ಭಾರತ ಸ್ವಾತಂತ್ರ್ಯಕ್ಕಾಗಿ ಬಂದೂಕು ಫ್ಯಾಕ್ಟರಿ ತೆರೆದಿದ್ದ ಇಂಚಗೇರಿ ಮಠಾಧೀಶ!

By Suvarna News  |  First Published Jun 10, 2022, 4:51 PM IST
  •  ಬ್ರೀಟಿಷರ ವಿರುದ್ಧ ಹೋರಾಟ ಮಾಡಿದ್ದ ಇಂಚಗೇರಿ ಮಠಾಧೀಶ..!
  •  ಭಾರತ ಸ್ವಾತಂತ್ರ್ಯಕ್ಕಾಗಿ ಬಂದೂಕು ಫ್ಯಾಕ್ಟರಿ ತೆರೆದಿದ್ದ ಮುರುಗೋಡು ಮಹಾದೇವಪ್ಪ..!
  •  ನಾಳೆ ನಡೆದುದಾಡುವ ದೇವರ ಪುಣ್ಮಸ್ಮರಣೆ ದಿನ..!

ವರದಿ: ಷಡಕ್ಷರಿ ಕಂಪೂನವರ್‌ ಏಷ್ಯಾನೆಟ್‌ ಸುವರ್ಣ ನ್ಯೂಸ್

ವಿಜಯಪುರ (ಜೂನ್‌ 10) : ಅವರು ಜಾತ್ಯಾತೀತ ಮಠದ ಮಠಾಧೀಶರು. ಆದ್ರೆ ಅವರ ಜೀವಿತಾವಧಿಯ ತುಂಬೆಲ್ಲ ಮಾಡಿದ್ದು ಬ್ರೀಟಿಷರ ವಿರುದ್ಧದ ಹೋರಾಟ. ತಮ್ಮ ಮಠದ ಸಾವಿರಾರು ಭಕ್ತರನ್ನ ಸ್ವಾತಂತ್ರ್ಯ್ಯ ಹೋರಾಟಕ್ಕೆ ಧುಮುಕಿಸಿದ ರಾಷ್ಟ್ರದ ಏಕೈಕ ಸಂತ ಅನ್ನೋ ಹೆಗ್ಗಳಿಕೆಗೆ ಪಾತ್ರರಾದವರು. ಇವರ ಉಗ್ರ ಸ್ವರೂಪದ ಹೋರಾಟವನ್ನ ಕಂಡ ಬ್ರಿಟಿಷ್ ಅಧಿಕಾರಿಗಳು ಕಂಡಲ್ಲಿ ಗುಂಡಿಕ್ಕಲು ಆದೇಶ ಹೊರಡಿಸಿದ್ರು. ಆದ್ರೆ “ಸತ್ತರೆ ಸ್ವರ್ಗವು, ಗೆದ್ದರೇ ರಾಜ್ಯವು” ಅಂತ ಭಾರತ ಮಾತೆಯನ್ನ ಪರಕೀಯರ ಕಪಿ ಮುಷ್ಟಿಯಿಂದ ಸ್ವತಂತ್ರಗೊಳಿಸಲು ಪ್ರಾಣವನ್ನೆ ಫಣವಾಗಿಟ್ಟಿದ್ರು. ಅಪ್ಪಟ ದೇಶಪ್ರೇಮಿ ಮಹಾದೇವರ ಪುಣ್ಯ ಸ್ಮರಣೆ ಕಾರ್ಯಕ್ರಮ ಈಗ ಇಂಚಗೇರಿ ಮಠದಲ್ಲಿ ನಡೆಯುತ್ತಿದೆ. ದಿನಾಂಕ ಜೂನ್ 9 ರಿಂದ ಶುರುವಾಗಿರುವ ಮಾಧವಾನಂದ (inchageri madhavananda) ಪ್ರಭುಜಿಗಳ ಆರಾಧನೆ, ನಾಳೆ ದಿನಾಂಕ 11 ರಂದು ಪುಷ್ಪವೃಷ್ಠಿಯೊಂದಿಗೆ ಮಂಗಲಗೊಳ್ಳಲಿದೆ.

Tap to resize

Latest Videos

ಸ್ವಾತಂತ್ರ್ಯ್ಯ ಹೋರಾಟದಲ್ಲಿ ಧುಮುಕಿದ ಮಠಾಧೀಶ!
ಸ್ವಾತಂತ್ರ್ಯ (independence) ಹೋರಾಟದಲ್ಲಿ ತನ್ನ ಪಾಲ್ಗೊಂಡ ರಾಷ್ಟ್ರದ ಬೆರಳೆಣಿಕೆ ಮಠಗಳಲ್ಲಿ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಇಂಚಗೇರಿ ಮಠವು ಒಂದು. ತಮ್ಮ ಮಠದ ಸಾವಿರಾರು ಭಕ್ತರನ್ನ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದ ಹೆಗ್ಗಳಿಕೆ ಇದೇ ಮಠದ ಮಠಾಧೀಶರಾಗಿದ್ದ ಮಾಧವಾನಂದ ಪ್ರಭುಜಿಗಳಿಗೆ ಸಲ್ಲುತ್ತೆ. 1935ರ ವೇಳೆಯಲ್ಲಿ ಸ್ವಾತಂತ್ರ್ಯ್ಯ ಹೋರಾಟದಲ್ಲಿ ಪಾಲ್ಗೊಂಡ ಮಾಧವಾನಂದ ಪ್ರಭುಜಿಗಳು ತಮ್ಮೊಂದಿಗೆ 20 ಸಾವಿರಕ್ಕೂ ಅಧಿಕ ಭಕ್ತರನ್ನ ಹೋರಾಟದಲ್ಲಿ ದುಮುಕಿಸಿದ್ದರು.

ಉಗ್ರ ಹೋರಾಟದ ಮೂಲಕ ಬ್ರೀಟಿಷರನ್ನ ಧಿಕ್ಕಾಪಾಲಾಗಿಸಿದ ಮಹಾದೇವರು!
1929 ರ ಎಳೆಯ ಪ್ರಾಯದಲ್ಲೆ ಮಹಾದೇವರು ಹೇಗಾದರು ಮಾಡಿ ಬ್ರಿಟಿಷರ ಹುಟ್ಟಡಗಿಸಲು ನಿರ್ಧರಿಸಿ ತಮ್ಮ ಅನುಯಾಯಿಗಳೊಂದಿಗೆ ಸೇರಿ ಹುಲಕೋಟೆ, ಸಾವಳಗಿ, ಇಂಚಗೇರಿ ಪೊಲೀಸ್ ಠಾಣೆಗಳಿಗೆ ಮುತ್ತಿಗೆ ಹಾಕಿ ಶಸ್ತ್ರಾಸ್ತ್ರಗಳನ್ನ ಅಪಹರಿಸಿದ್ದರು. ಹಲವು ಅಂಚೆ, ನಾಡ ಕಚೇರಿಗೆ ಬೆಂಕಿ ಹಚ್ಚಿದ್ದರು. ಬ್ರಿಟಿಷರ ಸಂಪರ್ಕ ಸಾಧನವಾಗಿದ್ದ ರೈಲು ಹಳಿಗಳನ್ನ ಕಿತ್ತಹಾಕಿ ಠಾಣೆಗಳನ್ನ ಧ್ವಂಸಗೊಳಿಸಿದ್ದರು. ಇನ್ನು ಬ್ರಿಟಿಷರ ಸರ್ಕಾರಕ್ಕೆ ಸೇರಬೇಕಿದ್ದ ಬೊಕ್ಕಸವನ್ನ ದೋಚಿದ್ದು ಆ ಸಮಯದಲ್ಲಿ ಬಾರಿ ಸಾಹಸ ಪ್ರಕರಣವಾಗಿತ್ತು. ಇದರ ಫಲವಾಗಿ 27 ಬಾರಿ ಜೈಲು ವಾಸ ಅನುಭವಿಸಿದ್ದಾರೆ.

ಜೂನ್ 13 ರಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ ರಾಜ್ಯ ಸರಕಾರ

ವಿದೇಶಿ ಪತ್ರಿಕೆಗಳಲ್ಲು ಮಹಾದೇವರ ಹೋರಾಟ ದಾಖಲು!
ಇವತ್ತಿಗು ಈ ಮಠದ ಸಾವಿರಾರು ಅನುಯಾಯಿಗಳು ಕೇಂದ್ರ ಸರ್ಕಾರದ ಸ್ವಾತಂತ್ರ್ಯ್ಯ ಹೋರಾಟಗಾರರಿಗೆ ನೀಡುವ ಪಿಂಚಣಿ ಪಡೆದುಕೊಳ್ತಿದ್ದಾರೆ ಎನ್ನೊದೆ ಸೋಜಿಗ. ಇನ್ನು ಸ್ವಾತಂತ್ರ್ಯ ನಂತರ ಮಠಕ್ಕೆ ಭೇಟಿ ನೀಡಿದ್ದ ಮಹಾತ್ಮ ಗಾಂಧೀಜಿಯವ್ರ ಮೊಮ್ಮಗ ಅರುಣ ಗಾಂಧಿ ಭಾರತ ಸ್ವಾತಂತ್ರ್ಯ್ಯ ಹೋರಾಟಕ್ಕೆ ಮಾಧವಾನಂದರ ಕೊಡುಗೆ ಹಾಗೂ ಮಠದ ಪಾತ್ರದ ಬಗ್ಗೆ ವಿದೇಶಗಳಲ್ಲಿ ಅತ್ಯಧಿಕ ಪ್ರಸಾರ ಉಳ್ಳ “ದಿ ಇಂಪ್ರಿಂಟ್” ಇಂಗ್ಲಿಷ ಪತ್ರಿಕೆಯಲ್ಲಿ ಬರೆದಿದ್ದರು. ಇದನ್ನ ಓದಿನ ಅದೇಷ್ಟೋ ವಿದೇಶಿಗರು ಕೂಡ ಸಧ್ಯ ಮಠದ ಭಕ್ತರಾಗಿದ್ದಾರೆ.

ಸುಭಾಷಚಂದ್ರ ಭೋಸರೊಂದಿಗೆ ಗುಪ್ತ ಸಭೆ ನಡೆಸಿದ್ದ ಶ್ರೀಗಳು!
ವಾಣಿಜ್ಯ ನಗರಿ ಹುಬ್ಬಳ್ಳಿಯ ವೀರಾಪೂರ ಓಣಿಯಲ್ಲಿ ಜನಿಸಿದ ಮಾಧವಾನಂದರು ತಮ್ಮ 22 ನೇ ವಯಸ್ಸಿನಲ್ಲೆ ಸ್ವಾತಂತ್ರ್ಯ ಹೋರಾಟಲ್ಲಿ ಪಾಲ್ಗೊಂಡರು. ಚಲೇ ಜಾವ್ ಚಳುವಳಿ, ಉಪ್ಪಿನ ಸತ್ಯಾಗ್ರಹ, ಗೋವಾ ವಿಮೋಚನೆ ಸೇರಿದಂತೆ ಅನೇಕ ಹೋರಾಟಗಳಲ್ಲಿ ಮಾಧವಾನಂದ ಪ್ರಭುಜಿಗಳ ತಮ್ಮ ಮಠದ ಭಕ್ತರೊಂದಿಗೆ ಪಾಲ್ಗೊಂಡಿದ್ದರು. ಮಹಾತ್ಮಾ ಗಾಂಧೀಜಿ, ಸುಬಾಷ ಚಂದ್ರ ಬೋಸ್ ರೊಂದಗೆ ನಿಕಟ ಸಂಪರ್ಕ ಹೊಂದಿದ್ದರು. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಬಳಿ ಇರುವ ಗಿರೀಶ ಆಶ್ರಮದಲ್ಲಿ ಸ್ವಾತಂತ್ರ್ಯ್ಯ ಹೋರಾಟದ ಕುರಿತಾಗಿ ಮಾಧವಾನಂದ ಪ್ರಭುಜಿಗಳು ನಡೆಸಿದ ಗುಪ್ತ ಸಭೆಯಲ್ಲಿ ಸುಬಾಷಚಂದ್ರ ಬೋಸ್ ಪಾಲ್ಗೊಂಡಿದ್ದರು ಅನ್ನೋದು ಗಮನಾರ್ಹ.

ಪಠ್ಯಪುಸ್ತಕದಲ್ಲಿ ರಾಜಕಾರಣ ಮಾಡಬಾರದು : Basavaraj Horatti

ಕಂಡಲ್ಲಿ ಗುಂಡಿಕ್ಕುವ ಆದೇಶ ಹೊರಡಿಸಿದ್ದ ಬ್ರಿಟಿಷ್‌ ಸರ್ಕಾರ!
1938 ರಲ್ಲಿ ಸ್ವಾತಂತ್ರ್ಯ ಹೋರಾಟ ಉಗ್ರ ಸ್ವರೂಪ ಪಡೆದಾಗ ಮಾಧವಾನಂದರು ತಮ್ಮ ಮಠದ ಭಕ್ತರೊಂದಿಗೆ ಜೈಲು ವಾಸ ಅನುಭವಿಸಿದ್ದರು. ಆ ಸಂದರ್ಭದಲ್ಲಿ ಮಾಧವಾನಂದರ ಉಗ್ರ ಸ್ವರೂಪದ ಹೋರಾಟ ಕಂಡ ಬ್ರಿಟಿಷ್ ಸರ್ಕಾರ ಅವರ  ಮೇಲೆ ಕಂಡಲ್ಲಿ ಗುಂಡಿಕ್ಕುವ ಆದೇಶ ಹೊರಡಿಸಿತ್ತು. ಅದ್ರಂತೆ ಸ್ವಾತಂತ್ರ್ಯ್ಯ ಹೋರಾಟಕ್ಕಾಗಿ ತಮ್ಮ ಭಕ್ತರನ್ನ ಒಟ್ಟು ಗೂಡಿಸಲು ಮಾಧವಾನಂದರು ತಮ್ಮ ವಾಹನದಲ್ಲಿ ಹೊರಟಿದ್ದಾಗ ಬೆಳಗಾವಿ ಜಿಲ್ಲೆಯ ಗೋಕಾಕ್ ಬಳಿಯಲ್ಲಿ ಬ್ರಿಟಿಷ್ ಪೊಲೀಸರು ಇವರ ಮೇಲೆ ಗುಂಡು ಹಾರಿಸಿದ್ರು. ಹಲವು ಸುತ್ತು ಗಂಡು ಹಾರಿಸಿದ ಪೊಲೀಸರು ಬಂದು ನೋಡಿದಾಗ ಅಲ್ಲಿ ಮಾಧವಾನಂದರು ಇರಲೆ ಇಲ್ಲ. ಅವರು ಅಂದುಕೊಂಡಂತೆ ಗೋಕಾಕ ಬಳಿಯ ಹಳ್ಳಿಯೊಂದ್ರಲ್ಲಿ ಸ್ವಾತಂತ್ರ್ಯ್ಯ ಹೋರಾಟದ ಉದ್ದೇಶಕ್ಕಾಗಿ ನಡೆದ ಗುಪ್ತ ಸಭೆಯಲ್ಲಿ ಪಾಲ್ಗೊಂಡಿದ್ದರು. ಇದನ್ನ ಮಾಧವಾನಂದ ಪ್ರಭುಜಿಗಳ ಪವಾಡ ಎನ್ನಲಾಗಿದೆ. ಈ ಚಮತ್ಕಾರವನ್ನ ಕಂಡಿದ್ದ ಬ್ರಿಟಿಷ್ ಪೊಲೀಸರು ಮತ್ಯಾವತ್ತು ಮಾಧವಾನಂದರ ಮೇಲೆ ಗುಂಡು ಹಾರಿಸುವ ಪ್ರಯ್ನಕ್ಕೆ ಹೋಗಲಿಲ್ಲವಂತೆ. ಹೀಗಾಗಿ ಮಾಧವಾನಂದರ ಅನುಯಾಯಿಗಳು ಅವರನ್ನ ದೇವರು ಅಂತಲೇ ಸಂಬೋದಿಸುತ್ತಿದ್ದರು. ಈಗಲು ಮಠದಲ್ಲಿ ಅದು ಜಾರಿಯಲ್ಲಿದೆ..

ಮೊಮ್ಮಗಳನ್ನೆ ಮುಸ್ಲಿಂ ವ್ಯಕ್ತಿಗೆ ಕೊಟ್ಟು ಮದುವೆ ಮಾಡಿದ ದೇವರು!
ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಉಗ್ರ ಸ್ವರೂಪದ ಹೋರಾಟದಿಂದಲೆ ಬ್ರೀಟಿಷರ ಪಾಲಿಗೆ ಸಿಂಹ ಸ್ವಪ್ನವಾಗಿದ್ದ ಮಾಧವಾನಂದ ಪ್ರಬುಜಿಗಳು ಸಮಾಜದಲ್ಲಿಯ ಜಾತೀಯತೆ ಹೋಗಲಾಡಿಸಲು 20 ಸಾವಿರಕ್ಕೂ ಅಧಿಕ ಅಂತರ್ ಜಾತಿ, ಅಂತರ್ ಧರ್ಮಗಳ ಮದುವೆ ಮಾಡಿದ್ದಾರೆ. ಸ್ವತಃ ತಮ್ಮ ಮೊಮ್ಮಗಳನ್ನ ಮುಸ್ಲಿಂ ಸಮೂದಾಯದ ಯುವಕನಿಗೆ ಮದುವೆ ಮಾಡಿಕೊಟ್ಟಿದ್ದಾರೆ. ಈ ಮೂಲಕ ಸಮಾಜದಲ್ಲಿನ ಮೇಲು-ಕೀಳು, ಜಾತೀಯತೆ ಹೋಗಲಾಡಿಸಿ ಇಂಚಗೇರಿ ಮಠವನ್ನ ಜಾತ್ಯಾತೀತ ಮಠವನ್ನಾಗಿ ರೂಪಿಸಿದ ಕೀರ್ತಿ ಮಾಧವಾನಂದ ಪ್ರಭುಜಿಗಳಿಗೆ ಸಲ್ಲುತ್ತೆ.

click me!