ಸುನಿಲ್‌ ಶೆಟ್ಟಿಪುತ್ರಿ ಜತೆ ಕೆ.ಎಲ್.ರಾಹುಲ್‌ ಡೇಟಿಂಗ್‌?

By Web Desk  |  First Published Jun 29, 2019, 9:12 AM IST

ಬಾಲಿವುಡ್ ನಟ ಸುನಿಲ್ ಶೆಟ್ಟಿ ಪುತ್ರಿ ಆಥಿಯಾ ಶೆಟ್ಟಿ ಜೊತೆ ಟೀಂ ಇಂಡಿಯಾ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ಡೇಟಿಂಗ್ ನಡೆಸುತ್ತಿದ್ದಾರಾ? ಆಥಿಯಾ ಆಪ್ತ ಮೂಲಗಳು ಹೇಳೋದೇನು? ಇಲ್ಲಿದೆ ವಿವರ.


ಮುಂಬೈ(ಜೂ.29): ಭಾರತ ತಂಡದ ಕ್ರಿಕೆಟಿಗ ಕೆ.ಎಲ್‌.ರಾಹುಲ್‌, ಬಾಲಿವುಡ್‌ನ ಹಿರಿಯ ನಟ ಸುನಿಲ್‌ ಶೆಟ್ಟಿಪುತ್ರಿ, ನಟಿ ಆಥಿಯಾ ಶೆಟ್ಟಿಜತೆ ಡೇಟಿಂಗ್‌ ನಡೆಸುತ್ತಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ. ಇಂಗ್ಲೆಂಡ್‌ನಲ್ಲಿ ವಿಶ್ವಕಪ್‌ ಆಡುತ್ತಿರುವ ರಾಹುಲ್‌ ಈ ಸುದ್ದಿ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ರಾಹುಲ್‌ ವಕ್ತಾರರು ಸಹ ಈ ಸುದ್ದಿ ಬಗ್ಗೆ ಮಾತನಾಡಲು ನಿರಾಕರಿಸಿದ್ದಾರೆ.

ಇದನ್ನೂ ಓದಿ:  ಎಂಕ್ಲೆಗ್ ಸೆಂಚುರಿ ಬೋಡು- ರಾಹುಲ್‌ಗೆ ತುಳು ಭಾಷೆಯಲ್ಲಿ ಮನವಿ!

Tap to resize

Latest Videos

ಆದರೆ ಆಥಿಯಾರ ಆಪ್ತ ಮೂಲಗಳ ಪ್ರಕಾರ ಈ ವರ್ಷ ಫೆಬ್ರವರಿಗೂ ಮೊದಲು ಇಬ್ಬರೂ ಡೇಟಿಂಗ್‌ ನಡೆಸಲು ಆರಂಭಿಸಿದರು ಎನ್ನಲಾಗಿದೆ. ಆಥಿಯಾರ ಆಪ್ತ ಸ್ನೇಹಿತೆ ಆಕಾಂಕ್ಷ ರಂಜನ್‌ ಕಪೂರ್‌ ಜತೆಗೂ ರಾಹುಲ್‌ ಹೆಸರು ಕೇಳಿಬಂದಿತ್ತು. ಏಪ್ರಿಲ್‌ನಲ್ಲಿ ರಾಹುಲ್‌, ಆಥಿಯಾ ಹಾಗೂ ತಾವಿರುವ ಫೋಟೋವನ್ನು ಆಕಾಂಕ್ಷ ಇನ್‌ಸ್ಟಾಗ್ರಾಂನಲ್ಲಿ ಹಾಕಿದ್ದರು.

 

 
 
 
 
 
 
 
 
 
 
 
 
 

...n i’m so good with that 💛

A post shared by 🦋Kanch (@akansharanjankapoor) on Apr 25, 2019 at 7:01am PDT

ಇದನ್ನೂ ಓದಿ:  ವಿಶ್ವಕಪ್ 2019: ಪಾಕ್ ವಿರುದ್ದ ದಾಖಲೆ ಬರೆದ ರೋಹಿತ್-ರಾಹುಲ್ ಜೋಡಿ!

ವಿಶ್ವಕಪ್ ಟೂರ್ನಿ ಆಡುತ್ತಿರುವ ಕೆಎಲ್ ರಾಹುಲ್ ಸದ್ಯ ಆರಂಭಿಕನಾಗಿ ಬಡ್ತಿ ಪಡೆದಿದ್ದಾರೆ. ಶಿಖರ್ ಧವನ್ ಇಂಜುರಿಯಿಂದ ರಾಹುಲ್‌ಗೆ ಆರಂಭಿಕ ಸ್ಥಾನ ನೀಡಲಾಗಿದೆ. ಈ ವಿಶ್ವಕಪ್ ಟೂರ್ನಿಯ 5 ಪಂದ್ಯಗಳಿಂದ ರಾಹುಲ್ 172 ರನ್ ಸಿಡಿಸಿದ್ದಾರೆ. ಇದರಲ್ಲಿ 1 ಅರ್ಧಶತಕ ದಾಖಲಾಗಿದೆ.

click me!