ಮಳೆಗೆ ಆಹುತಿಯಾದ ಬಾಂಗ್ಲಾ-ಲಂಕಾ ಮ್ಯಾಚ್

Published : Jun 11, 2019, 07:00 PM IST
ಮಳೆಗೆ ಆಹುತಿಯಾದ ಬಾಂಗ್ಲಾ-ಲಂಕಾ ಮ್ಯಾಚ್

ಸಾರಾಂಶ

ಶ್ರೀಲಂಕಾ-ಬಾಂಗ್ಲಾದೇಶ ನಡುವೆ ನಡೆಯಬೇಕಿದ್ದ ವಿಶ್ವಕಪ್ ಟೂರ್ನಿಯ 16ನೇ ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಇದರೊಂದಿಗೆ ಈ ಟೂರ್ನಿಯಲ್ಲಿ ಮೂರನೇ ಪಂದ್ಯ ಮಳೆಗೆ ಆಹುತಿಯಾದಂತಾಗಿದೆ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ

ಬ್ರಿಸ್ಟಾಲ್[ಜೂ.11]: ನಿರಂತರವಾಗಿ ಸುರಿದ ಮಳೆಯಿಂದಾಗಿ ಬಾಂಗ್ಲಾದೇಶ-ಶ್ರೀಲಂಕಾ ನಡುವಿನ ಪಂದ್ಯ ಒಂದೂ ಎಸೆತ ಕಾಣದೆ ರದ್ದಾಗಿದೆ. ಉಭಯ ತಂಡಗಳು ಒಂದೊಂದು ಅಂಕ ಹಂಚಿಕೊಂಡಿವೆ.

ಎರಡು ತಂಡಗಳ ಪಾಲಿಗೆ ಮಹತ್ವದ ಪಂದ್ಯವೆನಿಸಿದ್ದ ಪಂದ್ಯವೀಗ ಮಳೆಗೆ ಆಹುತಿಯಾಗಿದೆ. ಇದೀಗ ಶ್ರೀಲಂಕಾ 4 ಪಂದ್ಯಗಳನ್ನಾಡಿ 4 ಅಂಕ ಗಳಿಸಿಕೊಂಡರೆ, ಬಾಂಗ್ಲಾದೇಶ 4 ಪಂದ್ಯಗಳನ್ನಾಡಿ 3 ಅಂಕ ಗಳಿಸಿಕೊಂಡಿದೆ. 

ಈ ಮೊದಲು ಪಾಕಿಸ್ತಾನ-ಶ್ರೀಲಂಕಾ ನಡುವಿನ ಪಂದ್ಯವು ಮಳೆಯಿಂದಾಗಿ ರದ್ದಾಗಿತ್ತು. ಇನ್ನು ಸೋಮವಾರ ದಕ್ಷಿಣ ಆಫ್ರಿಕಾ ಹಾಗೂ ವೆಸ್ಟ್ ಇಂಡೀಸ್ ನಡುವಿನ ಪಂದ್ಯವು ಮಳೆಯಿಂದಾಗಿ ರದ್ದಾಗಿತ್ತು. ಇದೀಗ 4 ಅಂಕಗಳೊಂದಿಗೆ ಶ್ರೀಲಂಕಾ ಅಂಕಪಟ್ಟಿಯಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಹಿಂದಿಕ್ಕಿ 5ನೇ ಸ್ಥಾನಕ್ಕೇರಿದೆ.

ಶ್ರೀಲಂಕಾ ತಂಡವು ಜೂನ್ 15ರಂದು ನಡೆಯಲಿರುವ ತನ್ನ ಮುಂದಿನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದ್ದರೆ, ಬಾಂಗ್ಲಾದೇಶ ತಂಡವು ಜೂನ್ 17ರಂದು ವೆಸ್ಟ್ ಇಂಡೀಸ್ ವಿರುದ್ಧ ಸೆಣಸಲಿದೆ.

PREV
click me!

Recommended Stories

ವಿಶ್ವಕಪ್ ಫೈನಲ್ ವಿವಾದಾತ್ಮಕ ತೀರ್ಪು; ಮೌನ ಮುರಿದ ಅಂಪೈರ್ ಧರ್ಮಸೇನಾ!
ವಿಶ್ವಕಪ್ ಫೈನಲ್ ಗೆಲುವು ನ್ಯಾಯವಲ್ಲ; ಇಂಗ್ಲೆಂಡ್ ನಾಯಕ ವಿಷಾದ!