ಭಾರತದ ಮಾಜಿ ಸ್ಪಿನ್ನರ್, ಕನ್ನಡಿಗ ಸುನಿಲ್ ಜೋಶಿ ಬಾಂಗ್ಲಾದೇಶ ಬೌಲಿಂಗ್ ಕೋಚ್ ಆಗಿ ಹೆಚ್ಚು ಯಶಸ್ಸು ಕಂಡಿದ್ದಾರೆ. ಇದೀಗ ಭಾರತ ವಿರುದ್ಧದ ಪಂದ್ಯಕ್ಕೂ ಮುನ್ನ ಬಾಂಗ್ಲಾ ಕೋಚ್ ಸುನಿಲ್ ಜೋಶಿ ಎಚ್ಚರಿಕೆ ನೀಡಿದ್ದಾರೆ.
ಸೌಥಾಂಪ್ಟನ್(ಜೂ.25): ವಿಶ್ವಕಪ್ ಟೂರ್ನಿಯಲ್ಲಿ ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಪಂದ್ಯ ಇದೀಗ ಕುತೂಹಲದ ಕೇಂದ್ರ ಬಿಂದುವಾಗಿದೆ. ಕ್ರಿಕೆಟ್‌ನಲ್ಲಿ ಭಾರತ ಹಾಗೂ ಬಾಂಗ್ಲಾ ತಂಡಗಳ ನಡುವೆ ಹಳೇ ಲೆಕ್ಕಾಚಾರಗಳಿವೆ. ಪಾಕಿಸ್ತಾನ ಹೊರತು ಪಡಿಸಿದರೆ ಸದ್ಯ ಬಾಂಗ್ಲಾದೇಶ ಕೂಡ ಭಾರತಕ್ಕೆ ಕಡು ವೈರಿ. ಇತ್ತ ಆಫ್ಘಾನಿಸ್ತಾನ ವಿರುದ್ದ ಭಾರತ ತಿಣುಕಾಡಿ ಗೆದ್ದರೆ, ಬಾಂಗ್ಲಾದೇಶ 62 ರನ್ ಗೆಲುವು ಸಾಧಿಸಿತ್ತು. ಇದರ ಬೆನ್ನಲ್ಲೇ ಬಾಂಗ್ಲಾದೇಶ ಬೌಲಿಂಗ್ ಕೋಚ್, ಕನ್ನಡಿಗ ಸುನಿಲ್ ಜೋಶಿ ಟೀಂ ಇಂಡಿಯಾಗೆ ಸೈಲೆಂಟ್ ಆಗಿ ವಾರ್ನಿಂಗ್ ನೀಡಿದ್ದಾರೆ.
ಇದನ್ನೂ ಓದಿ: ಭಾರತವನ್ನು ಮಣಿಸಲು ಸಮರ್ಥರಿದ್ದೇವೆ-ಬಾಂಗ್ಲಾ ಎಚ್ಚರಿಕೆ!
undefined
ಟೀಂ ಇಂಡಿಯಾ ಮಾಜಿ ಸ್ಪಿನ್ನರ್, ಕನ್ನಡಿಗ ಸುನಿಲ್ ಜೋಶಿ ಬಾಂಗ್ಲಾದೇಶದ ಬೌಲಿಂಗ್ ಕೋಚ್. ವಿಶ್ವಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶದ ಯಶಸ್ಸಿನ ಹಿಂದೆ ಸುನಿಲ್ ಜೋಶಿ ಮಾರ್ಗದರ್ಶನವಿದೆ. ಟೀಂ ಇಂಡಿಯಾ ವೀಕ್ನೆಸ್ ಚೆನ್ನಾಗಿ ಅರಿತಿರುವ ಸುನಿಲ್ ಜೋಶಿ ಇದೀಗ, ಭಾರತಕ್ಕೆ ಹೇಗೆ ಬೌಲಿಂಗ್ ಮಾಡಬೇಕು ಅನ್ನೋದು ಗೊತ್ತಿದೆ ಎಂದಿದ್ದಾರೆ.
ಇದನ್ನೂ ಓದಿ: ಭಾರತ ವಿರುದ್ಧದ ಪಂದ್ಯಕ್ಕೂ ಮುನ್ನ ಬಾಂಗ್ಲಾದೇಶಕ್ಕೆ ಇಂಜುರಿ ಆಘಾತ!
ಭಾರತದ ಬ್ಯಾಟಿಂಗ್ ಲೈನ್ ಹಾಗೂ ಬ್ಯಾಟ್ಸ್‌ಮನ್‌ಗಳ ವೀಕ್ನೆಸ್ ಜೋಶಿಗೆ ಚೆನ್ನಾಗಿ ತಿಳಿದಿದೆ. ಮ್ಯಾಂಚೆಸ್ಟರ್ ಸ್ಲೋ ವಿಕೆಟ್‌ನಲ್ಲಿ ಭಾರತವನ್ನು ಕಟ್ಟಿಹಾಕಲು ಜೋಶಿ ಇದೀಗ ಮಾಸ್ಟರ್ ಪ್ಲಾನ್ ಹಾಕಿಕೊಂಡಿದ್ದಾರೆ. ನಿಗದಿತ ಓವರ್ ಕ್ರಿಕೆಟ್‌ನಲ್ಲಿ ಬಾಂಗ್ಲಾದೇಶ ಅತ್ಯುತ್ತಮ ಪ್ರದರ್ಶನ ನೀಡಿದೆ. ಇದೀಗ ವಿಶ್ವಕಪ್ ಟೂರ್ನಿಯಲ್ಲೂ ನಿರೀಕ್ಷಿತ ಪ್ರದರ್ಶನ ನೀಡಿದೆ. ಹೀಗಾಗಿ ಭಾರತ ವಿರುದ್ದ ಇದೇ ಪ್ರದರ್ಶನ ಮುಂದುವರಿಸಲಿದೆ ಎಂದು ಜೋಶಿ ಹೇಳಿದ್ದಾರೆ.