ಭಾರತ ವಿರುದ್ಧದ ಪಂದ್ಯಕ್ಕೂ ಮುನ್ನ ಬಾಂಗ್ಲಾದೇಶಕ್ಕೆ ಇಂಜುರಿ ಆಘಾತ!

By Web Desk  |  First Published Jun 25, 2019, 4:42 PM IST

ಆಫ್ಘಾನಿಸ್ತಾನ ವಿರುದ್ದದ ಪಂದ್ಯದ ಬಳಿಕ ಇದೀಗ ಟೀಂ ಇಂಡಿಯಾವನ್ನು ಮಣಿಸೋ ವಿಶ್ವಾಸದಲ್ಲಿರುವ ಬಾಂಗ್ಲಾದೇಶಕ್ಕೆ ಇಂಜುರಿ ಸಮಸ್ಯೆ ಕಾಡುತ್ತಿದೆ.  ಇದು ಬಾಂಗ್ಲಾ ತಂಡದ ಚಿಂತೆ ಹೆಚ್ಚಿಸಿದೆ.


ಸೌಥಾಂಪ್ಟನ್(ಜೂ.25): ವಿಶ್ವಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶ ಸೆಮಿಫೈನಲ್ ಪ್ರವೇಶಿಸೋ ವಿಶ್ವಾಸದಲ್ಲಿದೆ. ಆಫ್ಘಾನಿಸ್ತಾನ ವಿರುದ್ದದ ಗೆಲುವಿನ ಬಳಿಕ ಇದೀಗ ಭಾರತ ವಿರುದ್ಧದ ಪಂದ್ಯಕ್ಕೆ ತಯಾರಿ ಆರಂಭಿಸಿದೆ. ಜುಲೈ 2 ರಂದು ಬಾಂಗ್ಲಾದೇಶ, ಭಾರತ ವಿರುದ್ಧ ಹೋರಾಟ ನಡೆಸಲಿದೆ. 7 ದಿನಗಳ ವಿಶ್ರಾಂತಿ ಪಡೆದಿರುವ ಬಾಂಗ್ಲಾದೇಶಕ್ಕೆ ಇದೀಗ ಇಂಜುರಿ ಆಘಾತ ಎದುರಾಗಿದೆ.

ಇದನ್ನೂ ಓದಿ: ವಿಂಡೀಸ್ ದಿಗ್ಗಜ ಬ್ರಿಯಾನ್ ಲಾರಾಗೆ ಎದೆನೋವು- ಮುಂಬೈ ಆಸ್ಪತ್ರೆ ದಾಖಲು!

Tap to resize

Latest Videos

undefined

ಆಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಬಾಂಗ್ಲಾದೇಶ ಮಿಡ್ಲ ಆರ್ಡರ್ ಬ್ಯಾಟ್ಸ್‌ಮನ್ ಮೊಹಮ್ಮುದಲ್ಲಾ ಮಾಂಸಖಂಡದ ಗಾಯಕ್ಕೆ ತುತ್ತಾಗಿದ್ದಾರೆ. ಬಲಗಾಲಿನ ಮಾಂಸಖಂಡದ ಗಾಯಕ್ಕೆ ತುತ್ತಾಗಿರುವ ಮೊಹಮ್ಮದುಲ್ಲಾಗೆ ಹೆಚ್ಚಿನ ವಿಶ್ರಾಂತಿ ಅಗತ್ಯವಿದೆ. ಇದು ಬಾಂಗ್ಲಾ ತಂಡದ ಚಿಂತೆ ಹೆಚ್ಚಿಸಿದೆ.  

ಇದನ್ನೂ ಓದಿ: ಕೊಹ್ಲಿ ಬಳಗಕ್ಕೆ ಒಪ್ಪೊ, ಆಫ್ಘನ್ ತಂಡಕ್ಕೆ ಅಮುಲ್: ಇದು ಲಾಭದ ಕಮಾಲ್!

ಅಫ್ಘನ್ ವಿರುದ್ದ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಇಂಜುರಿ ಸಮಸ್ಯೆ ಎದುರಿಸಿದ ಮೊಹಮ್ಮದುಲ್ಲಾಗೆ ಫಿಸಿಯೋ ಚಿಕಿತ್ಸೆ ನೀಡಿದ್ದರು. ಬಳಿಕ ನೋವಿನಲ್ಲೇ ಬ್ಯಾಟಿಂಗ್ ಮುಂದುವರಿಸಿದರು. ನೋವು ಹೆಚ್ಚಾದ ಕಾರಣ ಫೀಲ್ಡಿಂಗ್ ಮಾಡಲು ಮೊಹಮ್ಮದುಲ್ಲಾ ಕಣಕ್ಕಿಳಿಯಲಿಲ್ಲ. ಭಾರತ ವಿರುದ್ದದ ಪಂದ್ಯಕ್ಕೆ ಇನ್ನು 7 ದಿನ ಬಾಕಿ ಇದೆ. ಈ ವೇಳೆಗೆ ಚೇತರಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಬಾಂಗ್ಲಾದೇಶ ಫಿಸಿಯೋ ಹೇಳಿದ್ದಾರೆ.

click me!