ವಿಂಡೀಸ್‌ಗೆ ಮತ್ತೊಂದು ಹೊಡೆತ- ಆ್ಯಂಡ್ರೆ ರಸೆಲ್ ಟೂರ್ನಿಯಿಂದ ಔಟ್

Published : Jun 24, 2019, 09:29 PM ISTUpdated : Jun 24, 2019, 09:45 PM IST
ವಿಂಡೀಸ್‌ಗೆ ಮತ್ತೊಂದು ಹೊಡೆತ- ಆ್ಯಂಡ್ರೆ ರಸೆಲ್ ಟೂರ್ನಿಯಿಂದ ಔಟ್

ಸಾರಾಂಶ

ವಿಶ್ವಕಪ್ ಟೂರ್ನಿಯಲ್ಲಿ ಸತತ ಸೋಲಿನಿಂದ ಕಂಗೆಟ್ಟಿರುವ ವೆಸ್ಟ್ ಇಂಡೀಸ್ ತಂಡಕ್ಕೆ ಇದೀಗ ಮತ್ತೊಂದು ಆಘಾತ ಎದುರಾಗಿದೆ. ತಂಡದ ಸ್ಟಾರ್ ಆಲ್ರೌಂಡರ್ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. 

ಲಂಡನ್(ಜೂ.24): ವಿಶ್ವಕಪ್ ಟೂರ್ನಿಯಲ್ಲಿ ವೆಸ್ಟ್ ಇಂಡೀಸ್ ತಂಡ ಕೇವಲ 1 ಗೆಲುವಿನೊಂದಿಗೆ 8ನೇ ಸ್ಥಾನದಲ್ಲಿದೆ. ಕಳೆದ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ದಿಟ್ಟ ಹೋರಾಟ ನೀಡಿದರೂ ಗೆಲುವು ಸಿಗಲಿಲ್ಲ. ಸೋಲಿನ ಆಘಾತದ ಬೆನ್ನಲ್ಲೇ ವೆಸ್ಟ್ ಇಂಡೀಸ್ ತಂಡಕ್ಕೆ ಮತ್ತೊಂದು ಹೊಡೆತ ಬಿದ್ದಿದೆ. ತಂಡದ ಆಲ್ರೌಂಡರ್ ಆ್ಯಂಡ್ರೆ ರಸೆಲ್ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದ್ದಾರೆ.

ಇದನ್ನೂ ಓದಿ: ಇಂಡೋ-ಪಾಕ್ ಪಂದ್ಯದ ಬಳಿಕ ಆತ್ಮಹತ್ಯೆಗೆ ಯೋಚಿಸಿದ್ದ ಕೋಚ್ 

ಮೊಣಕಾಲಿನ ಗಾಯದಿಂದ ಬಳಲುತ್ತಿರುವ ಆ್ಯಂಡ್ರೆ ರಸೆಲ್ ಸಂಪೂರ್ಣ ಚೇತರಿಸಿಕೊಂಡಿಲ್ಲ. ಹೀಗಾಗಿ ಟೂರ್ನಿಯಿಂದ ಹೊರಬಿದ್ದಿದ್ದಾರೆ. ರಸೆಲ್ ಬದಲು ಬ್ಯಾಟ್ಸ್‌ಮನ್ ಸುನಿಲ್ ಅ್ಯಂಬ್ರಿಸ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಇಂಜುರಿಯಿಂದಲೇ 4 ಪಂದ್ಯ ಆಡಿದ್ದ ರೆಸೆಲ್ ಆರಂಭಿಕ ಪಂದ್ಯ ಹೊರತು ಪಡಿಸಿ ಉಳಿದ ಪಂದ್ಯದಲ್ಲಿ ನಿರೀಕ್ಷಿತ ಪ್ರದರ್ಶನ ನೀಡಿಲ್ಲ.

ಇದನ್ನೂ ಓದಿ: ಆಫ್ಘನ್,ಆಫ್ರಿಕಾ ಬಿಟ್ಟು ಉಳಿದ 8 ತಂಡಗಳಿಗೂ ಇದೆ ಸೆಮೀಸ್ ಚಾನ್ಸ್!

2017ರಲ್ಲಿ ಏಕದಿನಕ್ಕೆ ಪಾದಾರ್ಪಣೆ ಮಾಡಿದ್ದ ಸುನಿಲ್ ಆ್ಯಂಬ್ರಿಸ್ ಕೇವಲ 8 ಏಕದಿನ ಪಂದ್ಯ ಆಡಿದ್ದಾರೆ. ಇದೀಗ ಪ್ರತಿಷ್ಠಿತ ವಿಶ್ವಕಪ್ ಟೂರ್ನಿಯಲ್ಲಿ ವೆಸ್ಟ್ ಇಂಡೀಸ್ ತಂಡ ಪ್ರತಿನಿದಿಸೋ ಅವಕಾಶ ಒಲಿದು ಬಂದಿದೆ. ಐರ್ಲೆಂಡ್ ವಿರುದ್ಧದ ಸರಣಿಯಲ್ಲಿ ಸುನಿಲ್ ಕರಿಯರ್ ಬೆಸ್ಟ್ 148 ರನ್ ಸಿಡಿಸಿ ವೆಸ್ಟ್ ಇಂಡೀಸ್ ಆಯ್ಕೆ ಸಮಿತಿಯ ಗಮನಸೆಳೆದಿದ್ದರು.

PREV
click me!

Recommended Stories

ವಿಶ್ವಕಪ್ ಫೈನಲ್ ವಿವಾದಾತ್ಮಕ ತೀರ್ಪು; ಮೌನ ಮುರಿದ ಅಂಪೈರ್ ಧರ್ಮಸೇನಾ!
ವಿಶ್ವಕಪ್ ಫೈನಲ್ ಗೆಲುವು ನ್ಯಾಯವಲ್ಲ; ಇಂಗ್ಲೆಂಡ್ ನಾಯಕ ವಿಷಾದ!