ವಿಶ್ವಕಪ್‌ನಿಂದ ಪಾಕ್ ಹೊರಗಿಡಲು ಭಾರತ ಬೇಕಂತಲೇ ಸೋಲು ಕಾಣುತ್ತೆ: ಅಲಿ!

By Web DeskFirst Published Jun 29, 2019, 9:25 AM IST
Highlights

ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಸೆಮಿಫೈನಲ್ ಪ್ರವೇಶಿಸಬೇಕಾದರೆ, ಪಾಕ್ ಗೆಲುವು ಮಾತ್ರವಲ್ಲ, ಭಾರತದ ಪ್ರದರ್ಶನವೂ ಅವಲಂಬಿತವಾಗಿದೆ. ಭಾರತ ಅಂತಿಮ 2 ಪಂದ್ಯದಲ್ಲಿ ಗೆದ್ದರೆ, ಪಾಕಿಸ್ತಾನ ಸೆಮೀಸ್ ಹಾದಿ ಕೊಂಚ ಸುಗಮವಾಗಲಿದೆ. ಆದರೆ ಭಾರತ ಬೇಕಂತಲೇ ಅಂತಿಮ 2 ಪಂದ್ಯ ಸೋಲಲಿದೆ ಅನ್ನೋ ಹೇಳಿಕೆ ಇದೀಗ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

ಕರಾಚಿ(ಜೂ.29): ಪಾಕಿಸ್ತಾನ ತಂಡವನ್ನು ಸೆಮಿಫೈನಲ್‌ನಿಂದ ದೂರವಿಡಲು ಭಾರತ ತಂಡ ತನ್ನ ಕೊನೆ 2 ಲೀಗ್‌ ಪಂದ್ಯಗಳಲ್ಲಿ ಶ್ರೀಲಂಕಾ, ಬಾಂಗ್ಲಾದೇಶ ವಿರುದ್ಧ ಸೋಲು ಕಾಣಲಿದೆ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಬಸಿತ್‌ ಅಲಿ ಅತಿರೇಕದ ಹೇಳಿಕೆ ನೀಡಿದ್ದಾರೆ. ‘ಪಾಕಿಸ್ತಾನ ಸೆಮಿಫೈನಲ್‌ ಪ್ರವೇಶಿಸುವುದನ್ನು ಭಾರತ ಸಹಿಸುವುದಿಲ್ಲ. ಬಾಂಗ್ಲಾ, ಲಂಕಾ ವಿರುದ್ಧ ಬೇಕಂತಲೇ ಸೋಲಲಿದೆ ಎಂದಿದ್ದಾರೆ.

ಇದನ್ನೂ ಓದಿ: ಸುನಿಲ್‌ ಶೆಟ್ಟಿಪುತ್ರಿ ಜತೆ ಕೆ.ಎಲ್.ರಾಹುಲ್‌ ಡೇಟಿಂಗ್‌?

ಆಷ್ಘಾನಿಸ್ತಾನ ವಿರುದ್ಧ ಭಾರತ ಎಷ್ಟು ಕೆಟ್ಟಪ್ರದರ್ಶನ ತೋರಿತು ಎನ್ನುವುದನ್ನು ಎಲ್ಲರೂ ನೋಡಿದ್ದಾರೆ’. ಇನ್ನುಳಿದ 2 ಪಂದ್ಯದಲ್ಲಿ ಭಾರತ ಸೋಲು ಕಾಣುತ್ತೆ. ಈ ಮೂಲಕ ವಿಶ್ವಕಪ್ ಟೂರ್ನಿಯಿಂದ ಪಾಕಿಸ್ತಾನ ತಂಡವನ್ನು ಹೊರಗಿಡಲಿದೆ ಎಂದು ಸ್ಥಳೀಯ ಟೀವಿ ವಾಹಿನಿಯೊಂದರ ಕಾರ್ಯಕ್ರಮದಲ್ಲಿ ಬಸಿತ್ ಹೇಳಿದ್ದಾರೆ. ಲಂಕಾ, ಬಾಂಗ್ಲಾದೇಶ ಗೆದ್ದರೆ ಪಾಕಿಸ್ತಾನದ ಸೆಮೀಸ್‌ ಹಾದಿ ಕಠಿಣಗೊಳ್ಳಲಿದೆ.


 

Basit Ali reckons India will not want Pakistan to qualify for the semi-finals and may play poorly in their matches against Sri Lanka and Bangladesh 🙄 pic.twitter.com/vwg3oFnnpl

— Saj Sadiq (@Saj_PakPassion)
click me!