3ನೇ ಮಗುವಿನ ನಿರೀಕ್ಷೆಯಲ್ಲಿ ಡೇವಿಡ್ ವಾರ್ನರ್!

By Web DeskFirst Published Jun 29, 2019, 9:41 AM IST
Highlights

ಆಸ್ಟ್ರೇಲಿಯಾ ಸ್ಫೋಟಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ 3ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ವಾರ್ನರ್ ಪತ್ನಿ ಕ್ಯಾಂಡೈಸ್ ಈಗಾಗಲೇ ಲಂಡನ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಬ್ಬರು ಹೆಣ್ಣುಮಕ್ಕಳ ತಂದೆಯಾಗಿರುವ ವಾರ್ನರ್ ಇದೀಗ ಪತ್ನಿ ಜೊತೆ ಆಸ್ಪತ್ರೆಯಲ್ಲಿದ್ದಾರೆ.

ವಿಶ್ವಕಪ್ ಪಂದ್ಯದ ಸ್ಕೋರ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ

ಲಂಡನ್‌(ಜೂ.29): ಆಸ್ಪ್ರೇಲಿಯಾದ ಸ್ಫೋಟಕ ಬ್ಯಾಟ್ಸ್‌ಮನ್‌ ಡೇವಿಡ್‌ ವಾರ್ನರ್‌ರ ಪತ್ನಿ ಕ್ಯಾಂಡೈಸ್‌ ಭಾನುವಾರ 3ನೇ ಮಗುವಿಗೆ ಜನ್ಮ ನೀಡಲಿದ್ದಾರೆ. ಶನಿವಾರ ನ್ಯೂಜಿಲೆಂಡ್‌ ವಿರುದ್ಧದ ಪಂದ್ಯದ ಬಳಿಕ ಆಸ್ಪ್ರೇಲಿಯಾ ತಂಡಕ್ಕೆ ಒಂದು ವಾರ ವಿರಾಮವಿದ್ದು, ಈ ಸಮಯದಲ್ಲಿ ವಾರ್ನರ್‌ ಪತ್ನಿಯನ್ನು ಹೆರಿಗಾಗಿ ಆಸ್ಪತ್ರೆಗೆ ದಾಖಲಿಸಲು ನಿರ್ಧರಿಸಿದ್ದಾರೆ. ಈ ತಿಂಗಳ ಆರಂಭದಲ್ಲೇ ಕ್ಯಾಂಡೈಸ್‌, ಆಸ್ಪ್ರೇಲಿಯಾದಿಂದ ಹೊರಟು ಲಂಡನ್‌ ತಲುಪಿದ್ದರು. ವಾರ್ನರ್‌ಗೆ ಸದ್ಯ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

ಇದನ್ನೂ ಓದಿ: ಸುನಿಲ್‌ ಶೆಟ್ಟಿಪುತ್ರಿ ಜತೆ ಕೆ.ಎಲ್.ರಾಹುಲ್‌ ಡೇಟಿಂಗ್‌?

ಬಾಲ್ ಟ್ಯಾಂಪರಿಂಗ್ ಪ್ರಕರಣದಿಂದ ನಿಷೇಧಕ್ಕೊಳಗಾಗಿದ್ದ ಡೇವಿಡ್ ವಾರ್ನರ್ ಸಾಕಷ್ಟು ನೋವು ಅನುಭವಿಸಿದ್ದಾರೆ. ವಾರ್ನರ್ ಹಾಗೂ ಕುಟುಂಬ ಹೆಜ್ಜೆ ಹೆಜ್ಜೆಗೂ ಅವಮಾನ ಎದುರಿಸಿತು. ಇದೇ ವೇಳೆ ವಾರ್ನರ್ ಪತ್ನಿ ಕ್ಯಾಂಡೈಸ್ 2 ಬಾರಿ ಗರ್ಭಪಾತವಾಗಿತ್ತು. ಲಂಡನ್‌ನಲ್ಲಿ ವಾರ್ನರ್ ಪತ್ನಿ 3ನೇ ಮಗುವಿಗೆ ಜನ್ಮ ನೀಡಲಿದ್ದಾರೆ.

click me!