
ಲಂಡನ್(ಜೂ.19): ವಿಶ್ವದ ಬೆಸ್ಟ್ ಸ್ಪಿನ್ನರ್‌ಗಳ ಪಟ್ಟಿಯಲ್ಲಿ ಅಫ್ಘಾನಿಸ್ತಾನದ ರಶೀದ್ ಖಾನ್ ಮುಂಚೂಣಿಯಲ್ಲಿದ್ದಾರೆ. ಆದರೆ ಇಂಗ್ಲೆಂಡ್ ವಿರುದ್ಧದ ವಿಶ್ವಕಪ್ ಲೀಗ್ ಪಂದ್ಯದಲ್ಲಿ ರಶೀದ್ ಖಾನ್ ದುಬಾರಿಯಾಗಿದ್ದರು. ರಶೀದ್ ಖಾನ್ ದುಬಾರಿ ಸ್ಪೆಲ್ ಕುರಿತು ಐಸ್‌ಲೆಂಡ್ ಕ್ರಿಕೆಟ್ ವ್ಯಂಗ್ಯವಾಡಿತ್ತು. 56 ಎಸೆತದಲ್ಲಿ ಸೆಂಚುರಿ ಸಿಡಿಸಿದ ರಶೀದ್ ಎಂದು ಐಸ್‌ಲೆಂಡ್ ಟ್ವೀಟ್ ಮಾಡಿತ್ತು. ರಶೀದ್ ಖಾನ್ ಕುರಿತು ಅಪಹಾಸ್ಯ ಮಾಡಿದ ಐಸ್‌ಲೆಂಡ್ ಕ್ರಿಕೆಟ್ ಕ್ಷಮೆ ಕೇಳಿದೆ.
ಇದನ್ನೂ ಓದಿ: ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದ ಧವನ್ ಭಾವನಾತ್ಮಕ ಸಂದೇಶ
ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳ ಅಬ್ಬರದಿಂದ ರಶೀದ್ ಖಾನ್ ದುಬಾರಿಯಾಗಿದ್ದರು. ರಶೀದ್ 56 ಎಸೆತದಲ್ಲಿ 110 ರನ್ ನೀಡಿ ದುಬಾರಿಯಾಗಿದ್ದರು. ಇದನ್ನೇ ಐಸ್‍ಲೆಂಡ್ ಅಧೀಕೃತ ಟ್ವಿಟರ್ ಖಾತೆಯಲ್ಲಿ ಅಪಹಾಸ್ಯ ಮಾಡಲಾಗಿತ್ತು. ಗರಿಷ್ಠ ಸ್ಕೋರ್ ಮಾಡಿದ ಬೌಲರ್ ಎಂದು ಟ್ವೀಟ್ ಮಾಡಿತ್ತು.
ಇದನ್ನೂ ಓದಿ: ಅಮ್ಮನ ನೆನೆದ ಜಸ್ಪ್ರೀತ್ ಬುಮ್ರಾ; ಕನ್ಫ್ಯೂಸ್ ಆದ ಮಂದಿ..!
ಐಸ್‌ಲೆಂಡ್ ಮಾಡಿದ ಟ್ವೀಟ್‌ಗೆ ಟೀಕೆ ವ್ಯಕ್ತವಾಗಿತ್ತು. ದಿಗ್ಗಜ ಕ್ರಿಕೆಟಿಗರೂ ಆಕ್ರೋಶ ವ್ಯಕ್ತಪಡಿಸಿದ್ದರು. ಭಾರೀ ಟೀಕೆ ವ್ಯಕ್ತವಾಗುತ್ತಲೇ ಐಸ್‌ಲೆಂಡ್ ಕ್ಷಮೆ ಕೇಳಿದೆ. ನಮ್ಮಿಂದ ತಪ್ಪಾಗಿದೆ ಎಂದು ಮತ್ತೊಂದು ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದೆ.