
ಮ್ಯಾಂಚೆಸ್ಟರ್[ಜೂ.18]: ವಿಶ್ವಕಪ್ ಟೂರ್ನಿಯಲ್ಲಿಂದು ಆತಿಥೇಯ ಇಂಗ್ಲೆಂಡ್ ಹಾಗೂ ಆಫ್ಘಾನಿಸ್ತಾನ ತಂಡಗಳು ಮುಖಾಮುಖಿಯಾಗುತ್ತಿದ್ದು ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ದುಕೊಂಡಿದೆ.
ಇಂಗ್ಲೆಂಡ್ ತಂಡದಲ್ಲಿ 2 ಬದಲಾವಣೆ ಮಾಡಲಾಗಿದ್ದು, ಜೇಸನ್ ರಾಯ್ ಬದಲಿಗೆ ಜೇಮ್ಸ್ ವಿನ್ಸ್ ಹಾಗೂ ಲಿಯಾಮ್ ಫ್ಲಂಕೆಟ್ ಬದಲಿಗೆ ಮೊಯಿನ್ ಅಲಿ ತಂಡ ಕೂಡಿಕೊಂಡಿದ್ದಾರೆ.
ಆಫ್ಘನ್ ವಿರುದ್ಧದ ಪಂದ್ಯಕ್ಕೆ ಸ್ಟಾರ್ ಬ್ಯಾಟ್ಸ್‌ಮನ್ ಔಟ್..!
ಇನ್ನು ಆಫ್ಘನ್ ತಂಡದಲ್ಲೂ ಮೂರು ಬದಲಾವಣೆ ಮಾಡಲಾಗಿದ್ದು, ಅಫ್ತಾಬ್, ಜಝಾಯಿ ಮತ್ತು ಹಮೀದ್’ಗೆ ರೆಸ್ಟ್ ನೀಡಲಾಗಿದ್ದು, ಡಾವಲ್ಟ್, ನಜೀಬುಲ್ಲಾ ಮತ್ತು ಮುಜೀಬ್ ಉರ್ ರೆಹಮಾನ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಒಂದು ಸೋಲು ಮೂರು ಗೆಲುವಿನೊಂದಿಗೆ ಆತಿಥೇಯ ಇಂಗ್ಲೆಂಡ್ ತಂಡ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದರೆ, ಆಡಿದ ನಾಲ್ಕೂ ಪಂದ್ಯಗಳಲ್ಲಿ ಸೋಲು ಕಂಡಿರುವ ಆಫ್ಘನ್ ಅಂಕಪಟ್ಟಿಯಲ್ಲಿ ಕಡೆಯ ಸ್ಥಾನದಲ್ಲಿದೆ.
ತಂಡಗಳು ಹೀಗಿವೆ:
ಇಂಗ್ಲೆಂಡ್:
ಆಫ್ಘಾನಿಸ್ತಾನ: