ವಿಶ್ವಕಪ್ ಫೈನಲ್ ಪಂದ್ಯದ ಓವರ್ ಥ್ರೋ ವಿವಾದ ಇದೀಗ ಎಲ್ಲಡೆ ಚರ್ಚೆಯಾಗುತ್ತಿದೆ. ಅಂಪೈರ್ ಎಡವಟ್ಟಿನಿಂದ ಇಂಗ್ಲೆಂಡ್ ತಂಡಕ್ಕೆ 1 ರನ್ ಹೆಚ್ಚುವರಿ ನೀಡಲಾಗಿದೆ. ಆದರೆ ಈ ನಿಯಮದ ಕುರಿತು ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್‌ಗೆ ತಿಳಿದಿರಲಿಲ್ಲ.
ಆಕ್ಲೆಂಡ್(ಜು.17): ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಅಂಪೈರ್‌ಗಳ ಭಾರೀ ಎಡವಟ್ಟಿನಿಂದಾಗಿ ಇಂಗ್ಲೆಂಡ್‌ಗೆ ಓವರ್ ಥ್ರೋ ವೇಳೆ 5 ರನ್ ಬದಲು 6 ರನ್ ದೊರೆತಿತ್ತು. ಪಂದ್ಯ ಟೈ ಆಗಲು ಇದೂ ಕೂಡ ಪ್ರಮುಖ ಕಾರಣ. ಆದರೆ ಓವರ್ ಥ್ರೋ ನಿಯಮದ ಬಗ್ಗೆ ನ್ಯೂಜಿಲೆಂಡ್ ಆಟಗಾರರಿಗಾಲಿ, ಕೋಚ್‌ಗಳಿಗಾಗಿ ಮಾಹಿತಿಯೇ ಇರಲಿಲ್ಲ ಎನ್ನುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಸಾವಿನ ನೋವಿನಲ್ಲೂ ಇಂಗ್ಲೆಂಡ್‌ಗೆ ಟ್ರೋಫಿ ಗೆಲ್ಲಿಸಿದ ಆರ್ಚರ್!
undefined
ಸೋಮವಾರ ಮಾಜಿ ಅಂಪೈರ್ ಸೈಮನ್ ಟಾಫೆಲ್, ಐಸಿಸಿ ನಿಯಮದ ಪ್ರಕಾರ ಇಂಗ್ಲೆಂಡ್‌ಗೆ 5 ರನ್‌ಗಳಷ್ಟೇ ಸಿಗಬೇಕು ಎಂದು ಖಚಿತಪಡಿಸಿದ್ದರು. ಮಂಗಳವಾರ ನ್ಯೂಜಿಲೆಂಡ್‌ನ ಮಾಧ್ಯಮಗಳೊಂದಿಗೆ ಮಾತನಾಡಿದ ನಾಯಕ ಕೇನ್ ವಿಲಿಯಮ್ಸನ್ ಹಾಗೂ ಬ್ಯಾಟಿಂಗ್ ಕೋಚ್ ಕ್ರೇಗ್ ಮೆಕ್‌ಮಿಲನ್, ಓವರ್ ಥ್ರೋ ನಿಯಮದ ಬಗ್ಗೆ ಮಾಹಿತಿ ಇರಲಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ವಿದಾಯದ ಬಳಿಕ ಭಾರತೀಯ ಸೇನೆಗೆ ಧೋನಿ; ಮ್ಯಾನೇಜರ್ ಬಿಚ್ಚಿಟ್ಟ ಸೀಕ್ರೆಟ್!
‘ನನಗೆ ನಿಯಮದ ಬಗ್ಗೆ ಅರಿವಿರಲಿಲ್ಲ. ಸಹಜವಾಗಿಯೇ ಅಂಪೈರ್‌ಗಳು ಹಾಗೂ ಅವರು ನೀಡುವ ತೀರ್ಪಿನ ಮೇಲೆ ನಾವು ವಿಶ್ವಾಸವಿಟ್ಟಿರುತ್ತೇವೆ. ಪಂದ್ಯದ ತಿರುವುಗಳಲ್ಲಿ ಓವರ್ ಥ್ರೋ ಸನ್ನಿವೇಶ ಒಂದಾಗದಿದ್ದರೆ ಈ ಬಗ್ಗೆ ಯಾರಿಗೂ ಗೊತ್ತಾಗುತ್ತಲೇ ಇರಲಿಲ್ಲ’ ಎಂದು ವಿಲಿಯಮ್ಸನ್ ಹೇಳಿದ್ದಾರೆ.
‘ಖಂಡಿತವಾಗಿಯೂ ನನಗೆ ಆ ನಿಯಮದ ಬಗ್ಗೆ ಗೊತ್ತಿರಲಿಲ್ಲ. ನಾನು ಸಾಕಷ್ಟುಕ್ರಿಕೆಟ್ ಆಡಿದ್ದೇನೆ, ನೋಡಿದ್ದೇನೆ. ಓವರ್ ಥ್ರೋನಲ್ಲಿ ವೇಳೆ ಓಡಿದ ರನ್‌ಗಳನ್ನು ಒಟ್ಟು ರನ್‌ಗೆ ಸೇರಿಸಲಾಗುತ್ತದೆ. ಆದರೆ ಚೆಂಡು ಯಾವಾಗ ಎಸೆಯಲಾಯಿತು ಎನ್ನುವುದನ್ನೂ ಪರಿಗಣಿಸಲಾಗುತ್ತದೆ ಎಂದು ತಿಳಿದಿರಲಿಲ್ಲ’ ಎಂದು ಮೆಕ್‌ಮಿಲನ್ ಹೇಳಿದ್ದಾರೆ.