100 ವಿಕೆಟ್ ಕಬಳಿಸಿದ ಬುಮ್ರಾ; ದಾಖಲೆ ಜಸ್ಟ್ ಮಿಸ್..!

By Web Desk  |  First Published Jul 6, 2019, 6:26 PM IST

ವಿಶ್ವಕಪ್ ಟೂರ್ನಿಯ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ನೂರು ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದಾರೆ. ಇದರ ಜತೆಗೆ ಟೀಂ ಇಂಡಿಯಾ ಮತ್ತೋರ್ವ ವೇಗಿಯ ಹೆಸರಿನಲ್ಲಿದ್ದ ದಾಖಲೆಯನ್ನು ಸರಿಗಟ್ಟುವ ದಾಖಲೆಯನ್ನು ಜಸ್ಟ್ ಮಿಸ್ ಮಾಡಿಕೊಂಡಿದ್ದಾರೆ. ಅಷ್ಟಕ್ಕೂ ಏನದು ದಾಖಲೆ ನೀವೇ ನೋಡಿ...


ಲೀಡ್ಸ್[ಜು.06]: ಟೀಂ ಇಂಡಿಯಾ ಮಾರಕ ವೇಗಿ ಜಸ್ಪ್ರೀತ್ ಬುಮ್ರಾ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ಸೇರ್ಪಡೆಗೊಂಡಿದ್ದು, ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಬುಮ್ರಾ ನೂರು ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದಾರೆ. 

ಧೋನಿಗೆ ICC ನುಡಿನಮನ : ’MSD ಬರೀ ಹೆಸರಲ್ಲ’..!

Tap to resize

Latest Videos

undefined

ಶ್ರೀಲಂಕಾದ ನಾಯಕ ದೀಮುತ್ ಕರುಣಾರತ್ನೆ ವಿಕೆಟ್ ಕಬಳಿಸುವುದರೊಂದಿಗೆ ಬುಮ್ರಾ ಏಕದಿನ ಕ್ರಿಕೆಟ್’ನಲ್ಲಿ ಅತಿವೇಗವಾಗಿ 100 ವಿಕೆಟ್ ಪಡೆದ ಭಾರತದ ಎರಡನೇ ವೇಗದ ಬೌಲರ್ ಎನ್ನುವ ಕೀರ್ತಿಗೆ ಬುಮ್ರಾ ಭಾಜನರಾಗಿದ್ದಾರೆ.  57 ಇನ್ನಿಂಗ್ಸ್’ಗಳಲ್ಲಿ ಬುಮ್ರಾ 100 ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದು, ಶಮಿ ದಾಖಲೆ ಸರಿಗಟ್ಟುವ ಅವಕಾಶ ಜಸ್ಟ್ ಮಿಸ್ ಮಾಡಿಕೊಂಡಿದ್ದಾರೆ. ಈ ಮೊದಲು ಮೊಹಮ್ಮದ್ ಶಮಿ 56 ಇನ್ನಿಂಗ್ಸ್’ಗಳಲ್ಲಿ ನೂರು ವಿಕೆಟ್ ಕಬಳಿಸುವುದರೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. 

ಸಚಿನ್ ದಾಖಲೆ ಅಳಿಸಿಹಾಕಿದ 18ರ ಆಫ್ಘನ್ ಪೋರ..!

ಮತ್ತೊಂದು ವಿಶೇಷವೆಂದರೆ ಬುಮ್ರಾ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್’ನಲ್ಲಿ ಚೊಚ್ಚಲ ವಿಕೆಟ್ ರೂಪದಲ್ಲಿ ಆಸ್ಟ್ರೇಲಿಯಾ ನಾಯಕರಾಗಿದ್ದ ಸ್ಟೀವ್ ಸ್ಮಿತ್ ಬಲಿ ಪಡೆದಿದ್ದರು. ಇದೀಗ ನೂರನೇ ಬಲಿಯಾಗಿ ಲಂಕಾ ನಾಯಕ ದೀಮುತ್ ಕರುಣರತ್ನೆ ಅವರಿಗೆ ಬುಮ್ರಾ ಪೆವಿಲಿಯನ್ ಹಾದಿ ತೋರಿಸಿದ್ದಾರೆ. 
ಇದನ್ನೂ ಓದಿ: ಪಠಾಣ್ ದಾಖಲೆ ಮುರಿದ ಶಮಿ

click me!