ಧೋನಿ ಮೇಲೆ ಕಿಡಿಕಾರಿದ ಸಚಿನ್ ತೆಂಡುಲ್ಕರ್..!

By Web DeskFirst Published Jun 24, 2019, 10:44 AM IST
Highlights

ವಿಶ್ವಕಪ್ ಟೂರ್ನಿಯ ಆಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಪರದಾಡಿ ಜಯಸಾಧಿಸಿದೆ. ಅದರಲ್ಲೂ ಮಂದಗತಿಯಲ್ಲಿ ಬ್ಯಾಟ್ ಬೀಸಿದ ಧೋನಿಯ ಬಗ್ಗೆ ಇದೀಗ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಬೇಸರ ವ್ಯಕ್ತಪಡಿಸಿದ್ದಾರೆ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ...

ಸೌಥಾಂಪ್ಟನ್[ಜೂ.24]: ಆಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ನಿಧಾನಗತಿಯ ಬ್ಯಾಟಿಂಗ್ ಪ್ರದರ್ಶಿಸಿದ ಎಂ.ಎಸ್.ಧೋನಿ ಹಾಗೂ ಕೇದಾರ್ ಜಾಧವ್ ಬಗ್ಗೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಆಫ್ಘನ್ ವಿರುದ್ಧ ಪರದಾಡಿ ಗೆದ್ದ ಬೆನ್ನಲ್ಲೇ ನಾಯಕ ಕೊಹ್ಲಿಗೆ ಬಿತ್ತು ಬರೆ!

‘ನನಗೆ ಕೊಂಚ ಬೇಸರವಾಗಿದೆ, ಇನ್ನೂ ಉತ್ತಮವಾದ ಪ್ರದರ್ಶನ ನೀಡಬಹುದಾಗಿತ್ತು. ಕೇದಾರ್ ಜಾಧವ್ ಹಾಗೂ ಧೋನಿ ನಡುವಿನ ಜತೆಯಾಟದಿಂದ ನಾನು ಸಂತುಷ್ಟನಾಗಿಲ್ಲ. ಇಬ್ಬರು ಇನ್ನೂ ಉತ್ತಮವಾಗಿ ಆಡಬಹುದಿತ್ತು. 34 ಓವರ್ ಸ್ಪಿನ್ ಬೌಲಿಂಗ್ ಅನ್ನು ನಾವು ಎದುರಿಸಿ, ಗಳಿಸಿದ್ದು ಕೇವಲ 119 ರನ್. 38ನೇ ಓವರ್‌ನಲ್ಲಿ ಕೊಹ್ಲಿ ಔಟಾದ ಬಳಿಕ 45ನೇ ಓವರ್ ತನಕ ಸಾಕಷ್ಟು ರನ್ ಬರಲೇ ಇಲ್ಲ. ಇದುವರೆಗೂ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ಸ್‌ಮನ್‌ಗಳಿಂದ ಉತ್ತಮ ಪ್ರದರ್ಶನ ಬಂದಿಲ್ಲ’ ಎಂದು ಸಚಿನ್ ಹೇಳಿದ್ದಾರೆ. 

ನಾವು ಮುಳುಗುವ ಜೊತೆಗೆ ನಿಮ್ಮನ್ನು ಮುಳುಗಿಸುತ್ತೇವೆ-ಬಾಂಗ್ಲಾಗೆ ಆಫ್ಘನ್ ಎಚ್ಚರಿಕೆ!

ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದು ಎನಿಸಿರುವ ಟೀಂ ಇಂಡಿಯಾ ಮೊದಲು ಬ್ಯಾಟ್ ಮಾಡಿ ಕೇವಲ 224 ರನ್ ಬಾರಿಸಿತ್ತು. ಇದಕ್ಕುತ್ತರವಾಗಿ ಆಫ್ಘನ್ ಗೆಲುವಿನ ಸಮೀಪ ಬಂದಿತ್ತಾದರೂ ಶಮಿ ಹ್ಯಾಟ್ರಿಕ್ ಬೌಲಿಂಗ್ ನೆರವಿನಿಂದ 213 ರನ್ ಗಳಿಗೆ ಸರ್ವಪತನ ಕಾಣುವ ಮೂಲಕ ಕೇವಲ 11 ರನ್ ಗಳ ಸೋಲೊಪ್ಪಿಕೊಂಡಿತ್ತು. ವಿರಾಟ್ ಪಡೆ ವಿಶ್ವಕಪ್ ಟೂರ್ನಿಯಲ್ಲಿ ಇದುವರೆಗೂ 5 ಪಂದ್ಯಗಳಲ್ಲಿ 4 ಗೆಲುವು ಹಾಗೂ ಒಂದು ಪಂದ್ಯ ರದ್ದಾಗಿದ್ದರಿಂದ ಒಟ್ಟು 9 ಅಂಕಗಳಿಸಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಜೂನ್ 27ರಂದು ನಡೆಯಲಿರುವ ಮುಂದಿನ ಪಂದ್ಯದಲ್ಲಿ ಭಾರತ ತಂಡವು ವೆಸ್ಟ್ ಇಂಡೀಸ್ ತಂಡವನ್ನು ಎದುರಿಸಲಿದೆ. 

click me!