ಜಮ್ಮು ಕಾಶ್ಮೀರ BJP ಮುಖಂಡರ ಕೊಲೆ ಪ್ರೀ ಪ್ಲಾನ್..? 10 ಜನ ಪೊಲೀಸರ ಬಂಧನ

Suvarna News   | Asianet News
Published : Jul 09, 2020, 01:52 PM ISTUpdated : Jul 09, 2020, 02:10 PM IST
ಜಮ್ಮು ಕಾಶ್ಮೀರ BJP ಮುಖಂಡರ ಕೊಲೆ ಪ್ರೀ ಪ್ಲಾನ್..? 10 ಜನ ಪೊಲೀಸರ ಬಂಧನ

ಸಾರಾಂಶ

ಜಮ್ಮು ಕಾಶ್ಮೀರದ ಬಿಜೆಪಿ ಮುಖಂಡ ಶೇಖ್ ವಾಸಿಂ ಬಾರಿ ಹಾಗೂ ಅವರ ಕುಟುಂಬದ ಇನ್ನಿಬ್ಬರು ಕುಟುಂಬ ಸದಸ್ಯರು ಕೊಲೆಯಾದ ಬೆನ್ನಲ್ಲೇ ಅವರ ಭದ್ರತೆ ಕರ್ತವ್ಯಕ್ಕೆ ನಿಯೋಜಿತರಾಗಿದ್ದ 10 ಜನ ಪೊಲೀಸರನ್ನು ಬಂಧಿಸಲಾಗಿದೆ.

ಶ್ರೀನಗರ(ಜು.09): ಜಮ್ಮು ಕಾಶ್ಮೀರದ ಬಿಜೆಪಿ ಮುಖಂಡ ಶೇಖ್ ವಾಸಿಂ ಬಾರಿ ಹಾಗೂ ಅವರ ಕುಟುಂಬದ ಇನ್ನಿಬ್ಬರು ಕುಟುಂಬ ಸದಸ್ಯರು ಕೊಲೆಯಾದ ಬೆನ್ನಲ್ಲೇ ಅವರ ಭದ್ರತೆ ಕರ್ತವ್ಯಕ್ಕೆ ನಿಯೋಜಿತರಾಗಿದ್ದ 10 ಜನ ಪೊಲೀಸರನ್ನು ಬಂಧಿಸಲಾಗಿದೆ.

ಜಮ್ಮು ಕಾಶ್ಮೀರದ ಬಿಜೆಪಿ ಮುಖಂಡ ಶೇಖ್ ವಾಸಿಂ ಬರಿ ಹಾಗೂ ಇಬ್ಬರು ಕುಟುಂಬಸ್ಥರು ಬುಧವಾರ ರಾತ್ರಿ ಕೊಲೆಯಾಗಿದ್ದರು. ಪಾಕಿಸ್ತಾನ ಮೂಲದ ಜೈಷ್‌-ಇ-ಮೊಹಮ್ಮದ್ ಈ ಕೊಲೆಯನ್ನು ತಾವೇ ಮಾಡಿರುವುದಾಗಿ ಒಪ್ಪಿಕೊಂಡಿದೆ. ದಾಳಿಯ ಹಿಂದಿ ಉಗ್ರರನ್ನು ಗುರುತಿಸಲಾಗಿದೆ ಎಂದು ಜಮ್ಮು ಕಾಶ್ಮೀರದ ಪೊಲೀಸ್ ನಿರ್ದೇಶಕ ದಿಲ್ ಭಾಗ್ ಸಿಂಗ್ ತಿಳಿಸಿದ್ದಾರೆ.

ಗಾಳಿಯಲ್ಲಿ ಕೊರೋನಾ..! ಮನೆಯಲ್ಲೇ ಇದ್ರೂ ಹರಡುತ್ತಾ ಸೋಂಕು..? ವಿಶ್ವಸಂಸ್ಥೆ ಹೇಳಿದ್ದಿಷ್ಟು..!

ರೆಸಿಸ್ಟೆನ್ಸ್ ಫ್ರಂಟ್ ಎಂಬ ಹೊಸ ಉಗ್ರ ಸಂಘಟನೆ ಬಿಜೆಪಿ ಮುಖಂಡರ ಮೇಲಿನ ದಾಳಿಯ ಹೊಣೆ ಹೊತ್ತಿದ್ದು, ಈ ಸಂಘಟನೆ ಜೈಷ್, ಲಷ್ಕರ್ ಈ ತೊಯ್ಬಾ ಹಾಗೂ ಹಿಜ್ಬುಲ್ ಮುಜಾಹಿದೀನ್ ಭಾಗವೆಂದು ಗುರುತಿಸಲಾಗಿದೆ.

ಶೇಖ್ ವಾಸಿಂ ಬಾರಿ, ಅವರ ತಂದೆ ಬಶೀರ್ ಅಹ್ಮದ್, ಸಹೋದರ ಉಮರ್ ಬಶೀರ್ ಬಂಡೀಪುರದ ಜಿಲ್ಲೆಯ ತಮ್ಮ ಮನೆಯಲ್ಲಿ ಕೊಲೆಯಾಗಿದ್ದಾರೆ. ಮೂವರೂ ಬಿಜೆಪಿ ಮುಖಂಡರಾಗಿದ್ದರು. ಇವರೆಲ್ಲರಿಗೂ ಭದ್ರತೆಗೆ ಸಿಬ್ಬಂದಿ ಇದ್ದರೂ ದಾಳಿ ನಡೆದ ಸಂದರ್ಬದಲ್ಲಿ ಅವರು ಸ್ಥಳದಲ್ಲಿರಲಿಲ್ಲ.

ಎಚ್ಚರ..ಎಚ್ಚರ..! ಗಾಳಿಯಿಂದ್ಲೂ ಹರಡುತ್ತೆ ಕೊರೊನಾ; ವಿಶ್ವಸಂಸ್ಥೆಯೂ ಒಪ್ಪಿದೆ..!

ಅವರ ಮನೆಯ ಗ್ರೌಂಡ್‌ ಫ್ಲೋರ್‌ನಲ್ಲಿದ್ದ ಶಾಪ್‌ನಲ್ಲಿದ್ದಾಗ ರಾತ್ರಿ 8.30ರ ವೇಳೆಗೆ ಗುಂಡಿನ ದಾಳಿಯಾಗಿದೆ. ಉಗ್ರನೊಬ್ಬ ಬೈಕ್‌ನಲ್ಲಿ ಬಂದು ಸೈಲೆನ್ಸರ್ ರಿವಾಲ್ವರ್‌ನಲ್ಲಿ ಶೂಟ್ ಮಾಡುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ದಾಳಿ ನಡೆದ ಸಂದರ್ಭ ಭದ್ರತಾ ಸಿಬ್ಬಂದಿ ಫಸ್ಟ್‌ ಫ್ಲೋರ್‌ನಲ್ಲಿದ್ದರು ಎನ್ನಲಾಗಿದೆ.

ಕರ್ತವ್ಯ ಕೋಪ ಹಾಗೂ ಮುಖಂಡರ ಪ್ರಾಣ ರಕ್ಷಣೆ ಮಾಡಲು ವಿಫಲರಾಗಿರುವ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಇದೊಂದು ಪೂರ್ವ ನಿಯೋಜಿತ ಕೊಲೆಯಂತೆ ಕಾಣಿಸುತ್ತದೆ. ಬಹಳ ಹತ್ತಿರದಿಂದ ಶೂಟ್ ಮಾಡಲಾಗಿದೆ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ವಿಜಯ್ ಕುಮಾರ್ ತಿಳಿಸಿದ್ದಾರೆ.

8 ಪೊಲೀಸರ ಹತ್ಯೆಗೈದ ರೌಡಿ ಶೀಟರ್ ದುಬೆ ಆಪ್ತ ಎನ್‌ಕೌಂಟರ್‌ಗೆ ಬಲಿ!

ಬುಧವಾರ ರಾತ್ರಿ ಪ್ರಧಾನಿ ಮೋದಿ ಕೊಲೆಯಾದ ಬಿಜೆಪಿ ಮುಖಂಡರಿಗೆ ಕರೆ ಮಾಡಿ ಸಾಂತ್ವನ ಹೇಳಿದ್ದರು. ಬಿಜೆಪಿ ಮುಖಂಡರ ತ್ಯಾಗ ವ್ಯರ್ಥವಾಗುವುದಿಲ್ಲ ಎಂದು ಬಿಜೆಪಿ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬಾಲಕಿಯ ಮುಗ್ದ ನಗುವಿಗೆ ಫಿದಾ, ಸರ್ಕಾರಿ ಶಾಲಾ ಟೀಚರ್ ಹಂಚಿಕೊಂಡ ವಿಡಿಯೋ ವೈರಲ್
ಇಂಡಿಗೋ ಅವಾಂತರ: ನಾಲ್ವರು ಫ್ಲೈಟ್ ಆಪರೇಷನ್ ಇನ್ಸ್‌ಪೆಕ್ಟರ್‌ಗಳ ವಜಾ ಮಾಡಿದ ಡಿಜಿಸಿಎ