ವಿಶ್ವಕಪ್ ಫೈನಲ್: ಪ್ಯಾರಾಚ್ಯೂಟ್ ಮೂಲಕ ಬಾಲ್ ಡೆಲಿವರಿ!

By Web DeskFirst Published Jul 14, 2019, 6:25 PM IST
Highlights

ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದ ಬಾಲ್ ಡೆಲಿವರಿ ಎಲ್ಲರ ಗಮನಸೆಳೆದಿದೆ. ಲಾರ್ಡ್ಸ್ ಮೈದಾದಲ್ಲಿ ಆಯೋಜಿಸಿದ ಫೈನಲ್ ಪಂದ್ಯಕ್ಕೆ ಬಾಲ್ ಆಗಸದಿಂದ ಬಂದಿತ್ತು. ಅದು ಹೇಗೆ ಅಂತೀರಾ? ಇಲ್ಲಿದೆ ವಿವರ.

World cup Final: ಇಂಗ್ಲೆಂಡ್ vs ನ್ಯೂಜಿಲೆಂಡ್ ಪಂದ್ಯದ ಸ್ಕೋರ್ ಎಷ್ಟು?

ಲಾರ್ಡ್ಸ್(ಜು.14): ವಿಶ್ವಕಪ್ ಫೈನಲ್ ಪಂದ್ಯ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿದೆ. ಪ್ರತಿ ಪಂದ್ಯ ಆರಂಭಕ್ಕೂ ಮುನ್ನ ಅಂಪೈರ್ ಬಾಲ್ ಮೂಲಕ ಮೈದಾನ ಪ್ರವೇಶಿಸುತ್ತಾರೆ. ಬಳಿಕ ಬೌಲಿಂಗ್ ತಂಡಕ್ಕೆ ನೀಡುತ್ತಾರೆ. ಆದರೆ ಫೈನಲ್ ಪಂದ್ಯಕ್ಕೆ ಬಾಲ್ ಆಗಸದಿಂದ ಬಂದಿತ್ತು. 

ಇದನ್ನೂ ಓದಿ: ವಿಶ್ವಕಪ್ 2019: ನಾಯಕನಾಗಿ ಹೊಸ ದಾಖಲೆ ಬರೆದ ವಿಲಿಯಮ್ಸನ್..!

ರೆಡ್ ಡೆವಿಲ್ಸ್ ತಂಡ ಪ್ಯಾರಾಚ್ಯೂಟ್ ಮೂಲಕ ಬಾಲ್ ಹಿಡಿದು ಆಗಸದಿಂದ ಹಾರಾಡುತ್ತಾ ಮೈದಾನಕ್ಕಿಳಿದರು. ಬಳಿಕ ಅಂಪೈರ್ ಕೈಗೆ ಬಾಲ್ ನೀಡಿದರು. ರೆಡ್ ಡೆವಿಲ್ಸ್ ತಂಡದ ಸಾಹಸಕ್ಕೆ ನೆರೆದಿದ್ದ ಅಭಿಮಾನಿಗಳು ಎದ್ದು ನಿಂತು ಚಪ್ಪಾಳೆ ತಟ್ಟಿದರು. 

 

What a way to start the day 🏏 | | | pic.twitter.com/02Cf6xcnKk

— Cricket World Cup (@cricketworldcup)

ಇದನ್ನೂ ಓದಿ: ವಿಶ್ವಕಪ್ ಫೈನಲ್: ಟಾಸ್ ಗೆದ್ದ ನ್ಯೂಜಿಲೆಂಡ್ ಬ್ಯಾಟಿಂಗ್

ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ವಿಶ್ವಕಪ್ ಟ್ರೋಫಿಗಾಗಿ ಹೋರಾಟ ನಡೆಸುತ್ತಿದೆ. ಯಾರೇ ಪ್ರಶಸ್ತಿ ಗೆದ್ದರೂ ಇತಿಹಾಸ ನಿರ್ಮಾಣವಾಗಲಿದೆ. ಕಾರಣ ಇಂಗ್ಲೆಂಡ್  ಹಾಗೂ ನ್ಯೂಜಿಲೆಂಡ್ ತಂಡ ಇದುವರೆಗೆ ವಿಶ್ವಕಪ್ ಟ್ರೋಫಿ ಗೆದ್ದಿಲ್ಲ. ಹೀಗಾಗಿ ಸುವರ್ಣ ಅವಕಾಶ ಉಭಯ ತಂಡಕ್ಕಿದೆ. 
 

click me!