ನಾವು ಮುಳುಗುವ ಜೊತೆಗೆ ನಿಮ್ಮನ್ನು ಮುಳುಗಿಸುತ್ತೇವೆ-ಬಾಂಗ್ಲಾಗೆ ಆಫ್ಘನ್ ಎಚ್ಚರಿಕೆ!

By Web DeskFirst Published Jun 23, 2019, 9:57 PM IST
Highlights

ಭಾರತ ವಿರುದ್ಧ ದಿಟ್ಟ ಹೋರಾಟ ನೀಡಿದ ಅಫ್ಘಾನಿಸ್ತಾನ ವಿರೋಚಿತ ಸೋಲು ಕಂಡಿದೆ. ಕೇವಲ 11 ರನ್ ಸೋಲು ಅನುಭವಿಸಿದ ಅಫ್ಘಾನಿಸ್ತಾನ ಇದೀಗ ಹೊಸ ಉತ್ಸಾಹದಲ್ಲಿದೆ. ಅಫ್ಘಾನ್ ಕ್ರಿಕೆಟಿಗರ ಆತ್ಮವಿಶ್ವಾಸ ಹೆಚ್ಚಾಗಿದೆ. ಇದರ ಬೆನ್ನಲ್ಲೇ ಬಾಂಗ್ಲಾದೇಶಕ್ಕೆ ಖಡಕ್ ಎಚ್ಚರಿಕೆ ನೀಡಿದೆ. 

ಸೌಥಾಂಪ್ಟನ್(ಜೂ.23): ವಿಶ್ವಕಪ್ ಟೂರ್ನಿಯಲ್ಲಿ ಅಫ್ಘಾನಿಸ್ತಾನದ ಸೆಮಿಫೈನಲ್ ಹೋರಾಟ ಅಂತ್ಯಗೊಂಡಿದೆ. ಆದರೆ ಟೀಂ ಇಂಡಿಯಾ ವಿರುದ್ದ ವಿರೋಚಿತ ಸೋಲು ಆಫ್ಘಾನ್ ತಂಡದಲ್ಲಿ ಹೊಸ ಆತ್ಮವಿಶ್ವಾಸ ಮೂಡಿಸಿದೆ. ಟೂರ್ನಿಯ ಬಲಿಷ್ಠ ತಂಡ ಭಾರತಕ್ಕೆ ಬಹುತೇಕ ನೀರು ಕುಡಿಸಿದ ಅಫ್ಘಾನಿಸ್ತಾನ ಇದೀಗ ಬಾಂಗ್ಲಾದೇಶ ವಿರುದ್ಧದ ಹೋರಾಟಕ್ಕೆ ಸಜ್ಜಾಗಿದೆ.

ಇದನ್ನೂ ಓದಿ: ಅಫ್ಘಾನ್ ವಿರುದ್ಧ ಬ್ಯಾಟ್ಸ್‌ಮನ್ ಪರದಾಟ, ಬೌಲರ್ಸ್ ಆರ್ಭಟ- ತಿಣುಕಾಡಿ ಗೆದ್ದ ಭಾರತ!

ಜೂ.24 ರಂದು ಆಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶ ಮುಖಾಮುಖಿಯಾಗುತ್ತಿದೆ. ಪಂದ್ಯಕ್ಕೂ ಮುನ್ನ ಆಫ್ಘಾನ್ ನಾಯಕ ಗುಲ್‌ಬಾದಿನ್ ನೈಬ್ , ಬಾಂಗ್ಲಾ ತಂಡಕ್ಕೆ ಎಚ್ಚರಿಕೆ ನೀಡಿದ್ದಾರೆ. ವಿಶ್ವಕಪ್ ಟೂರ್ನಿಯಲ್ಲಿ ನಾವು ಮುಳುಗುವ ಜೊತೆಗೆ ನಿಮ್ಮನ್ನು ಮುಳುಗಿಸುತ್ತೇವೆ ಎಂದು ನೈಬ್ ಹೇಳಿದ್ದಾರೆ. ಈ ಮೂಲಕ ಬಾಂಗ್ಲಾಗೆ ಸೋಲುಣಿಸಿ, ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಹೋರಾಟಕ್ಕೆ ಅಂತ್ಯಹಾಡಲಿದ್ದೇವೆ ಎಂದಿದ್ದಾರೆ.

ಇದನ್ನೂ ಓದಿ: ಅಫ್ಘಾನ್ ವಿರುದ್ಧ ಧೋನಿ ಸ್ಲೋ ಬ್ಯಾಟಿಂಗ್-ಫುಲ್ ಟ್ರೋಲ್!

ವಿಶ್ವಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶ 6 ಪಂದ್ಯದಲ್ಲಿ 2 ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಇನ್ನೊಂದು ಸೋಲು ಬಾಂಗ್ಲಾ ತಂಡದ ಸೆಮಿಫೈನಲ್ ಹಂತಕ್ಕೇರೋ ಕನಸಿಕೆ ತೀವ್ರ ಹೊಡೆತ ನೀಡಲಿದೆ.  ಕ್ರಿಕೆಟ್ ಹೋರಾಟದಲ್ಲಿ ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶ ಬದ್ಧವೈರಿಗಳು. 2014ರಲ್ಲಿ ಆಫ್ಘಾನ್ ಹಾಗೂ ಬಾಂಗ್ಲಾ ಮೊದಲ ಬಾರಿ ಏಕದಿನ ಕ್ರಿಕೆಟ್‌ನಲ್ಲಿ ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಬಾಂಗ್ಲಾಗೆ ಶಾಕ್ ನೀಡಿದ್ದ ಅಫ್ಘಾನ್ 32 ರನ್ ಗೆಲುವು ಸಾಧಿಸಿತ್ತು. ಸದ್ಯ ಅಫ್ಘಾನ್ ವಿರುದ್ಧ ಬಾಂಗ್ಲಾದೇಶ 4-3 ಗೆಲುವಿನ ಅಂತರ ಹೊಂದಿದೆ. 

click me!