ಬುಮ್ರಾ ಬೌಲಿಂಗ್ ಶೈಲಿ ಅನುಕರಿಸಿದ ವಿರಾಟ್ ಕೊಹ್ಲಿ!

By Web Desk  |  First Published Jul 9, 2019, 9:24 PM IST

ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಬೌಲಿಂಗ್ ಶೈಲಿ ವಿಶೇಷವಾಗಿದೆ. ಹೀಗಾಗಿ ಹೆಚ್ಚಿನ ಬ್ಯಾಟ್ಸ್‌ಮನ್‌ಗಳು ಬುಮ್ರಾ ದಾಳಿ ಎದುರಿಸಲು ಪರದಾಡುತ್ತಾರೆ. ಇದೀಗ ಬುಮ್ರಾ ಕಠಿಣ ಬೌಲಿಂಗ್ ಶೈಲಿಯನ್ನು ವಿರಾಟ್ ಕೊಹ್ಲಿ ಅನುಸರಿಸಿದ್ದಾರೆ.
 


ಮ್ಯಾಂಚೆಸ್ಟರ್(ಜು.09): ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ವಿಶ್ವಕಪ್ ಮೊದಲ ಸೆಮಿಫೈನಲ್ ಪಂದ್ಯ ಮಳೆಯಿಂದ ತಾತ್ಕಾಲಿಕ ಸ್ಥಗಿತಗೊಂಡಿದೆ. ಸೆಮೀಸ್ ಹೋರಾಟ ಆರಂಭಕ್ಕೂ ಮುನ್ನ ಟೀಂ ಇಂಡಿಯಾ ಅಭ್ಯಾಸ ನಡೆಸಿತ್ತು. ಈ ವೇಳೆ ನಾಯಕ ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ ಬೌಲಿಂಗ್ ಶೈಲಿಯನ್ನು ಅನುಕರಣೆ ಮಾಡಿ ಗಮನಸೆಳೆದಿದ್ದಾರೆ.

ಇದನ್ನೂ ಓದಿ: ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ ಆಯ್ಕೆಗೆ ಫ್ಯಾನ್ಸ್ ಗರಂ!

Tap to resize

Latest Videos

undefined

ನೆಟ್ಸ್‌ನಲ್ಲಿ ಕೊಹ್ಲಿ, ಬುಮ್ರಾ ಬೌಲಿಂಗ್ ರನ್ನಪ್, ಹಾಗೂ ಬೌಲಿಂಗ್ ಆ್ಯಕ್ಷನ್ ಅನುಕರಣೆ ಮಾಡಿದ್ದಾರೆ. ಬುಮ್ರಾ ರೀತಿಯಲ್ಲೇ ಬೌಲಿಂಗ್ ಮಾಡಿದ ಕೊಹ್ಲಿ ಬಳಿಕ ಸಂಭ್ರಮ ಆಚರಿಸಿದ್ದಾರೆ. ಕೊಹ್ಲಿ ಅನುಕರಣೆ ವೈರಲ್ ಆಗಿದೆ. 

 

Virat kohli in & an as Bumrah !! 😀😃😃 pic.twitter.com/oAJdouWUqW

— Harshal Gadakh 🇮🇳 (@harshalgadakh7)

ಇದನ್ನೂ ಓದಿ: ಇಂಡೋ-ಕಿವೀಸ್ ಸೆಮಿಫೈನಲ್: ಓವರ್ ಕಡಿತಗೊಂಡ್ರೆ ಭಾರತದ ಟಾರ್ಗೆಟ್ ವಿವರ!

ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಬೌಲಿಂಗ್ ಮಾಡಿದ್ದಾರೆ. ಏಕದಿನ ಮಾದರಿಯಲ್ಲಿ ಕೊಹ್ಲಿ 4 ವಿಕೆಟ್ ಕಬಳಿಸಿದ್ದಾರೆ. ಕೊಹ್ಲಿ ಬೌಲಿಂಗ್ ಶೈಲಿ ಕುರಿತು ಈ ಹಿಂದೆ ಬುಮ್ರಾ ತಮಾಷೆ ಮಾಡಿದ್ದರು. ಬಳಿಕ ಕೊಹ್ಲಿ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಬೌಲಿಂಗ್ ಮಾಡೋ ಸಾಹಸ ಮಾಡಿಲ್ಲ.

click me!