ಇಂಜುರಿಯಿಂದ ಚೇತರಿಸಿಕೊಳ್ಳದ ಟೀಂ ಇಂಡಿಯಾ ಬ್ಯಾಟ್ಸ್‌ಮನ್ ಶಿಖರ್ ಧವನ್ ವಿಶ್ವಕಪ್ ಟೂರ್ನಿ ಅರ್ಧಕ್ಕೆ ಮೊಟಕುಗೊಳಿಸಿ ತವರಿಗೆ ವಾಪಾಸ್ಸಾಗುತ್ತಿದ್ದಾರೆ. ಟೂರ್ನಿಯಿಂದ ಹೊರಬಿದ್ದಿರುವ ಧವನ್ ಇದೀಗ ಅಭಿಮಾನಿಗಳಿಗೆ ಭಾವನಾತ್ಮಕ ಸಂದೇಶ ರವಾನಿಸಿದ್ದಾರೆ.
ಲಂಡನ್(ಜೂ.19): ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನದ ಮೂಲಕ ಮುನ್ನಗ್ಗುತ್ತಿರುವ ಟೀಂ ಇಂಡಿಯಾಗೆ ಶಿಖರ್ ಧವನ್ ಇಂಜುರಿ ಬಹುದೊಡ್ಡ ಹೊಡೆತ ನೀಡಿದೆ. ಧವನ್ ಚೇತರಿಸಿಕೊಳ್ಳದ ಕಾರಣ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಧವನ್ ಬದಲು ಇದೀಗ ರಿಷಬ್ ಪಂತ್ ತಂಡ ಸೇರಿಕೊಂಡಿದ್ದಾರೆ. ಟೂರ್ನಿಯಿಂದ ಔಟ್ ಆಗಿರುವ ಧವನ್ ಅಭಿಮಾನಿಗಳಿಗೆ ವೀಡಿಯೋ ಮೂಲಕ ಭಾವನಾತ್ಮಕ ಸಂದೇಶ ರವಾನಿಸಿದ್ದಾರೆ.
ಇದನ್ನೂ ಓದಿ: ಟೀಂ ಇಂಡಿಯಾಗೆ ಆಘಾತ- ವಿಶ್ವಕಪ್ ಟೂರ್ನಿಯಿಂದ ಶಿಖರ್ ಧವನ್ ಔಟ್!
ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ ಅನ್ನೋದು ಪ್ರಕಟಿಸಲು ನೋವಾಗುತ್ತಿದೆ. ನಿಮ್ಮ ಪ್ರಾರ್ಥನೆ, ಬೆಂಬಲಕ್ಕೆ ನಾನು ಚಿರಋಣಿಯಾಗಿದ್ದೇನೆ. ನನ್ನ ಕೈಬೆರಳಿನ ಗಾಯ ವಾಸಿಯಾಗಿಲ್ಲ. ಹೀಗಾಗಿ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ಸದ್ಯ ನಾನು ಭಾರತಕ್ಕೆ ಮರಳಿ ಶೀಘ್ರದಲ್ಲೇ ಚೇತರಿಸಿಕೊಳ್ಳುತ್ತೇನೆ. ಜೊತೆಗೆ ಮುಂದಿನ ಸರಣಿಗೆ ಸಜ್ಜಾಗುತ್ತೇನೆ. ಟೀಂ ಇಂಡಿಯಾ ಉತ್ತಮ ಪ್ರದರ್ಶನ ನೀಡುತ್ತಿದೆ. ಈ ಬಾರಿ ವಿಶ್ವಕಪ್ ಗೆಲ್ಲುತ್ತಾರೆ ನನಗೆ ವಿಶ್ವಾಸವಿದೆ. ನಿಮ್ಮ ಪ್ರಾರ್ಥನೆ, ಬೆಂಬಲ ನಮಗೆ ಅವಶ್ಯಕ. ಸದಾ ಬೆಂಬಲ ನೀಡುತ್ತಿರಿ ಎಂದು ಧವನ್ ಹೇಳಿದ್ದಾರೆ.
I feel emotional to announce that I will no longer be a part of . Unfortunately, the thumb won’t recover on time. But the show must go on.. I'm grateful for all the love & support from my team mates, cricket lovers & our entire nation. Jai Hind!🙏 🇮🇳 pic.twitter.com/zx8Ihm3051
— Shikhar Dhawan (@SDhawan25)ಇದನ್ನೂ ಓದಿ: ಪಾಕ್ ವಿರುದ್ಧ ಭರ್ಜರಿ ಗೆಲವು-ಟ್ರೆಂಡ್ ಆಯ್ತು ಕೊಹ್ಲಿ ಸೈನ್ಯದ ಮಲ್ಹಾರಿ ಡ್ಯಾನ್ಸ್!
ಈ ವಿಶ್ವಕಪ್ ಟೂರ್ನಿಯಲ್ಲಿ ಆರಂಭಿಕ 2 ಪಂದ್ಯ ಆಡಿದ ಧವನ್ ಒಂದು ಶತಕ ಸಿಡಿಸಿದ್ದಾರೆ. ಈ ಮೂಲಕ 62.50ರ ಸರಾಸರಿಯಲ್ಲಿ 125 ರನ್ ಸಿಡಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಧವನ್ ಕೈಬೆರಳಿಗೆ ಗಾಯ ಮಾಡಿಕೊಂಡು ಹೊರ ನಡೆದಿದ್ದರು.