12ನೇ ಆವೃತ್ತಿಯ ಏಕದಿನ ವಿಶ್ವಕಪ್ ಟೂರ್ನಿ ಮುಕ್ತಾಯವಾದ ಬೆನ್ನಲ್ಲೇ ಐಸಿಸಿ ಆಟಗಾರರ ನೂತನ ಶ್ರೇಯಾಂಕ ಪ್ರಕಟಿಸಿದ್ದು, ಭಾರತೀಯ ಕ್ರಿಕೆಟಿಗರು ಮೇಲುಗೈ ಸಾಧಿಸಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ದುಬೈ[ಜು.16]: ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಮುಕ್ತಾಯವಾದ ಬೆನ್ನಲ್ಲೇ, ಐಸಿಸಿ ಆಟಗಾರರ ಶ್ರೇಯಾಂಕ ಪ್ರಕಟಗೊಂಡಿದ್ದು, ಟೀಂ ಇಂಡಿಯಾ ವಿರಾಟ್ ಕೊಹ್ಲಿ ಹಾಗೂ ಡೆತ್ ಓವರ್ ಸ್ಪೆಷಲಿಸ್ಟ್ ಜಸ್ಪ್ರೀತ್ ಬುಮ್ರಾ ಕ್ರಮವಾಗಿ ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗದಲ್ಲಿ ಅಗ್ರಸ್ಥಾನದಲ್ಲೇ ಮುಂದುವರೆದಿದ್ದಾರೆ.
ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾವು ಸೆಮಿಫೈನಲ್’ನಲ್ಲಿ ನ್ಯೂಜಿಲೆಂಡ್ ಎದುರು ಮುಗ್ಗರಿಸಿತ್ತು. ಇನ್ನು ಲಾರ್ಡ್ಸ್’ನಲ್ಲಿ ಜುಲೈ 14ರಂದು ನಡೆದ ಫೈನಲ್’ನಲ್ಲಿ ಇಂಗ್ಲೆಂಡ್ ತಂಡವು ನ್ಯೂಜಿಲೆಂಡ್ ಮಣಿಸಿ ಚೊಚ್ಚಲ ಬಾರಿಗೆ ವಿಶ್ವಕಪ್ ಜಯಿಸಿತ್ತು.
ಜೀವನದುದ್ದಕ್ಕೂ ವಿಲಿಯಮ್ಸನ್ ಬಳಿ ಕ್ಷಮೆ ಯಾಚಿಸುತ್ತೇನೆಂದ ಸ್ಟೋಕ್ಸ್!
ಬ್ಯಾಟಿಂಗ್ ವಿಭಾಗದಲ್ಲಿ ಟೀಂ ಇಂಡಿಯಾ ನಾಯಕ ಹಾಗೂ ಉಪನಾಯಕರಾದ ವಿರಾಟ್ ಹಾಗೂ ರೋಹಿತ್ ಮೊದಲೆರಡು ಸ್ಥಾನದಲ್ಲೇ ಮುಂದುವರೆದಿದ್ದಾರೆ. ಪಾಕಿಸ್ತಾನದ ಬಾಬರ್ ಅಜಂ ಮೂರನೇ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ವಿಶ್ವಕಪ್ ಟೂರ್ನಿಯಲ್ಲಿ ಗಮನಾರ್ಹ ಪ್ರದರ್ಶನ ತೋರಿದ, ಫಾಫ್ ಡುಪ್ಲೆಸಿಸ್, ಡೇವಿಡ್ ವಾರ್ನರ್, ಕ್ವಿಂಟನ್ ಡಿಕಾಕ್ ಶ್ರೇಯಾಂಕ ಪಟ್ಟಿಯಲ್ಲಿ ಭಡ್ತಿ ಪಡೆದಿದ್ದು, ಟಾಪ್ 10 ಪಟ್ಟಿಯೊಳಗೆ ಸ್ಥಾನ ಪಡೆದಿದ್ದಾರೆ.
ಇನ್ನು ಬೌಲರ್’ಗಳ ವಿಭಾಗದಲ್ಲಿ ಜಸ್ಪ್ರೀತ್ ಬುಮ್ರಾ ಮೊದಲ ಸ್ಥಾನದಲ್ಲೇ ಭದ್ರವಾಗಿದ್ದಾರೆ. ಇನ್ನು ಟ್ರೆಂಟ್ ಬೌಲ್ಟ್, ಕಗಿಸೋ ರಬಾಡ ಮೊದಲ ಮೂರು ಸ್ಥಾನಗಳನ್ನು ಹಂಚಿಕೊಂಡಿದ್ದಾರೆ. ಇನ್ನುಳಿದಂತೆ ಟಾಪ್ 9 ಬೌಲರ್’ಗಳ ಪಟ್ಟಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಆದರೆ 10ನೇ ಸ್ಥಾನದಲ್ಲಿದ್ದ ಕುಲ್ದೀಪ್ ಯಾದವ್ ಹಿಂದಿಕ್ಕಿರುವ ಕಿವೀಸ್ ವೇಗಿ ಮ್ಯಾಟ್ ಹೆನ್ರಿ ಟಾಪ್ 10 ಪಟ್ಟಿಯೊಳಗೆ ಸ್ಥಾನ ಪಡೆಯಲು ಯಶಸ್ವಿಯಾಗಿದ್ದಾರೆ.
ಆಲ್ರೌಂಡರ್ ವಿಭಾಗದಲ್ಲಿ ಬಾಂಗ್ಲಾದೇಶದ ಆಲ್ರೌಂಡರ್ ಶಕೀಬ್ ಅಲ್ ಹಸನ್ ಮೊದಲ ಸ್ಥಾನದಲ್ಲಿದ್ದರೆ, ಬೆನ್ ಸ್ಟೋಕ್ಸ್ ಎರಡನೇ ಸ್ಥಾನದಲ್ಲಿದ್ದಾರೆ. ಟಾಪ್ 10 ಪಟ್ಟಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ICC ಟಾಪ್ 10 ಶ್ರೇಯಾಂಕಿತ ಬ್ಯಾಟ್ಸ್‌ಮನ್ ಗಳಿವರು
ಶ್ರೇಯಾಂಕ ಬ್ಯಾಟ್ಸ್‌ಮನ್
01 ವಿರಾಟ್ ಕೊಹ್ಲಿ
02 ರೋಹಿತ್ ಶರ್ಮಾ
03 ಬಾಬರ್ ಅಜಂ
04 ಫಾಫ್ ಡುಪ್ಲೆಸಿಸ್
05 ರಾಸ್ ಟೇಲರ್
06 ಕೇನ್ ವಿಲಿಯಮ್ಸನ್
07 ಡೇವಿಡ್ ವಾರ್ನರ್
08 ಜೋ ರೂಟ್
09 ಕ್ವಿಂಟನ್ ಡಿಕಾಕ್
10 ಜೇಸನ್ ರಾಯ್
ICC ಟಾಪ್ 10 ಶ್ರೇಯಾಂಕಿತ ಬೌಲರ್‌ಗಳಿವರು
ಶ್ರೇಯಾಂಕ ಬೌಲರ್‌ಗಳು
01 ಜಸ್ಪ್ರೀತ್ ಬುಮ್ರಾ
02 ಟ್ರೆಂಟ್ ಬೌಲ್ಟ್
03 ಕಗಿಸೋ ರಬಾಡ
04 ಪ್ಯಾಟ್ ಕಮ್ಮಿನ್ಸ್
05 ಇಮ್ರಾನ್ ತಾಹಿರ್
06 ಮುಜೀಬ್ ಉರ್ ರೆಹಮಾನ್
07 ಕ್ರಿಸ್ ವೋಕ್ಸ್
08 ಮಿಚೆಲ್ ಸ್ಟಾರ್ಕ್
09 ರಶೀದ್ ಖಾನ್
10 ಮ್ಯಾಟ್ ಹೆನ್ರಿ
ICC ಟಾಪ್ 10 ಶ್ರೇಯಾಂಕಿತ ಆಲ್ರೌಂಡರ್ ಗಳಿವರು
ಶ್ರೇಯಾಂಕ ಆಲ್ರೌಂಡರ್
01 ಶಕೀಬ್ ಅಲ್ ಹಸನ್
02 ಬೆನ್ ಸ್ಟೋಕ್ಸ್
03 ಮೊಹಮ್ಮದ್ ನಬೀ
04 ಇಮಾದ್ ವಾಸೀಂ
05 ರಶೀದ್ ಖಾನ್
06 ಕ್ರಿಸ್ ವೋಕ್ಸ್
07 ಜೇಸನ್ ಹೋಲ್ಡರ್
08 ಮಿಚೆಲ್ ಸ್ಯಾಂಟ್ನರ್
09 ಆ್ಯಂಡಿಲೆ ಫೆಲುಕ್ವಾಯೋ
10 ಹಾರ್ದಿಕ್ ಪಾಂಡ್ಯ