ಶ್ರೀಲಂಕಾ ಪಂದ್ಯಕ್ಕೂ ಮುನ್ನ ಕೊಹ್ಲಿ -ಅನುಷ್ಕಾ ಜಾಲಿ ರೌಂಡ್ಸ್!

Published : Jul 05, 2019, 05:55 PM ISTUpdated : Jul 05, 2019, 05:56 PM IST
ಶ್ರೀಲಂಕಾ ಪಂದ್ಯಕ್ಕೂ ಮುನ್ನ ಕೊಹ್ಲಿ -ಅನುಷ್ಕಾ ಜಾಲಿ ರೌಂಡ್ಸ್!

ಸಾರಾಂಶ

ವಿಶ್ವಕಪ್ ಟೂರ್ನಿಯಲ್ಲಿ ಭಾರತ ಅಂತಿಮ ಲೀಗ್ ಪಂದ್ಯ ಆಡಲು ಸಜ್ಜಾಗಿದೆ. ಬಾಂಗ್ಲಾದೇಶ ವಿರುದ್ಧದ ಪಂದ್ಯದ ಬಳಿಕ ಕೆಲ ದಿನಗಳ ಬಿಡುವು ಪಡೆದ ಟೀಂ ಇಂಡಿಯಾ ಕ್ರಿಕೆಟಿಗರು ಜಾಲಿ ಮೂಡ್‌ಗೆ ಜಾರಿದ್ದಾರೆ. ನಾಯಕ ವಿರಾಟ್ ಕೊಹ್ಲಿ, ಪತ್ನಿ ಅನುಷ್ಕಾ ಶರ್ಮಾ ಲಂಡನ್ ಸುತ್ತಾಡಿದ್ದಾರೆ.

ಲಂಡನ್(ಜು.05): ವಿಶ್ವಕಪ್ ಟೂರ್ನಿಯಲ್ಲಿ ಶ್ರೀಲಂಕಾ ವಿರುದ್ಧದ ಅಂತಿಮ ಲೀಗ್ ಪಂದ್ಯಕ್ಕೂ ಮುನ್ನವೇ ಟೀಂ ಇಂಡಿಯಾ  ಸೆಮಿಫೈನಲ್ ಸ್ಥಾನ ಖಚಿತ ಪಡಿಸಿಕೊಂಡಿದೆ.  ಬಾಂಗ್ಲಾದೇಶ ತಂಡವನ್ನು ಮಣಿಸಿ ಸೆಮೀಸ್‌ಗೆ  ಕೊಟ್ಟಿರುವ ಭಾರತ ರಿಲ್ಯಾಕ್ಸ್ ಮೂಡ್‌ಗೆ ಜಾರಿದೆ. ಅದರಲ್ಲೂ ನಾಯಕ ವಿರಾಟ್ ಕೊಹ್ಲಿ, ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಜೊತೆ ಲಂಡನ್ ಸುತ್ತಾಡೋ ಮೂಲಕ ರಿಲ್ಯಾಕ್ಸ್‌ ಆಗಿದ್ದಾರೆ.

ಇದನ್ನೂ ಓದಿ: ಮಾತು ಉಳಿಸಿಕೊಂಡ ಕಿಂಗ್ ಕೊಹ್ಲಿ; ಮ್ಯಾಚ್ ನೊಡಲು ರೆಡಿಯಾದ 87ರ ಅಜ್ಜಿ..!

ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಲಂಡನ್ ಪ್ರವಾಸಿ ತಾಣ, ರೆಸ್ಟೋರೆಂಟ್ ಸೇರಿದಂತೆ ಹಲವೆಡೆ ಪ್ರಯಾಣ ಮಾಡಿದ್ದಾರೆ.  ಬಾಂಗ್ಲಾದೇಶ ವಿರುದ್ಧದ ಪಂದ್ಯದ ಬಳಿಕ ಕೆಲ ದಿನಗಳ ಬಿಡುವು ಸಿಕ್ಕಿರುವ ಕೊಹ್ಲಿಗೆ ಅನುಷ್ಕಾ ಸಾಥ್ ನೀಡಿದ್ದಾರೆ. ಇತ್ತ ಅನುಷ್ಕಾ ಶರ್ಮಾ ಚಿತ್ರದ ಶೂಟಿಂಗ್‌ಗಾಗಿ ಲಂಡನ್‌ನಲ್ಲಿ ಬೀಡುಬಿಟ್ಟಿದ್ದಾರೆ. ಅನುಷ್ಕಾ ಕೂಡ ಶೂಟಿಂಗ್‌ನಿಂದ ಬಿಡುವು ಮಾಡಿಕೊಂಡು, ಕೊಹ್ಲಿ ಜೊತೆ ಸುತ್ತಾಡಿದ್ದಾರೆ.

 

ಇದನ್ನೂ ಓದಿ: ರಾಯುಡು ವಿದಾಯ: ಶುಭ ಕೋರಿದ ಕೊಹ್ಲಿಗೆ ಅಭಿಮಾನಿಗಳಿಂದ ಕ್ಲಾಸ್..!

ಕೊಹ್ಲಿ ಹಾಗೂ ಅನುಷ್ಕಾ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಜುಲೈ 6 ರಂದು ಭಾರತ  ಹಾಗೂ ಶ್ರೀಲಂಕಾ ಅಂತಿಮ ಲೀಗ್ ಪಂದ್ಯ ಆಡಲಿದೆ. ಈ ಪಂದ್ಯದ ಬಳಿಕ ಜುಲೈ 9  ರಂದು ಮೊದಲ ಸೆಮಿಫೈನಲ್ ಹಾಗೂ ಜುಲೈ 11 ರಂದು 2ನೇ ಸಮಿಫೈನಲ್ ಹೋರಾಟ ನಡೆಯಲಿದೆ. ಜುಲೈ 14 ರಂದು ಲಾರ್ಡ್ಸ್ ಮೈದಾನದಲ್ಲಿ ಫೈನಲ್ ಪಂದ್ಯ ನಡೆಯಲಿದೆ.

 

PREV
click me!

Recommended Stories

ವಿಶ್ವಕಪ್ ಫೈನಲ್ ವಿವಾದಾತ್ಮಕ ತೀರ್ಪು; ಮೌನ ಮುರಿದ ಅಂಪೈರ್ ಧರ್ಮಸೇನಾ!
ವಿಶ್ವಕಪ್ ಫೈನಲ್ ಗೆಲುವು ನ್ಯಾಯವಲ್ಲ; ಇಂಗ್ಲೆಂಡ್ ನಾಯಕ ವಿಷಾದ!