ಅಂಬಾಟಿ ರಾಯುಡುಗೆ ಅನ್ಯಾಯ ಆಗಿದೆ. ನಾಲ್ಕನೇ ಕ್ರಮಾಂಕಕ್ಕೆ ರಾಯುಡು ಬದಲು ಇತರ ಆಟಗಾರರನ್ನು ಆಯ್ಕೆ ಮಾಡಿದ್ದೇ ಟೀಂ ಇಂಡಿಯಾ ಬ್ಯಾಟಿಂಗ್ ಸಮಸ್ಯೆಗೆ ಕಾರಣವಾಗಿದೆ ಎಂದು ಯುವರಾಜ್ ಹೇಳಿದ್ದಾರೆ.
ಮುಂಬೈ(ಜು.14): ಟೀಂ ಇಂಡಿಯಾ ವಿಶ್ವಕಪ್ ಸೋಲಿನ ಬಳಿಕ ಮಧ್ಯಮ ಕ್ರಮಾಂಕ ಬ್ಯಾಟಿಂಗ್ ಚರ್ಚೆಯಾಗುತ್ತಿದೆ. ನಂ.4 ನೇ ಕ್ರಮಾಂಕಕ್ಕೆ ಸೂಕ್ತ ಆಟಗಾರರ ಆಯ್ಕೆ ಮಾಡುವಲ್ಲಿ ಬಿಸಿಸಿಐ ವಿಫಲವಾಗಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಇದರ ಜೊತೆ ಆಯ್ಕೆ ಮಾಡದೆ ಅನ್ಯಾಯ ಮಾಡಿದೆ ಅನ್ನೋ ಕಾರಣಕ್ಕೆ ವಿದಾಯ ಹೇಳಿದ ಅಂಬಾಟಿ ರಾಯುಡು 4ನೇ ಕ್ರಮಾಂಕ್ಕೆ ಸೂಕ್ತವಾಗಿದ್ದರು ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ. ಇದೀಗ ಯುವರಾಜ್ ಸಿಂಗ್ ಕೂಡ ರಾಯುಡು ಪರ ಬ್ಯಾಟ್ ಬೀಸಿದ್ದಾರೆ.
ಇದನ್ನೂ ಓದಿ: ಬಿಸಿಸಿಐ ಪ್ರಶ್ನೆಗೆ ತಬ್ಬಿಬ್ಬಾದ ಟೀಂ ಇಂಡಿಯಾ ಆಯ್ಕೆ ಸಮಿತಿ!
ನಾಲ್ಕನೇ ಕ್ರಮಾಂಕ ವೈಫಲ್ಯ ಕಳೆದೊಂದು ವರ್ಷದಿಂದ ಟೀಂ ಇಂಡಿಯಾಗೆ ಕಾಡುತ್ತಿದೆ. ಇಷ್ಟಾದರು ಬಿಸಿಸಿಐ ನಾಲ್ಕನೇ ಕ್ರಮಾಂಕಕ್ಕೆ ಪರ್ಯಾಯ ಆಟಗಾರರನ್ನು ಹುಡಿಕಿಲ್ಲ. ಅಂಬಾಟಿ ರಾಯುಡು 4ನೇ ಕ್ರಮಾಂಕಕ್ಕೆ ಸೂಕ್ತ ಎಂದು ಬಿಸಿಸಿಐ ಅಭಿಪ್ರಾಯ ಪಟ್ಟಿತ್ತು. ಇಷ್ಟೇ ಅಲ್ಲ ಮೀಸಲು ಆಟಗಾರನ ಪಟ್ಟಿಯಲ್ಲಿ ರಾಯುಡು ಹೆಸರಿತ್ತು. ಆದರೆ ರಾಯುಡು ಆಯ್ಕೆ ಮಾಡದೇ ಅನ್ಯಾಯ ಮಾಡಿದೆ ಎಂದು ಯುವರಾಜ್ ಸಿಂಗ್ ಹೇಳಿದರು.
ಇದನ್ನೂ ಓದಿ: ಸೋಲಿನ ಬೆನ್ನಲ್ಲೇ ಕೊಹ್ಲಿ,ಶಾಸ್ತ್ರಿಗೆ ಬಿಸಿಸಿಐ ಬುಲಾವ್!
3, 4 ಪಂದ್ಯದಲ್ಲಿ ರಾಯುಡು ಕಳಪೆ ಪ್ರದರ್ಶನ ನೀಡಿದ್ದಾರೆ ಅನ್ನೋ ಕಾರಣಕ್ಕೆ ಕೈಬಿಟ್ಟಿರುವುದು ಸರಿಯಲ್ಲ. ರಾಯುಡುಗೆ ಅನ್ಯಾಯ ಆಗಿದೆ ಎಂದು ಯುವಿ ಹೇಳಿದರು. ವಿಶ್ವಕಪ್ ಸೆಮಿಫೈನಲ್ ಸೋಲು ಹಾಗೂ ಅಂಬಾಟಿ ರಾಯುಡು ವಿದಾಯ ಕುರಿತು ಚರ್ಚಿಸಲು ಬಿಸಿಸಿಐ ಶೀಘ್ರದಲ್ಲೇ ಸಭೆ ಕರೆಯಲಿದೆ.