ವಿಶ್ವಕಪ್ 2019: ಆಫ್ಘನ್‌ಗೆ 263 ರನ್ ಟಾರ್ಗೆಟ್ ನೀಡಿದ ಬಾಂಗ್ಲಾ

By Web DeskFirst Published Jun 24, 2019, 7:26 PM IST
Highlights

ಅಫ್ಘಾನಿಸ್ತಾನ ವಿರುದ್ಧ  ದಿಟ್ಟ ಹೋರಾಟ ನೀಡಿದ ಬಾಂಗ್ಲಾದೇಶ ಸ್ಪರ್ಧಾತ್ಮಕ ಗುರಿ ನೀಡಿದೆ. ಇದೀಗ ಗೆಲುವಿಗೆ ಅಫ್ಘಾನಿಸ್ತಾನ 263 ರನ್ ಚೇಸ್ ಮಾಡಬೇಕಿದೆ. ಬಾಂಗ್ಲಾ ಬ್ಯಾಟಿಂಗ್ ಹಾಗೂ ಅಫ್ಘಾನಿಸ್ತಾನದ ಬೌಲಿಂಗ್ ಹೈಲೈಟ್ಸ್ ಇಲ್ಲಿದೆ.
 

ಸೌಥಾಂಪ್ಟನ್(ಜೂ.23): ಅಫ್ಘಾನಿಸ್ತಾನ ವಿರುದ್ದದ ವಿಶ್ವಕಪ್ ಲೀಗ್ ಪಂದ್ಯದಲ್ಲಿ ಶಕೀಬ್ ಅಲ್ ಹಸನ್ ಹಾಗೂ ಮುಶ್ಫಿಕರ್ ರಹೀಮ್ ಅರ್ಧಶತಕದ ನೆರವಿನಿಂದ ಬಾಂಗ್ಲಾದೇಶ ದಿಟ್ಟ ಹೋರಾಟ ನೀಡಿದೆ. ಅಫ್ಘಾನ್ ವಿರುದ್ದ ಬಾಂಗ್ಲಾ 7 ವಿಕೆಟ್ ನಷ್ಟಕ್ಕೆ 262 ರನ್ ಸಿಡಿಸಿದೆ. ಈ ಮೂಲಕ ಆಫ್ಘಾನ್‌ಗೆ 263 ರನ್ ಟಾರ್ಗೆಟ್ ನೀಡಿದೆ.

ಟಾಸ್ ಸೋತು ಬ್ಯಾಟಿಂಗ್ ಇಳಿದ ಬಾಂಗ್ಲಾದೇಶ ಉತ್ತಮ ಆರಂಭ ಪಡೆಯಲಿಲ್ಲ ಲಿಟ್ಟನ್ ದಾಸ್ 16 ರನ್ ಸಿಡಿಸಿ ಔಟಾದರು. ಆದರೆ ತಮೀಮ್ ಇಕ್ಬಾಲ್ 36 ರನ್ ಕಾಣಿಕೆ ನೀಡಿದರು. ಶಕೀಬ್ ಅಲ್ ಹಸನ್ ಆಕರ್ಷಕ ಅರ್ಧಶತಕ ಸಿಡಿಸಿ ನೆರವಾದರು. ಶಕೀಬ್ 51 ರನ್ ಕಾಣಿಕೆ ನೀಡಿದರು. ಸೌಮ್ಯ ಸರ್ಕಾರ್ ಅಬ್ಬರಿಸಲಿಲ್ಲ.

ಮುಶ್ಫೀಕರ್ ರಹೀಮ್ ಹೋರಾಟ ಮುಂದುವರಿಸಿದರೆ, ಮೊಹಮ್ಮದುಲ್ಲಾ 27 ರನ್ ಸಿಡಿಸಿದರು. ರಹೀಮ್ 83 ರನ್ ಸಿಡಿಸಿ ಔಟಾದರು. ಮೊಸಾದೆಕ್ ಹುಸೈನ್ 35 ರನ್ ಸಿಡಿಸಿದರು. ಇದರೊಂದಿಗೆ ಬಾಂಗ್ಲಾದೇಶ 7 ವಿಕೆಟ್ ನಷ್ಟಕ್ಕೆ 262 ರನ್ ಸಿಡಿಸಿತು. ಆಫ್ಘನ್ ಪರ ಮುಜೀಬ್ ಯುಆರ್ ರಹಮಾನ್ 3 ವಿಕೆಟ್ ಕಬಳಿಸಿದರು.

click me!