ಟೀಂ ಇಂಡಿಯಾ ಕ್ರಿಕೆಟಿಗರ ಖಾಸಗಿತನಕ್ಕೆ ಅಡ್ಡಿ- 3 ಅತಿಥಿಗಳಿಗೆ ವಾರ್ನಿಂಗ್!

By Web Desk  |  First Published Jun 30, 2019, 5:38 PM IST

ವಿಶ್ವಕಪ್ ಟೂರ್ನಿ ಆಡುತ್ತಿರುವ ಟೀಂ ಇಂಡಿಯಾ ಕ್ರಿಕೆಟಿಗರ ಖಾಸಗಿತನಕ್ಕೆ ಅಡ್ಡಿಯಾಗಿದೆ ಅನ್ನೋ ಆರೋಪ ಕೇಳಿಬಂದಿದೆ. ಈ ಸಂಬಂಧ ಮೂವರು ಅತಿಥಿಗಳಿಗೆ ವಾರ್ನಿಂಗ್ ನೀಡಿದ ಘಟನೆ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದಿದೆ.


ಭಾರತ-ಇಂಗ್ಲೆಂಡ್ ಸ್ಕೋರ್ ಎಷ್ಟು?

ಬರ್ಮಿಂಗ್‌ಹ್ಯಾಮ್(ಜೂ.30): ವಿಶ್ವಕಪ್ ಟೂರ್ನಿಯಲ್ಲಿ ಭಾರತ ವಿರುದ್ಧ ಇಂಗ್ಲೆಂಡ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದೆ. ಇದು ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ. ಆದರೆ ಕೆಲ ಅಭಿಮಾನಿಗಳು ಟೀಂ ಇಂಡಿಯಾ ಕ್ರಿಕೆಟಿಗರಿಗೆ ಅಡ್ಡಿ ಪಡಿಸಿದ ಘಟನೆ ನಡೆದಿದೆ.  ಇಂಗ್ಲೆಂಡ್ ವಿರುದ್ಧದ ಪಂದ್ಯಕ್ಕಾಗಿ ಎಡ್ಜ್‌ಬಾಸ್ಟನ್ ಹೊಟೆಲ್‌ನಲ್ಲಿ ತಂಗಿದ್ದ ಟೀಂ ಇಂಡಿಯಾ ಕ್ರಿಕೆಟಿಗರ ಖಾಸಗಿತನಕ್ಕೆ ಅಡ್ಡಿಯಾಗಿದೆ ಅನ್ನೋ ಆರೋಪ ಕೇಳಿ ಬಂದಿದೆ. ಇದರ ಪರಿಣಾಮ ಮೂವರು ಅತಿಥಿಗಳಿಗೆ ವಾರ್ನಿಂಗ್ ನೀಡಲಾಗಿದೆ.

Tap to resize

Latest Videos

undefined

ಇದನ್ನೂ ಓದಿ: ಕೋಚ್ ಜತೆಗೆ ದ್ರಾವಿಡ್‌ಗೆ ಹೊಸ ಜವಾಬ್ದಾರಿ

ಎಡ್ಜ್‌ಬಾಸ್ಟನ್ ಸಮೀಪ ಹೊಟೆಲ್‌ನಲ್ಲಿ ತಂಗಿದ್ದ ಟೀಂ ಇಂಡಿಯಾ ಕ್ರಿಕೆಟಿಗರ ಖಾಸಗಿತನಕ್ಕೆ ಅದೇ ಹೊಟೆಲ್‌ನಲ್ಲಿ ತಂಗಿದ್ದ ಅತಿಥಿಗಳು ಅಡ್ಡಿ ಪಡಿಸಿದ್ದಾರೆ. ಟೀಂ ಇಂಡಿಯಾ ಕ್ರಿಕೆಟಿಗರು ಹಾಗೂ ಪತ್ನಿಯರ ಫೋಟೋಗಳನ್ನು ಅವರ ಅನುಮತಿ ಇಲ್ಲದೆ ತೆಗೆದಿದ್ದಾರೆ. ಒಂದೆರಡು ಬಾರಿ ಅತಿಥಿಗಳಿಗೆ ಕ್ರಿಕೆಟಿಗರೇ ಎಚ್ಚರಿಸಿದ್ದಾರೆ. ಆದರೆ ಇದನ್ನು ಲೆಕ್ಕಿಸಿದ ಅತಿಥಿಗಳು ಮತ್ತೆ ಮತ್ತೆ ಫೋಟೋಗಳನ್ನು ತೆಗೆದಿದ್ದಾರೆ.

ಇದನ್ನೂ ಓದಿ: ವಿಶ್ವಕಪ್ 2019: ಭಾರತದ ವಿರುದ್ಧ ದಾಖಲೆ ಬರೆದ ಇಂಗ್ಲೆಂಡ್ ಒಪನರ್ಸ್!

ಟೀಂ ಇಂಡಿಯಾ ತಂಡದ ಮ್ಯಾನೇಜರ್ ಹೊಟೆಲ್ ಆಡಳಿತ ಮಂಡಳಿಗೆ ದೂರು ನೀಡಿದ್ದಾರೆ.  ತಕ್ಷಣವೇ ಹೊಟೆಲ್ ಆಡಳಿತ ಮಂಡಳಿ ಆತಿಥಿಗಳನ್ನು ಕರೆಸಿ ವಾರ್ನಿಂಗ್ ನೀಡಿದ್ದಾರೆ. ಮತ್ತೆ ಇದೇ ವರ್ತನೆ ತೋರಿದರೆ ಎಚ್ಚರಿಕೆ ನೀಡದೆ ಹೊಟೆಲ್‌ನಿಂದ ಹೊರದಬ್ಬುವುದಾಗಿ ವಾರ್ನಿಂಗ್ ನೀಡಿದ್ದಾರೆ. 
 

click me!