ವಿಶ್ವಕಪ್ 2019: ನಾಯಕನಾಗಿ ಹೊಸ ದಾಖಲೆ ಬರೆದ ವಿಲಿಯಮ್ಸನ್..!

By Web DeskFirst Published Jul 14, 2019, 6:07 PM IST
Highlights

ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಅಪರೂಪದ ದಾಖಲೆ ಬರೆದಿದ್ದಾರೆ. ಈ ಮೂಲಕ ಜಯವರ್ಧನೆ, ರಿಕಿ ಪಾಂಟಿಂಗ್ ಹೆಸರಿನಲ್ಲಿದ್ದ ದಾಖಲೆ ನುಚ್ಚುನೂರಾಗಿದೆ. ಅಷ್ಟಕ್ಕೂ ಯಾವುದದು ದಾಖಲೆ ನೀವೇ ನೋಡಿ... 

ವಿಶ್ವಕಪ್ ಟೂರ್ನಿಯ ಕ್ಷಣಕ್ಷಣದ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ...

ಲಾರ್ಡ್ಸ್[ಜು.14]: ವಿಶ್ವಕಪ್ ಟೂರ್ನಿಯಲ್ಲಿ ತಂಡವನ್ನು ಯಶಸ್ವಿಯಾಗಿ ಫೈನಲ್’ವರೆಗೆ ಮುನ್ನಡೆಸಿರುವ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಅಪರೂಪದ ದಾಖಲೆ ಬರೆದಿದ್ದಾರೆ. 12 ವರ್ಷಗಳ ಹಿಂದಿದ್ದ ಮಹೇಲ್ ಜಯವರ್ಧನೆ ಹೆಸರಿನಲ್ಲಿದ್ದ ಅಪರೂಪದ ದಾಖಲೆ ಇದೀಗ ವಿಲಿಯಮ್ಸನ್ ಪಾಲಾಗಿದೆ.

ಧೋನಿ ಟೀಕಿಸುವ ಮುನ್ನ ಕೇನ್ ವಿಲಿಯಮ್ಸನ್ ಮಾತನ್ನೊಮ್ಮೆ ಕೇಳಿ...

ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ನಡುವೆ ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಫೈನಲ್ ಪಂದ್ಯದಲ್ಲಿ ದಶಕಗಳ ಹಿಂದೆ ನಿರ್ಮಾಣವಾಗಿದ್ದ ದಾಖಲೆಯನ್ನು ಕೇನ್ ಅಳಿಸಿಹಾಕಿದ್ದಾರೆ. ಹೌದು, ವಿಶ್ವಕಪ್ ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸಿದ ನಾಯಕ ಎನ್ನುವ ಖ್ಯಾತಿಗೆ ಕೇನ್ ವಿಲಿಯಮ್ಸನ್ ಪಾತ್ರರಾಗಿದ್ದಾರೆ. 549 ರನ್ ಬಾರಿಸುತ್ತಿದ್ದಂತೆ ಈ ಅಪರೂಪದ ದಾಖಲೆ ಕೇನ್ ವಿಲಿಯಮ್ಸನ್ ಪಾಲಾಗಿದೆ. ಈ ಮೊದಲು 2007ರಲ್ಲಿ ಶ್ರೀಲಂಕಾ ನಾಯಕ ಮಹೇಲಾ ಜಯವರ್ಧನೆ 458 ರನ್ ಬಾರಿಸಿ ದಾಖಲೆ ಬರೆದಿದ್ದರು. ಇದೀಗ ಕೇನ್ ವಿಲಿಯಮ್ಸನ್ 9 ಇನಿಂಗ್ಸ್’ಗಳಲ್ಲಿ 578 ರನ್ ಬಾರಿಸುವ ಮೂಲಕ ತಮ್ಮ ದಾಖಲೆಯನ್ನು ಮತ್ತಷ್ಟು ಭದ್ರಪಡಿಸಿಕೊಂಡಿದ್ದಾರೆ.

ಕಿವೀಸ್ ಪರ ದಾಖಲೆ ಬರೆದು ವಿಕೆಟ್ ಒಪ್ಪಿಸಿದ ವಿಲಿಯಮ್ಸನ್

ವಿಶ್ವಕಪ್ ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸಿದ ಟಾಪ್ 5 ನಾಯಕರಿವರು:

1. ಕೇನ್ ವಿಲಿಯಮ್ಸನ್[NZ]-578 ರನ್ [2019]

2. ಮಹೇಲಾ ಜಯವರ್ಧನೆ[SL]-548 ರನ್[2007]

3. ರಿಕಿ ಪಾಂಟಿಂಗ್[Aus]-539 ರನ್[2007]

4. ಆ್ಯರೋನ್ ಫಿಂಚ್[Aus]-507 ರನ್[2019]

5. ಎಬಿ ಡಿವಿಲಿಯರ್ಸ್[SA]-482 ರನ್[2015]

click me!