ಪಾಕಿಸ್ತಾನದ ಈ ಕ್ರಿಕೆಟಿಗನಿಗೆ ಬಾರಿಸಲು ರೆಡಿಯಾಗಿದ್ರಂತೆ ಭಜ್ಜಿ..!

By Web DeskFirst Published Jun 15, 2019, 1:50 PM IST
Highlights

ವಿಶ್ವಕಪ್ ಟೂರ್ನಿಯಲ್ಲಿ ಭಾರತ-ಪಾಕಿಸ್ತಾನ ನಡುವಿನ ಸಾಂಪ್ರದಾಯಿಕ ಕಾಳಗಕ್ಕೆ ವೇದಿಕೆ ರೆಡಿಯಾಗಿದೆ. ಇದರ ಬೆನ್ನಲ್ಲೇ ಟೀಂ ಇಂಡಿಯಾ ಅನುಭವಿ ಸ್ಪಿನ್ನರ್ ಹರ್ಭಜನ್ ಸಿಂಗ್ ಪಾಕಿಸ್ತಾನದ ಆಟಗಾರನ ಜತೆ ಹೊಡೆದಾಡಲು ರೆಡಿಯಾಗಿದ್ದ ಕುತೂಹಲಕಾರಿ ಘಟನೆಯೊಂದನ್ನು ಹಂಚಿಕೊಂಡಿದ್ದಾರೆ. ಏನಿದು ಸ್ಟೋರಿ, ನೀವೇ ನೋಡಿ... 

ಮ್ಯಾಂಚೆಸ್ಟರ್‌(ಜೂ.15): ಬದ್ಧವೈರಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವೆ ಕ್ರಿಕೆಟ್‌ ಮೈದಾನದಲ್ಲಿ ಹಲವು ಬಾರಿ ಮಾತಿನ ಚಕಮಕಿಗಳು ನಡೆದಿವೆ. ಆದರೆ ಮೈದಾನದ ಹೊರೆಗೆ ನಡೆದ ಘಟನೆಯೊಂದರ ವಿವರಗಳನ್ನು ಹರ್ಭಜನ್‌ ಸಿಂಗ್‌ ಮೊದಲ ಬಾರಿಗೆ ಬಹಿರಂಗಗೊಳಿಸಿದ್ದಾರೆ. 

ವಿಶ್ವಕಪ್ 2019: ಪಾಕಿಸ್ತಾನಕ್ಕೆ "ಅದನ್ನು" ಬಿಚ್ಚಿ ತೋರಿಸಿದ ಪೂನಂ ಪಾಂಡೆ!

2003ರ ಏಕದಿನ ವಿಶ್ವಕಪ್‌ ಪಂದ್ಯದ ಭೋಜನ ವಿರಾಮದ ವೇಳೆ ಪಾಕಿಸ್ತಾನದ ಬ್ಯಾಟ್ಸ್‌ಮನ್‌ ಮೊಹಮದ್‌ ಯೂಸುಫ್‌ ಜತೆ ತಾವು ಹೊಡೆದಾಡಲು ಸಿದ್ಧರಾಗಿದ್ದಾಗಿ ಭಜ್ಜಿ ಹೇಳಿದ್ದಾರೆ. ‘ಪಾಕಿಸ್ತಾನ 270 ರನ್‌ ಗಳಿಸಿತ್ತು. ನಾವು ಸ್ವಲ್ಪ ಒತ್ತಡದಲ್ಲಿದ್ದೆವು. ಆ ಪಂದ್ಯದಲ್ಲಿ ನಾನು ಆಡುತ್ತಿರಲಿಲ್ಲ. ಹೀಗಾಗಿ ನಿರಾಸೆಗೊಂಡಿದ್ದೆ. ಭೋಜನ ವಿರಾಮದ ವೇಳೆ ನಾನು ತಮಾಷೆ ಮಾಡಲು ಆರಂಭಿಸಿದೆ. ಯೂಸುಫ್‌ ನನ್ನ ವಿರುದ್ಧ ವೈಯಕ್ತಿಕ ನಿಂದನೆಗಿಳಿದರು. ನನ್ನ ಧರ್ಮದ ಬಗ್ಗೆ ಮಾತನಾಡಿದರು. ಇಬ್ಬರ ಕೈಯಲ್ಲೂ ಫೋರ್ಕ್ (ಮುಳ್ಳು ಚಮಚ) ಇತ್ತು. ಇನ್ನೇನೂ ಹೊಡೆದಾಡಬೇಕು ಎನ್ನುವಷ್ಟರಲ್ಲಿ ರಾಹುಲ್‌ ದ್ರಾವಿಡ್‌ ಹಾಗೂ ಜಾವಗಲ್‌ ಶ್ರೀನಾಥ್‌ ನನ್ನನ್ನು ತಡೆದರು. ಸಯೀದ್‌ ಅನ್ವರ್‌ ಹಾಗೂ ವಾಸೀಂ ಅಕ್ರಂ, ಯೂಸುಫ್‌ರನ್ನು ಎಳೆದೊಯ್ದರು. ಬಳಿಕ ನಮ್ಮ ತಪ್ಪಿನ ಬಗ್ಗೆ ಅರಿವಾಯಿತು. ಆ ಘಟನೆ ಬಳಿಕ ನಾನು, ಯೂಸುಫ್‌ ಸ್ನೇಹಿತರಾದೆವು’ ಎಂದು ಹಭರ್ಜನ್‌ ಹಳೆ ನೆನಪು ಬಿಚ್ಚಿಟ್ಟಿದ್ದಾರೆ.

ಪಾಕ್‌ ಅಭಿಮಾನಿಗೆ ಅಭಿನಂದನ್ ಮೀಸೆ: #UltimatePunch

2003ರ ಏಕದಿನ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಪಾಕಿಸ್ತಾನ ಸಯೀದ್ ಅನ್ವರ್ ಶತಕದ ನೆರವಿನಿಂದ 7 ವಿಕೆಟ್ ಕಳೆದುಕೊಂಡು 273 ರನ್ ಬಾರಿಸಿತ್ತು. ಸ್ಫರ್ಧಾತ್ಮಕ ಗುರಿ ಬೆನ್ನತ್ತಿದ್ದ ಭಾರತ, ಸಚಿನ್ ತೆಂಡುಲ್ಕರ್[98] ಶತಕವಂಚಿತ ಬ್ಯಾಟಿಂಗ್ ಹಾಗೂ ಯುವರಾಜ್ ಸಿಂಗ್ ಆಕರ್ಷಕ ಅರ್ಧಶತಕದ ನೆರವಿನಿಂದ ಇನ್ನೂ 26 ಎಸೆತಗಳು ಬಾಕಿ ಇರುವಂತೆಯೇ 6 ವಿಕೆಟ್ ಅಂತರದ ಜಯ ದಾಖಲಿಸಿತ್ತು. 


 

click me!