ಸೋಲಿನಿಂದ ಕಂಗೆಟ್ಟ ಸೌತ್ ಆಫ್ರಿಕಾಗೆ ಮತ್ತೊಂದು ಹೊಡೆತ!

Published : Jun 27, 2019, 10:36 PM IST
ಸೋಲಿನಿಂದ ಕಂಗೆಟ್ಟ ಸೌತ್ ಆಫ್ರಿಕಾಗೆ ಮತ್ತೊಂದು ಹೊಡೆತ!

ಸಾರಾಂಶ

ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ರೇಸ್‌ನಿಂದ  ಹೊರಬಿದ್ದಿರುವ ಸೌತ್ ಆಫ್ರಿಕಾ ತಂಡಕ್ಕೆ ಮತ್ತೊಂದು ಹೊಡೆತ ಬಿದ್ದಿದೆ. ತಂಡ  ಮಿಡ್ಲ್ ಆರ್ಡರ್ ಬ್ಯಾಟ್ಸ್‌ಮನ್ ತಂಡದಿಂದ ಹೊರಬಿದ್ದಿದ್ದಾರೆ.

ವಿಶ್ವಕಪ್ ಪಂದ್ಯದ ಸ್ಕೋರ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ:

ಲಂಡನ್(ಜೂ.27): ವಿಶ್ವಕಪ್ ಟೂರ್ನಿಯಲ್ಲಿ ಸೌತ್ ಆಫ್ರಿಕಾ ತಂಡದ ಹಣೆಬರಹ ನೆಟ್ಟಗಿಲ್ಲ. ಒಂದೆಡೆ ಸತತ ಸೋಲು, ಮತ್ತೊಂದೆಡೆ  ಇಂಜುರಿ ಸಮಸ್ಸೆ ಹರಿಣಗಳ ಆತ್ಮವಿಶ್ವಾಸವನ್ನೇ ಕಸಿದುಕೊಂಡಿದೆ. ಆಡಿದ 7 ಪಂದ್ಯದಲ್ಲಿ ಕೇವಲ 1 ಗೆಲುವು ಸಾಧಿಸೋ ಮೂಲಕ ಈಗಾಗಲೇ ಸೆಮಿಫೈನಲ್ ರೇಸ್‌ನಿಂದ ಹೊರಬಿದ್ದಿದೆ. ಇದರ ಬೆನ್ನಲ್ಲೇ  ತಂಡದ ಮಿಡ್ಲ್ ಆರ್ಡರ್ ಬ್ಯಾಟ್ಸ್‌ಮನ್ ಡೇವಿಡ್ ಮಿಲ್ಲರ್ ಇಂಜುರಿಯಿಂದ ಹೊರಬಿದ್ದಿದ್ದಾರೆ.

ಇದನ್ನೂ ಓದಿ: ವಿಂಡೀಸ್ ವಿರುದ್ಧ ಭಾರತಕ್ಕೆ 125 ರನ್ ಭರ್ಜರಿ ಗೆಲುವು-ಸೆಮೀಸ್ ಹಾದಿ ಸುಲಭ!

ಜೂನ್ 28ರಂದು ಸೌತ್ ಆಫ್ರಿಕಾ ಹಾಗೂ ಶ್ರೀಲಂಕಾ ಹೋರಾಟ ನಡೆಸಲಿದೆ. ಈ ಪಂದ್ಯಕ್ಕೂ ಮುನ್ನ ಸೌತ್ ಆಫ್ರಿಕಾ ತಂಡದ ಗಾಯಾಳು ಲಿಸ್ಟ್ ಬೆಳೆಯುತ್ತಿದೆ. ಡೇವಿಡ್ ಮಿಲ್ಲರ್ ಇಂಜುರಿ ಕಾರಣದಿಂದ ಲಂಕಾ ವಿರುದ್ಧದ ಪಂದ್ಯಕ್ಕೆ ಲಭ್ಯರಿಲ್ಲ. ಟೂರ್ನಿ ಆರಂಭದಲ್ಲೇ ವೇಗಿ ಡೇಲ್ ಸ್ಟೇನ್ ಇಂಜುರಿಯಿಂದ ವಿಶ್ವಕಪ್‌‌ನಿಂದಲೇ ಹೊರಬಿದ್ದಿದ್ದರು. ಬಳಿಕ ಲುಂಗಿ ಎನ್‌ಗಿಡಿ ಇಂಜುರಿಯಿಂದ ಕೆಲ ಪಂದ್ಯಕ್ಕೆ ಅಲಭ್ಯರಾಗಿದ್ದರು. ಇದೀಗ ಮಿಲ್ಲರ್ ಕೂಡ ಇಂಜುರಿಗೆ ತುತ್ತಾಗಿದ್ದಾರೆ.

ಇದನ್ನೂ ಓದಿ: ವಿಶ್ವಕಪ್ 2019: ಪಾಕಿಸ್ತಾನ ಗೆಲುವಿಗೆ ಟ್ರೋಲ್ ಆದ ಸಾನಿಯಾ ಮಿರ್ಜಾ

ಪಾಕಿಸ್ತಾನ ವಿರುದ್ದದ  ಪಂದ್ಯದಲ್ಲಿ ಡೇವಿಡ್ ಮಿಲ್ಲರ್ ಇಂಜುರಿಗೆ ತುತ್ತಾಗಿದ್ದರು. 6 ಪಂದ್ಯಗಳಿಂದ ಮಿಲ್ಲರ್ 136 ರನ್ ಸಿಡಿಸಿದ್ದಾರೆ. 34ರ ಸರಾಸರಿಯಲ್ಲಿ ಬ್ಯಾಟ್ ಬೀಸಿರುವ ಮಿಲ್ಲರ್ ಶತಕ  ಹಾಗೂ ಅರ್ಧಶತಕ ದಾಖಲಿಸುವಲ್ಲಿ ವಿಫಲರಾಗಿದ್ದಾರೆ. 

PREV
click me!

Recommended Stories

ವಿಶ್ವಕಪ್ ಫೈನಲ್ ವಿವಾದಾತ್ಮಕ ತೀರ್ಪು; ಮೌನ ಮುರಿದ ಅಂಪೈರ್ ಧರ್ಮಸೇನಾ!
ವಿಶ್ವಕಪ್ ಫೈನಲ್ ಗೆಲುವು ನ್ಯಾಯವಲ್ಲ; ಇಂಗ್ಲೆಂಡ್ ನಾಯಕ ವಿಷಾದ!