BigBreaking: ಟೀಂ ಇಂಡಿಯಾಗೆ ಬಿಗ್ ಶಾಕ್, ಶತಕವೀರ ವಿಶ್ವಕಪ್ ಟೂರ್ನಿಯಿಂದಲೇ ಔಟ್

Published : Jun 11, 2019, 01:38 PM ISTUpdated : Jun 11, 2019, 09:01 PM IST
BigBreaking: ಟೀಂ ಇಂಡಿಯಾಗೆ ಬಿಗ್ ಶಾಕ್, ಶತಕವೀರ ವಿಶ್ವಕಪ್ ಟೂರ್ನಿಯಿಂದಲೇ ಔಟ್

ಸಾರಾಂಶ

ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾಗೆ ಬಿಗ್ ಶಾಕ್‌ವೊಂದು ಎದುರಾಗಿದ್ದು ತಂಡದ ಸ್ಟಾರ್ ಕ್ರಿಕೆಟಿಗ ಗಾಯದ ಸಮಸ್ಯೆಯಿಂದಾಗಿ ವಿಶ್ವಕಟ್ ಟೂರ್ನಿಯಿಂದ ಮೂರು ವಾರಗಳ ಮಟ್ಟಿಗೆ ಹೊರಬಿದ್ದಿದ್ದಾರೆ.

ನವದೆಹಲಿ[ಜೂ.11]: ವಿಶ್ವಕಪ್ ಟೂರ್ನಿಯಲ್ಲಿ ಭರ್ಜರಿ ಆರಂಭ ಪಡೆದಿರುವ ಟೀಂ ಇಂಡಿಯಾಗೀಗ ಆಘಾತವೊಂದು ಎದುರಾಗಿದ್ದು, ಆಸ್ಟ್ರೇಲಿಯಾ ವಿರುದ್ಧ ಗಾಯಕ್ಕೆ ತುತ್ತಾಗಿದ್ದ ತಂಡದ ಸ್ಟಾರ್ ಆರಂಭಿಕ ಬ್ಯಾಟ್ಸ್’ಮನ್ ಶಿಖರ್ ಧವನ್ ವಿಶ್ವಕಪ್ ಟೂರ್ನಿಯಿಂದ ಮೂರು ವಾರಗಳ ಮಟ್ಟಿಗೆ ಹೊರಬಿದ್ದಿದ್ದಾರೆ.

"

ಆಸ್ಟ್ರೇಲಿಯಾ ವಿರುದ್ಧ ಶತಕ ಸಿಡಿಸಿ ಮಿಂಚಿದ್ದ ಧವನ್, ವೇಗಿ ನೇಥನ್ ಕೌಲ್ಟರ್-ನೀಲ್ ಬೌಲಿಂಗ್ ವೇಳೆ ಧವನ್ ಎಡಗೈ ಹೆಬ್ಬೆರಳಿಗೆ ಗಾಯವಾಗಿತ್ತು. ಗಾಯದ ನಡುವೆಯೂ ಧವನ್ 109 ಎಸೆತಗಳಲ್ಲಿ 117 ರನ್ ಸಿಡಿಸಿದ್ದರು. ಬ್ಯಾಟಿಂಗ್ ಮುಕ್ತಾಯದ ಬಳಿಕ ಧವನ್ ಕ್ರೀಸ್ ಗೆ ಇಳಿದಿರಲಿಲ್ಲ. ಧವನ್ ಅನುಪಸ್ಥಿತಿಯಲ್ಲಿ ರವೀಂದ್ರ ಜಡೇಜಾ ಫೀಲ್ಡಿಂಗ್ ಮಾಡಿದ್ದರು.

ಆಸ್ಟ್ರೇಲಿಯಾ ಮಣಿಸಿ ಸೇಡು ತೀರಿಸಿಕೊಂಡ ಟೀಂ ಇಂಡಿಯಾ!

ಧವನ್ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದು, ವೈದ್ಯರು ಮೂರು ವಾರಗಳ ವಿಶ್ರಾಂತಿ ಮಾಡಲು ಸೂಚಿಸಿದ್ದಾರೆ. ಇದೀಗ ಧವನ್ ಅನುಪಸ್ಥಿತಿಯಲ್ಲಿ ಮೀಸಲು ಆಟಗಾರರಾದ ರಿಷಭ್ ಪಂತ್ ಇಲ್ಲವೇ ಶ್ರೇಯಸ್ ಅಯ್ಯರ್ ತಂಡ ಕೂಡಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. 

ಮೊದಲು ಬ್ಯಾಟ್ ಮಾಡಿದ್ದ ಟೀಂ ಇಂಡಿಯಾ ಧವನ್ ಶತಕದ ನೆರವಿನಿಂದ 5 ವಿಕೆಟ್ ಕಳೆದುಕೊಂಡು 352 ರನ್ ಬಾರಿಸಿತ್ತು. ಇದಕ್ಕುತ್ತರವಾಗಿ ಆಸ್ಟ್ರೇಲಿಯಾ 316 ರನ್ ಗಳಿಗೆ ಸರ್ವಪತನ ಕಾಣುವುದರ ಮೂಲಕ 36 ರನ್‌ಗಳ ಸೋಲು ಕಂಡಿತ್ತು.


 

PREV
click me!

Recommended Stories

ವಿಶ್ವಕಪ್ ಫೈನಲ್ ವಿವಾದಾತ್ಮಕ ತೀರ್ಪು; ಮೌನ ಮುರಿದ ಅಂಪೈರ್ ಧರ್ಮಸೇನಾ!
ವಿಶ್ವಕಪ್ ಫೈನಲ್ ಗೆಲುವು ನ್ಯಾಯವಲ್ಲ; ಇಂಗ್ಲೆಂಡ್ ನಾಯಕ ವಿಷಾದ!