ವಿಶ್ವಕಪ್ 2019: ಭಾರತದ ವಿರುದ್ಧ ದಾಖಲೆ ಬರೆದ ಇಂಗ್ಲೆಂಡ್ ಒಪನರ್ಸ್!

By Web DeskFirst Published Jun 30, 2019, 4:39 PM IST
Highlights

ಈ  ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಬೌಲರ್‌ಗಳು ಎದುರಾಳಿ ಆರಂಭಿಕರನ್ನು ಅಬ್ಬರಿಸಲು ಬಿಟ್ಟಿಲ್ಲ. ಆದರೆ ಇಂಗ್ಲೆಂಡ್ ವಿರುದ್ದ ಮಾತ್ರ ಸಾಧ್ಯವಾಗಿಲ್ಲ. ಜಾನಿ ಬೈರ್‌ಸ್ಟೋ ಹಾಗೂ ಜೇನ್ ರಾಯ್ ಅಬ್ಬರಕ್ಕೆ ದಾಖಲೆ ನಿರ್ಮಾಣವಾಗಿದೆ. 
 

ಭಾರತ-ಇಂಗ್ಲೆಂಡ್ ಸ್ಕೋರ್ ಎಷ್ಟು?

ಬರ್ಮಿಂಗ್‌ಹ್ಯಾಮ್(ಜೂ.30): ವಿಶ್ವಕಪ್ ಲೀಗ್ ಪಂದ್ಯದಲ್ಲಿ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಹೋರಾಟವನ್ನು ಏಷ್ಯಾ ರಾಷ್ಟ್ರಗಳೇ ಕಾತರಿಂದ ನೋಡುತ್ತಿದೆ. ಕಾರಣ ಈ ಪಂದ್ಯದ ಫಲಿತಾಂಶ ಪಾಕಿಸ್ತಾನ, ಶ್ರೀಲಂಕಾ ಹಾಗೂ ಬಾಂಗ್ಲಾದೇಶಕ್ಕೂ ಪ್ರಮಖವಾಗಿದೆ. ಹೀಗಾಗಿ ಏಷ್ಯಾ ರಾಷ್ಟ್ರಗಳು ಭಾರತಕ್ಕೆ ಬೆಂಬಲ ಸೂಚಿಸಿದೆ. ಆದರೆ ಪಂದ್ಯ ಆರಂಭಗೊಂಡಾಗ ಇಂಗ್ಲೆಂಡ್ ಬ್ಯಾಟ್ಸ್‌ಮನ ಅಬ್ಬರ ಅಭಿಮಾನಿಗಳಿಗೆ ನಿರಾಸೆ ತಂದಿದೆ. ಇಂಗ್ಲೆಂಡ್ ಆರಂಭಿಕರ ಬ್ಯಾಟಿಂಗ್‌ಗೆ ದಾಖಲೆ ನಿರ್ಮಾಣವಾಗಿದೆ. 

ಇದನ್ನೂ ಓದಿ: ಧೋನಿ ಅನುಕರಿಸಲು ಹೋಗಿ ಎಡವಿದ ಸರ್ಫರಾಜ್!

ಈ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದೆ. ಹೀಗಾಗಿ ಯಾವ ಬ್ಯಾಟ್ಸ್‌ಮನ್‌ಗಳು ಭಾರತ ವಿರುದ್ಧ ಉತ್ತಮ ಜೊತೆಯಾಟ ನೀಡಿಲ್ಲ. ಇದೀಗ ಇಂಗ್ಲೆಂಡ್ ಆರಂಭಿಕರು ಈ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ವಿರುದ್ದ ಗರಿಷ್ಠ ಆರಂಭಿಕ ಜೊತೆಯಾಟ ನೀಡಿದ ದಾಖಲೆ ಬರೆದಿದ್ದಾರೆ. ಈ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ವಿರುದ್ಧ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಹಾಗೂ ಆ್ಯರೋನ್ ಫಿಂಚ್ 61 ರನ್ ಜೊತೆಯಾಟ ನೀಡೋ ಮೂಲಕ ಗರಿಷ್ಠ ಜೊತೆಯಾಟ ನೀಡಿದ ಸಾಧನೆ ಮಾಡಿದ್ದರು. ಇದೀಗ ಈ ದಾಖಲೆಯನ್ನು ಇಂಗ್ಲೆಂಡ್‌ನ ಜೇಸನ್ ರಾಯ್ ಹಾಗೂ ಜಾನಿ ಬೈರ್‌ಸ್ಟೋ ಪುಡಿ ಮಾಡಿದ್ದಾರೆ.

ಇದನ್ನೂ ಓದಿ: ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದ ಲಂಕಾ ವೇಗಿ ನುವಾನ್ ಪ್ರದೀಪ್

 ಜೇಸನ್ ರಾಯ್ ಹಾಗೂ ಬೈರ್‌ಸ್ಟೋ 160 ರನ್ ಜೊತೆಯಾಟ ನೀಡೋ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ. ಇವರಿಬ್ಬರ ಜೊತೆಯಾಟಕ್ಕೆ ಬ್ರೇಕ್ ಹಾಕಲು ಭಾರತ ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ, ಆದರೆ ಸಾಧ್ಯವಾಗುತ್ತಿಲ್ಲ. ಸದ್ಯ ಇಂಗ್ಲೆಂಡ್ ಅಬ್ಬರ ನೋಡಿದರೆ 350 ರನ್ ಗಡಿ ದಾಟುವುದು ಕಷ್ಟವಲ್ಲ.

ವಿಶ್ವಕಪ್ 2019: ಭಾರತ ವಿರುದ್ದ ಗರಿಷ್ಠ ಆರಂಭಿಕ ಜೊತೆಯಾಟ
ಜೇಸನ್ ರಾಯ್, ಜಾನಿ ಬೈರ್‌ಸ್ಟೋ    160
ಡೇವಿಡ್ ವಾರ್ನರ್ -ಆರೋನ್ ಫಿಂಚ್ 61
ಹಜ್ರತುಲ್ಹಾ ಜಜೈ - ಗುಲ್ಬಾದಿನ್ ನೈಬ್ 20
 

click me!