ಕೊರೋನಾ ಗೆದ್ದ 107ರ ವೃದ್ಧೆ..! ಕೋವಿಡ್‌-19ನಿಂದ ಚೇತರಿಸಿದ ದೇಶದ ಅತಿ ಹಿರಿಯ ವ್ಯಕ್ತಿ

By Kannadaprabha News  |  First Published Jul 9, 2020, 12:02 PM IST

ಕೊರೋನಾ ವೈರಸ್‌ ಬಗ್ಗೆ ಆತಂಕ ಹೆಚ್ಚುತ್ತಿರುವ ನಡುವೆಯೇ ದೆಹಲಿಯಲ್ಲಿ 107 ವರ್ಷದ ಮುಖ್ತಾರ್‌ ಅಹ್ಮದ್‌ ಎಂಬುವರು ಸೋಂಕಿನಿಂದ ಗುಣಮುಖರಾಗಿದ್ದಾರೆ.


ನವದೆಹಲಿ(ಜು.09): ಕೊರೋನಾ ವೈರಸ್‌ ಬಗ್ಗೆ ಆತಂಕ ಹೆಚ್ಚುತ್ತಿರುವ ನಡುವೆಯೇ ದೆಹಲಿಯಲ್ಲಿ 107 ವರ್ಷದ ಮುಖ್ತಾರ್‌ ಅಹ್ಮದ್‌ ಎಂಬುವರು ಸೋಂಕಿನಿಂದ ಗುಣಮುಖರಾಗಿದ್ದಾರೆ.

ಇವರು ಕೋವಿಡ್‌-19ನಿಂದ ಚೇತರಿಸಿಕೊಂಡಿಸುವ ದೇಶದ ಅತಿ ಹಿರಿಯ ವ್ಯಕ್ತಿ ಎಂದು ಹೇಳಲಾಗುತ್ತಿದೆ. ಕೊರೋನಾ ಸೋಂಕು ದೃಢಪಟ್ಟಹಿನ್ನೆಲೆಯಲ್ಲಿ ಕಳೆದ ತಿಂಗಳು ದೆಹಲಿಯ ರಾಜೀವ್‌ ಗಾಂಧಿ ಸೂಪರ್‌ ಸೆಷಾಲಿಟಿ ಆಸ್ಪತ್ರೆಗೆ ಅಹ್ಮದ್‌ ದಾಖಲಾಗಿದ್ದರು.

Tap to resize

Latest Videos

ಏನೂ ಆಗಲ್ಲ ಕಣ್ರಪ್ಪ, ಒಂದಿಷ್ಟು ಗಟ್ಟಿ ಮನಸ್ಸು ಮಾಡ್ಕೊಳ್ಳಿ: ಕೊರೋನಾ ಮಣಿಸಿದ 96ರ ಅಜ್ಜಿ!

17 ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಸಂಪೂರ್ಣ ಗುಣಮುಖರಾಗಿ ಸದ್ಯ ಮನೆಗೆ ಹಿಂದಿರುಗಿದ್ದಾರೆ. ವೈದ್ಯರ ಸಲಹೆ ಮೇರೆಗೆ ಮುಂಜಾಗ್ರತಾ ದೃಷ್ಟಿಯಿಂದ ಈಗಲೂ ಮನೆಯವರಿಂದ ಸಾಮಾಜಿಕ ಅಂತರ ಕಾಪಾಡಿಕೊಳ್ಳುತ್ತಿದ್ದಾರೆ.

ಚಿತ್ರದುರ್ಗದ ಹಿರಿಯೂರಿನ ವೇದಾವತಿ ನಗರ ಬಡಾವಣೆಯ ವರ್ತಕ ಗೋವರ್ಧನ್‌ ಶೆಟ್ಟಿಅವರ ತಾಯಿಯೇ ಈ ವೃದ್ಧೆ ಗೋವಿಂದಮ್ಮ ಕೊರೋನಾ ಜಯಿಸಿದ ರಾಜ್ಯದ ಎರಡನೇ ಅತೀ ಹಿರಿಯ ಮಹಿಳೆ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದರು. ‘ಏನೂ ಆಗಲ್ಲ ಕಣ್ರಪ್ಪ, ಹುಷಾರಾಗ್ತೀರಾ. ಒಂದಿಷ್ಟುಗಟ್ಟಿಮನಸ್ಸು ಮಾಡ್ಕೊಳ್ಳಿ. ಆಸ್ಪತ್ರೆಯಲ್ಲಿ ಖುಷಿಯಾಗಿ ಇರೋದನ್ನು ಕಲೀರಿ ಎಂದಿದ್ದರು ಕೊರೋನಾ ಗೆದ್ದ ಅಜ್ಜಿ.

click me!