ವಿಶ್ವಕಪ್ 2019: ಅಂಪೈರ್‌ ಗಳ ಭಾರೀ ಎಡವಟ್ಟು

By Web DeskFirst Published Jul 16, 2019, 12:32 PM IST
Highlights

ಪ್ರಸಕ್ತ ವಿಶ್ವಕಪ್ ಟೂರ್ನಿಯಲ್ಲಿ ಅಂಪೈರ್ ತಪ್ಪುಗಳು ನಿರ್ಣಯಗಳು ಹಲವಾರು ಬಾರಿ ಚರ್ಚೆಗೆ ಗ್ರಾಸವಾಗಿವೆ. ಅದರಲ್ಲೂ ಫೈನಲ್ ಪಂದ್ಯದಲ್ಲಿ ಆದ ಎಡವಟ್ಟು ನ್ಯೂಜಿಲೆಂಡ್ ಚೊಚ್ಚಲ ವಿಶ್ವಕಪ್ ಗೆಲ್ಲುವ ಕನಸನ್ನು ಭಗ್ನಗೊಳಿಸಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...  

ಲಂಡನ್‌[ಜು.16]: ಐಸಿಸಿ ಏಕದಿನ ವಿಶ್ವಕಪ್‌ನ ಫೈನಲ್‌ ಪಂದ್ಯದ ಟರ್ನಿಂಗ್‌ ಪಾಯಿಂಟ್‌ಗಳಲ್ಲಿ ಓವರ್‌ ಥ್ರೋ ಸಹ ಒಂದು. ಇಂಗ್ಲೆಂಡ್‌ ಇನ್ನಿಂಗ್ಸ್‌ನ ಕೊನೆ ಓವರ್‌ನ 4ನೇ ಎಸೆತದಲ್ಲಿ ಬೆನ್‌ ಸ್ಟೋಕ್ಸ್‌ 2 ರನ್‌ ಓಡುವ ಯತ್ನ ನಡೆಸಿದರು. ಮಿಡ್‌ ವಿಕೆಟ್‌ನಲ್ಲಿದ್ದ ಕ್ಷೇತ್ರರಕ್ಷಕ ಮಾರ್ಟಿನ್‌ ಗಪ್ಟಿಲ್‌ ಸ್ಟಂಫ್ಸ್‌ನತ್ತ ಎಸೆದ ಚೆಂಡು, ಸ್ಟೋಕ್ಸ್‌ ಬ್ಯಾಟ್‌ಗೆ ಬಡಿದು ಬೌಂಡರಿ ಸೇರಿತು. ಓವರ್‌ ಥ್ರೋನಿಂದ ಹೆಚ್ಚುವರಿ 4 ರನ್‌ ದೊರೆಯಿತು. ಅಂಪೈರ್‌ಗಳಾದ ಕುಮಾರ ಧರ್ಮಸೇನ ಹಾಗೂ ಮಾರಾಯಸ್‌ ಎರಾಸ್ಮಸ್‌ ಎಡವಟ್ಟು ಮಾಡಿದ್ದು 

Simon Taufel says there was "an error of judgment" in awarding England six runs, instead of five, for the overthrow that hit Ben Stokes’ bat and ran to the boundary pic.twitter.com/15xWeukZIu

— ESPNcricinfo (@ESPNcricinfo)

ಐಸಿಸಿಯ ನಿಯಮದ ಪ್ರಕಾರ, ಓವರ್‌ ಥ್ರೋನಲ್ಲಿ ತಂಡಗಳಿಗೆ ಸಿಗುವ ರನ್‌ ಪೆನಾಲ್ಟಿಎಂದು ಪರಿಗಣಿಸಲಾಗುತ್ತದೆ. ಕ್ಷೇತ್ರರಕ್ಷಕ ಚೆಂಡನ್ನು ಎಸೆಯುವ ವೇಳೆ ಬ್ಯಾಟ್ಸ್‌ಮನ್‌ಗಳು ಪಿಚ್‌ನ ಮಧ್ಯದಲ್ಲಿ ಒಬ್ಬರನ್ನೊಬ್ಬರು ದಾಟಿರಬೇಕು. ಆಗ ಮಾತ್ರ ರನ್‌ ಲೆಕ್ಕಕ್ಕೆ ಸಿಗಲಿದೆ. ಗಪ್ಟಿಲ್‌ ಚೆಂಡನ್ನು ಎಸೆಯುವ ವೇಳೆ ಸ್ಟೋಕ್ಸ್‌ ಹಾಗೂ ಆದಿಲ್‌ ರಶೀದ್‌ ಒಬ್ಬರನ್ನೊಬ್ಬರು ದಾಟಿರಲಿಲ್ಲ. ಹೀಗಾಗಿ ಎರಡು ರನ್‌ ಓಡಿದರು, ಇಂಗ್ಲೆಂಡ್‌ ಖಾತೆಗೆ ಅಧಿಕೃತವಾಗಿ 1 ರನ್‌ ಮಾತ್ರ ಸೇರ್ಪಡೆಗೊಳ್ಳಬೇಕಿತ್ತು. ಎಂದರೆ 6 ರನ್‌ ಬದಲು ಇಂಗ್ಲೆಂಡ್‌ಗೆ 5 ರನ್‌ ಸಿಗಬೇಕಿತ್ತು. ಜತೆಗೆ ಮುಂದಿನ ಎಸೆತವನ್ನು ರಶೀದ್‌ ಎದುರಿಸಬೇಕಿತ್ತು. ಹೀಗಾಗಿದ್ದರೆ ಕೊನೆ 2 ಎಸೆತಗಳಲ್ಲಿ ಇಂಗ್ಲೆಂಡ್‌ಗೆ 4 ರನ್‌ ಅಗತ್ಯವಿರುತ್ತಿತ್ತು. ನ್ಯೂಜಿಲೆಂಡ್‌ ಗೆಲ್ಲುವ ಅವಕಾಶ ಹೆಚ್ಚಾಗುತ್ತಿತ್ತು.

ಏಕದಿನ ವಿಶ್ವಕಪ್‌ಗೆ ಅದ್ಧೂರಿ ತೆರೆ: 2019ರ ವಿಶ್ವಕಪ್ ಪ್ರಮುಖಾಂಶಗಳಿವು

ಮಾಜಿ ಐಸಿಸಿ ಅಂಪೈರ್‌ಗಳಾದ ಆಸ್ಪ್ರೇಲಿಯಾದ ಸೈಮನ್‌ ಟಾಫಲ್‌, ಭಾರತದ ಕೆ.ಹರಿಹರನ್‌, ಇಂಗ್ಲೆಂಡ್‌ಗೆ 5 ರನ್‌ ಮಾತ್ರ ಸಿಗಬೇಕಿತ್ತು ಎನ್ನುವುದನ್ನು ಖಚಿತಪಡಿಸಿದ್ದಾರೆ. ಆದರೆ ಐಸಿಸಿ ಮಾತ್ರ ಅಂಪೈರ್‌ಗಳ ಎಡವಟ್ಟಿನ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದೆ.
 

click me!
Last Updated Jul 16, 2019, 12:32 PM IST
click me!