ಭಾರತ-ಪಾಕಿಸ್ತಾನ ಪಂದ್ಯದ ಚೆಂಡು ₹1.5 ಲಕ್ಷಕ್ಕೆ ಹರಾಜು!

Published : Jul 13, 2019, 03:20 PM IST
ಭಾರತ-ಪಾಕಿಸ್ತಾನ ಪಂದ್ಯದ ಚೆಂಡು ₹1.5 ಲಕ್ಷಕ್ಕೆ ಹರಾಜು!

ಸಾರಾಂಶ

ವಿಶ್ವಕಪ್ ಟೂರ್ನಿಯ ಭಾರತ-ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಬಳಕೆಯಾಗಿದ್ದ ಬಾಲ್ ಬರೋಬ್ಬರಿ 1.5 ಲಕ್ಷ ರುಪಾಯಿಗೆ ಹರಾಜಾಗಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...  

ಲಂಡನ್‌(ಜು.13): ಬದ್ಧವೈರಿಗಳಾದ ಭಾರತ-ಪಾಕಿಸ್ತಾನ ನಡುವಿನ ಕ್ರಿಕೆಟ್‌ ಪಂದ್ಯಕ್ಕೆ ಎಲ್ಲಿಲ್ಲದ ಬೇಡಿಕೆ ಇದೆ. ಲಕ್ಷಾಂತರ ರುಪಾಯಿ ಕೊಟ್ಟು ಉಭಯ ತಂಡಗಳ ನಡುವಿನ ಏಕದಿನ ವಿಶ್ವಕಪ್‌ ಪಂದ್ಯದ ಟಿಕೆಟ್‌ಗಳನ್ನು ಖರೀದಿಸಿದ್ದ ಅಭಿಮಾನಿಗಳು, ಪಂದ್ಯಕ್ಕೆ ಬಳಕೆಯಾದ ಚೆಂಡು, ಸ್ಕೋರ್‌ಶೀಟ್‌ಗಳನ್ನು ದೊಡ್ಡ ಮೊತ್ತ ನೀಡಿ ಹರಾಜಿನಲ್ಲಿ ಖರೀದಿ ಮಾಡಿದ್ದಾರೆ. 

ಇಂಡೋ-ಪಾಕ್ ಪಂದ್ಯದ ಬಳಿಕ ಆತ್ಮಹತ್ಯೆಗೆ ಯೋಚಿಸಿದ್ದ ಕೋಚ್

www.officialmemorabilia.com ವೆಬ್‌ಸೈಟ್‌ನಲ್ಲಿ ಐಸಿಸಿ, ವಿಶ್ವಕಪ್‌ ಪಂದ್ಯಗಳಲ್ಲಿ ಟಾಸ್‌ಗೆ ಬಳಕೆಯಾದ ನಾಣ್ಯ, ಚೆಂಡು, ಸ್ಕೋರ್‌ ಶೀಟ್‌, ಆಟಗಾರರ ಸಹಿಯುಳ್ಳ ಬ್ಯಾಟ್‌ಗಳನ್ನು ಹರಾಜು ಹಾಕುತ್ತಿದೆ. ಭಾರತ-ಪಾಕ್‌ ನಡುವೆ ಜೂ.16ರಂದು ಮ್ಯಾಂಚೆಸ್ಟರ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ಗೆ ಬಳಕೆಯಾಗಿದ್ದ ನಾಣ್ಯ ₹1 ಲಕ್ಷಕ್ಕೆ ಹರಾಜಾದರೆ, ಪಂದ್ಯದಲ್ಲಿ ಬಳಸಿದ ಚೆಂಡು ₹1.5 ಲಕ್ಷಕ್ಕೆ, ಅಧಿಕೃತ ಸ್ಕೋರ್‌ ಶೀಟ್‌ ₹75,000 ಬಿಡ್‌ ಆಗಿವೆ. ಆದರೆ ಪಾಕಿಸ್ತಾನ-ಆಸ್ಪ್ರೇಲಿಯಾ ನಡುವಿನ ಪಂದ್ಯದಲ್ಲಿ ಬಳಕೆಯಾಗಿದ್ದ ಚೆಂಡಿಗೆ ಕೇವಲ ₹10,000 ಸಿಕ್ಕಿದೆ. ಆಸ್ಪ್ರೇಲಿಯಾ-ದ.ಆಫ್ರಿಕಾ ನಡುವಿನ ಪಂದ್ಯದಲ್ಲಿ ಬಳಕೆಯಾದ ಚೆಂಡು ₹20,000ಕ್ಕೆ ಹರಾಜಾಗಿದೆ.

ಬುಮ್ರಾ ಭಯಕ್ಕೆ ನಿದ್ರೆಯೇ ಮಾಡಿರಲಿಲ್ವಂತೆ ಕಿವೀಸ್‌ನ ಈ ಬ್ಯಾಟ್ಸ್‌ಮನ್..!

ಸಾಂಪ್ರದಾಯಿಕ ಎದುರಾಳಿಗಳಾದ ಭಾರತ-ಪಾಕಿಸ್ತಾನ ನಡುವೆ ಮ್ಯಾಂಚೆಸ್ಟರ್ ನ ಓಲ್ಡ್ ಟ್ರಾಫೋರ್ಡ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ 89 ರನ್ ಗಳಿಂದ ಮಣಿಸಿತ್ತು. ಅಲ್ಲದೇ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ದ ಸತತ ಏಳನೇ ಗೆಲುವು ದಾಖಲಿಸಿತ್ತು. 
 

PREV
click me!

Recommended Stories

ವಿಶ್ವಕಪ್ ಫೈನಲ್ ವಿವಾದಾತ್ಮಕ ತೀರ್ಪು; ಮೌನ ಮುರಿದ ಅಂಪೈರ್ ಧರ್ಮಸೇನಾ!
ವಿಶ್ವಕಪ್ ಫೈನಲ್ ಗೆಲುವು ನ್ಯಾಯವಲ್ಲ; ಇಂಗ್ಲೆಂಡ್ ನಾಯಕ ವಿಷಾದ!