Makar Sankranti: ಇಂದು 1 ಕೋಟಿ ಜನರಿಂದ ಸೂರ್ಯ ನಮಸ್ಕಾರ

Published : Jan 14, 2022, 07:16 AM ISTUpdated : Jan 14, 2022, 07:22 AM IST
Makar Sankranti: ಇಂದು 1 ಕೋಟಿ ಜನರಿಂದ ಸೂರ್ಯ ನಮಸ್ಕಾರ

ಸಾರಾಂಶ

*ಆಯುಷ್‌ ಇಲಾಖೆಯಿಂದ ಜಾಗತಿಕ ಅಭಿಯಾನ *ಸಂಕ್ರಮಣ ಕಾಲ ಸೂರ್ಯನ ಪಥ ಬದಲಿಸುವ ದಿನ *ಸೂರ್ಯನಮಸ್ಕಾರದಿಂದ ರೋಗನಿರೋಧಕ ಶಕ್ತಿ ವೃದ್ಧಿ

ನವದೆಹಲಿ (ಜ. 14): ಮಕರ ಸಂಕ್ರಮಣದ (Makara Sankramana) ಹಿನ್ನೆಲೆಯಲ್ಲಿ ಕೇಂದ್ರ ಆಯುಷ್‌ ಸಚಿವಾಲಯ (Minister of Ayush) ಶುಕ್ರವಾರ ಜಾಗತಿಕ ಬೃಹತ್‌ ‘ಸೂರ್ಯ ನಮಸ್ಕಾರ’ ಕಾರ್ಯಕ್ರಮವನ್ನು ಆಯೋಜಿಸಿದೆ. ಇದರಲ್ಲಿ ವಿಶ್ವದಾದ್ಯಂತ ಕನಿಷ್ಠ 1 ಕೋಟಿ ಜನರು ಭಾಗಿಯಾಗುವ ನಿರೀಕ್ಷೆ ಇದೆ ಎಂದು ಕೇಂದ್ರ ಆಯುಷ್‌ ಖಾತೆ ಸಚಿವ ಸರ್ಬಾನಂದ ಸೋನೋವಾಲ್‌ (Sarbananda Sonowal) ಹೇಳಿದ್ದಾರೆ.

ಸ್ವಾತಂತ್ರ್ಯದ ಸ್ವರ್ಣಮಹೋತ್ಸವ ಸಂಭ್ರಮಾಚರಣೆಯ ಭಾಗವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಅದರಲ್ಲೂ ಪ್ರಸಕ್ತ ವಿಶ್ವವನ್ನು ಕಾಡುತ್ತಿರುವ ಕೋವಿಡ್‌ ಸಾಂಕ್ರಾಮಿಕದ ವೇಳೆ ಸೂರ್ಯ ನಮಸ್ಕಾರ ಹೆಚ್ಚು ಪ್ರಸ್ತುತವಾಗಿದೆ. ಸೂರ್ಯನ ಕಿರಣಗಳಿಗೆ ಮೈಒಡ್ಡಿದರೆ ವಿಟಮಿನ್‌-ಡಿ ವೃದ್ಧಿಯಾಗುತ್ತದೆ. ವೈದ್ಯರೇ ಇದನ್ನು ದೃಢಪಡಿಸಿದ್ದಾರೆ. ಇದರಿಂದ ಈಗಿನ ಕೊರೋನಾದಂಥ ಪಿಡುಗಿನ ಸಂದರ್ಭದಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಯಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.

ಇದನ್ನೂ ಓದಿ:  ಪ್ರತಿದಿನ ಸೂರ್ಯ ನಮಸ್ಕಾರ ಮಾಡುವುದರಿಂದೇನು ಪ್ರಯೋಜನ?

ಇದಲ್ಲದೆ, ಜಾಗತಿಕ ಹವಾಮಾನ ಬದಲಾವಣೆ, ತಾಪಮಾನ ಏರಿಕೆಯ ಸಂದೇಶ ನೀಡಲೂ ಸೂರ್ಯ ನಮಸ್ಕಾರ ಆಯೋಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಸೂರ್ಯನಮಸ್ಕಾರವು 8 ಆಸನಗಳ ‘ಸೆಟ್‌’ ಆಗಿದ್ದು, ದೇಹ ಹಾಗೂ ಮನಸ್ಸಿನ ಸಂಯೋಜನೆಯೊಂದಿಗೆ 12 ಹೆಜ್ಜೆಗಳನ್ನು ಇರಿಸಿ ಮಾಡಲಾಗುತ್ತದೆ. ಬೆಳಗ್ಗೆ ಸೂರ್ಯ ಉದಯಿಸುವ ಹೊತ್ತಿಗೆ ಹೆಚ್ಚಾಗಿ ಇದನ್ನು ಮಾಡಲಾಗುತ್ತದೆ.

ಪಿಯು ಕಾಲೇಜುಗಳಲ್ಲಿ ಸೂರ್ಯ ನಮಸ್ಕಾರ

ಕೇಂದ್ರ ಸರ್ಕಾರದ (Govt Of India)  ಆದೇಶದಂತೆ ರಾಜ್ಯದ ಎಲ್ಲ ಪದವಿ ಪೂರ್ವ ಕಾಲೇಜುಗಳಲ್ಲಿ ಹೊಸ ವರ್ಷ 2022ರ (New Year 2022 ) ಜನವರಿ 1ರಿಂದ ಫೆಬ್ರವರಿ 7 ರವರೆಗೆ ‘ಸೂರ್ಯ ನಮಸ್ಕಾರ’ (Surya namaskar)  ಆಯೋಜಿಸುವಂತೆ ರಾಜ್ಯ ಪದವಿ ಪೂರ್ವ ಶಿಕ್ಷಣ ಇಲಾಖೆ ಆದೇಶಿಸಿದೆ.  ಅಲ್ಲದೆ, ಜನವರಿ 26ರ ಗಣರಾಜ್ಯೋತ್ಸವದ ದಿನ ಸುವರ್ಣ ಧ್ವಜದ ಎದುರು ‘ಸಂಗೀತದೊಂದಿಗೆ ಸೂರ್ಯ ನಮಸ್ಕಾರ’ ಆಯೋಜಿಸಬೇಕು ಎಂದು ಕೂಡ ಸೂಚನೆ ನೀಡಿದೆ.

ಇದನ್ನೂ ಓದಿ: 10 ನಿಮಿಷ ಸೂರ್ಯ ನಮಸ್ಕಾರದಿಂದ ಕೊರೋನಾ ಕಾಲದ ಟೆನ್ಷನ್‌ ಕಡಿಮೆ!

75ನೇ ಸ್ವಾತಂತ್ರ್ಯೋತ್ಸವದ (Independence Day) ಅಮೃತ ಮಹೋತ್ಸವದ ಅಂಗವಾಗಿ ‘ಸೂರ್ಯ ನಮಸ್ಕಾರ’ ಕಾರ್ಯಕ್ರಮ ಆಯೋಜಿಸುವಂತೆ ಕೇಂದ್ರ ಶಿಕ್ಷಣ ಸಚಿವಾಲಯವು ಎಲ್ಲ ರಾಜ್ಯಗಳ ಶಿಕ್ಷಣ ಇಲಾಖೆಗಳ ಮುಖ್ಯಸ್ಥರಿಗೆ ಡಿಸೆಂಬರ್‌ 16 ರಂದು ಪತ್ರದ ಮೂಲಕ ಸೂಚನೆ ನೀಡಿತ್ತು. ಈ ಆದೇಶದಂತೆ ‘ಸೂರ್ಯ ನಮಸ್ಕಾರ’ ಕಾರ್ಯಕ್ರಮ ಮಾಡಲು ಪದವಿ ಪೂರ್ವ ಶಿಕ್ಷಣ ಇಲಾಖೆ (EducationDepartment)  ಇದೀಗ ರಾಜ್ಯದ ಎಲ್ಲ ಪದವಿ ಪೂರ್ವ ಕಾಲೇಜುಗಳಿಗೆ (PU Colleges) ಸೂಚಿಸಿದೆ. ರಾಜ್ಯದ (Karnataka) ಎಲ್ಲ ಜಿಲ್ಲೆಗಳ ವ್ಯಾಪ್ತಿಯ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು (Students) ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಬಳಿಕ ಕಾರ್ಯಕ್ರಮದ ಕ್ರೋಡೀಕೃತ ಮಾಹಿತಿಯನ್ನು ಇಲಾಖೆಯ ಶೈಕ್ಷಣಿಕ ವಿಭಾಗಕ್ಕೆ ನೀಡಬೇಕು ಎಂದು ಜಿಲ್ಲಾ ಉಪನಿರ್ದೇಶಕರಿಗೆ ಪಿಯು ಇಲಾಖೆ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

ಸೂರ್ಯ ನಮಸ್ಕಾರವು ವಿದ್ಯಾರ್ಥಿಗಳ (Students) ಆರೋಗ್ಯ ವೃದ್ಧಿಗೆ ಹಾಗೂ ಮನೋಬಲ ಹೆಚ್ಚಿಸುವುದಕ್ಕೆ ನೆರವಾಗಲಿದೆ. ಜ.1ರಿಂದ ಫೆ.7ರವರೆಗಿನ 38 ದಿನಗಳ ಪೈಕಿ 21 ದಿನ ಬೆಳಗ್ಗೆ ವಿದ್ಯಾರ್ಥಿಗಳು ಸಮಾವೇಶಗೊಂಡಾಗ ಸೂರ್ಯನಮಸ್ಕಾರ ಮಾಡಬೇಕಿದೆ. ಈ 21 ದಿನಗಳಲ್ಲಿ ಪ್ರತಿ ದಿನ 13 ಸೂರ್ಯ ನಮಸ್ಕಾರಗಳಂತೆ ಒಟ್ಟು 273 ಸೂರ್ಯ ನಮಸ್ಕಾರಗಳನ್ನು ಮಾಡಿದವರಿಗೆ ಇ-ಪ್ರಮಾಣ ಪತ್ರ ನೀಡುವುದಾಗಿ ರಾಷ್ಟ್ರೀಯ ಯೋಗಾಸನ ಸ್ಟೋಟ್ಸ್‌ರ್‍ ಫೆಡರೇಷನ್‌ ತಿಳಿಸಿದೆ ಎಂದು ಪಿಯು ಇಲಾಖೆ ಅಧಿಕಾರಿಗಳು ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!