮನೆಗೆ ನುಗ್ಗಿ ಬರುವುದು)ರ ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ.  

ತನಿಖೆಯಲ್ಲಿ ಅಜ್ಜಿಯು ಯುವಕನಿಗೆ ಸಂಬಂಧದಲ್ಲೂ ಅಜ್ಜಿಯೇ ಆಗಬೇಕಿದ್ದು ಇಬ್ಬರೂ ಒಂದೇ ಪ್ರದೇಶದಲ್ಲಿ ವಾಸಿಸುತ್ತಾರೆ ಎಂಬುದು ತಿಳಿದು ಬಂದಿದೆ. ಯುವಕನು ಕೂಲಿ ಕೆಲಸ ಮಾಡುತ್ತಿದ್ದು, ಅತ್ಯಾಚಾರಕ್ಕೂ ಮುನ್ನ ಗೆಳೆಯರ ಜೊತೆ ಕಂಠಮಟ್ಟ ಕುಡಿದಿದ್ದ. ಶುಕ್ರವಾರ ಆತನನ್ನು ಕೋರ್ಟ್‌ಗೆ ಹಾಜರು ಪಡಿಸಿದ್ದು, ಜೈಲಿಗೆ ಕಳುಹಿಸಲಾಗಿದೆ. 

----

ಹೆಣ್ಮಕ್ಕಳಿಗೆ ಕರ್ನಾಟಕ ಸೇಫಾ? ಪ್ರತಿ ಎರಡು ದಿನಕ್ಕೆ ರಾಜ್ಯದಲ್ಲಿ ಮೂರು ರೇಪ್‌!

ಕರ್ನಾಟಕ ರಾಜ್ಯ ಪೊಲೀಸ್‌ 2024ರ ಜನವರಿ ತಿಂಗಳ ಕ್ರೈವ್‌ ರಿವಿವ್ಯೂ ವರದಿಯನ್ನು ಪ್ರಕಟ ಮಾಡಿದೆ. ಜನವರಿ ತಿಂಗಳೊಂದರಲ್ಲೇ ಕರ್ನಾಟಕದಲ್ಲಿ ಮಹಿಳೆಯರ ಮೇಲೆ 1596 ಅಪರಾಧ ಘಟನೆಗಳಾಗಿವೆ. ಪ್ರತಿ ಎರಡು ದಿನಕ್ಕೊಮ್ಮೆ ರಾಜ್ಯದಲ್ಲಿ 3 ರೇಪ್‌ ಕೇಸ್‌ಗಳು ವರದಿಯಾಗುತ್ತಿದೆ. ಕರ್ನಾಟಕದಲ್ಲಿ ಒಂದೇ ತಿಂಗಳಲ್ಲಿ ಮಹಿಳೆಯರ ಮೇಲೆ 1500ಕ್ಕೂ ಅಧಿಕ ಅಪರಾಧ ಘಟನೆಗಳು ವರದಿಯಾಗಿದೆ. ಜನವರಿ ತಿಂಗಳಲ್ಲಿ ದಾಖಲಾದ 50 ರೇಪ್‌ಗಳ ಪೈಕಿ, ಒಂದು ಕಸ್ಟೋಡಿಯಲ್‌ ರೇಪ್‌ ಕೇಸ್‌ ಆಗಿದ್ದರೆ, ಎರಡು ಗ್ಯಾಂಗ್‌ರೇಪ್‌ ಕೇಸ್‌ಗಳಾಗಿವೆ. ಉಳಿದ 47 ಕೇಸ್‌ಗಳು, ಇತರ ಮಾದರಿಯ ರೇಪ್‌ ಕೇಸ್‌ಗಳು ಎಂದು ವರದಿಯಲ್ಲಿ ತಿಳಿಸಲಾಗಿದೆ. ಕಳೆದ ವರ್ಷದ ಜನವರಿಗೆ ಹೋಲಿಸಿದರೆ, ಈ ವರ್ಷದ ಜನವರಿಯಲ್ಲಿ ರೇಪ್‌ ಕೇಸ್‌ಗಳ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. ಕಳೆದ ವರ್ಷದ ಜನವರಿಯಲ್ಲಿ ಒಟ್ಟು 29 ಕೇಸ್‌ಗಳು ದಾಖಲಾಗಿದ್ದರೆ, ಈ ವರ್ಷ 50ರ ಗಡಿ ಮುಟ್ಟಿದೆ. ಇದರರ್ಥ ರೇಪ್‌ ಕೇಸ್‌ಗಳಲ್ಲಿ ಶೇ. 72ರಷ್ಟು ಏರಿಕೆ ಕಂಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮೋದಿ-ಪುಟಿನ್‌ ಒಪ್ಪಂದ: 40 ದಿನಗಳಲ್ಲ, ಕೇವಲ 24 ದಿನಗಳಲ್ಲೇ ರಷ್ಯಾಗೆ ತಲುಪಲಿದೆ ಭಾರತದ ಸರಕುಗಳು!
ನಾವ್ಯಾರಿಗೂ ಕಮ್ಮಿ ಇಲ್ಲ ಬ್ರೋ... ಆಹಾ ಭಾರತೀಯ ನಾರಿ ಕುಡಿದು ರಾಪಿಡೋ ಏರಿ ಬಿದ್ದಳು ಕೆಳಗೆ ಜಾರಿ: ವೀಡಿಯೋ