ಧೋನಿ ದಾಖಲೆ ಉಡೀಸ್ ಮಾಡಿದ ರೋಹಿತ್..!

By Web Desk  |  First Published Jun 16, 2019, 5:08 PM IST

ವಿಶ್ವಕಪ್ ಟೂರ್ನಿಯಲ್ಲಿಂದು ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ ಭರ್ಜರಿ ಆರಂಭ ಪಡೆದಿದೆ. ರೋಹಿತ್ ಶರ್ಮಾ ಶತಕ ಸಿಡಿಸುವುದರ ಜತೆಗೆ, ಮಹೇಂದ್ರ ಸಿಂಗ್ ಧೋನಿ ಹೆಸರಿನಲ್ಲಿದ್ದ ಅಪರೂಪದ ದಾಖಲೆಯೊಂದನ್ನು ಅಳಿಸಿಹಾಕಿದ್ದಾರೆ. ಅಷ್ಟಕ್ಕೂ ಏನದು ದಾಖಲೆ ನೀವೇ ನೋಡಿ... 


ಮ್ಯಾಂಚೆಸ್ಟರ್[ಜೂ.16]: ವಿಶ್ವಕಪ್ ಟೂರ್ನಿಯಲ್ಲಿಂದು ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ ಭರ್ಜರಿ ಆರಂಭ ಪಡೆದಿದೆ. ಕನ್ನಡಿಗ ಕೆ.ಎಲ್ ರಾಹುಲ್ ಜತೆ ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಶತಕದ ಜತೆಯಾಟವಾಡುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.

ವಿಶ್ವಕಪ್ 2019: ಪಾಕ್ ವಿರುದ್ಧ ಸೆಂಚುರಿ ಸಿಡಿಸಿ ದಾಖಲೆ ಬರೆದ ರೋಹಿತ್

Latest Videos

undefined

ಇದೇ ಪಂದ್ಯದಲ್ಲಿ ರೋಹಿತ್ ಶರ್ಮಾ, ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯ ಹೆಸರಿನಲ್ಲಿದ್ದ ಗರಿಷ್ಠ ಸಿಕ್ಸರ್ ಸಿಡಿಸಿದ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. ಹೌದು, ಧೋನಿ 3 ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಇದುವರೆಗೂ 355 ಸಿಕ್ಸರ್ ಸಿಡಿಸುವ ಮೂಲಕ ಅಗ್ರಸ್ಥಾನ ಕಾಯ್ದುಕೊಂಡಿದ್ದರು. ಇದೀಗ ರೋಹಿತ್ ಶರ್ಮಾ 357* ಸಿಕ್ಸರ್ ಸಿಡಿಸುವ ಮೂಲಕ ತಾವೇ ಸಿಕ್ಸರ್ ಕಿಂಗ್ ಎನ್ನುವುದನ್ನು ಸಾಬೀತು ಪಡಿಸಿದ್ದಾರೆ. 

ವಿಶ್ವಕಪ್ 2019: ಪಾಕ್ ವಿರುದ್ದ ದಾಖಲೆ ಬರೆದ ರೋಹಿತ್-ರಾಹುಲ್ ಜೋಡಿ!

ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಭಾರತ ಪರ ಗರಿಷ್ಠ ಸಿಕ್ಸರ್ ಸಿಡಿಸಿದ ಬ್ಯಾಟ್ಸ್’ಮನ್’ಗಳ ಪಟ್ಟಿ ಇಲ್ಲಿದೆ ನೋಡಿ..

1. ರೋಹಿತ್ ಶರ್ಮಾ: 357

2. ಎಂ.ಎಸ್ ಧೋನಿ: 355

3. ಸಚಿನ್ ತೆಂಡುಲ್ಕರ್: 364

4. ಯುವರಾಜ್ ಸಿಂಗ್: 251

5. ಸೌರವ್ ಗಂಗೂಲಿ: 247

6. ವಿರೇಂದ್ರ ಸೆಹ್ವಾಗ್: 243

ಈ ಹೈವೋಲ್ಟೇಜ್ ಪಂದ್ಯದಲ್ಲಿ ಕಣಕ್ಕಿಳಿಯುವುದರ ಮೂಲಕ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, ಭಾರತ ಪರ ಅತಿಹೆಚ್ಚು ಏಕದಿನ ಪಂದ್ಯವನ್ನಾಡಿದ 2ನೇ ಕ್ರಿಕೆಟಿಗ[340] ಎನ್ನುವ ಶ್ರೇಯಕ್ಕೆ ಪಾತ್ರರಾಗಿದ್ದಾರೆ. ಈ ಪಟ್ಟಿಯಲ್ಲಿ ಸಚಿನ್ ತೆಂಡುಲ್ಕರ್[461 ಭಾರತ ಪರ] ಮೊದಲ ಸ್ಥಾನದಲ್ಲಿದ್ದಾರೆ. 

click me!