ಹೊಸ ಇನ್ನಿಂಗ್ಸ್ ಆರಂಭಿಸಿದ 87ರ ಹರೆಯದ ಟೀಂ ಇಂಡಿಯಾ ಅಭಿಮಾನಿ!

Published : Jul 09, 2019, 08:08 PM IST
ಹೊಸ ಇನ್ನಿಂಗ್ಸ್ ಆರಂಭಿಸಿದ 87ರ ಹರೆಯದ ಟೀಂ ಇಂಡಿಯಾ ಅಭಿಮಾನಿ!

ಸಾರಾಂಶ

ಟೀಂ ಇಂಡಿಯಾ ಅಭಿಮಾನಿ ಚಾರುಲತಾ ಪಟೇಲ್ 87ರ ಹರೆಯದಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ. ಭಾರತ ತಂಡವನ್ನು ಪ್ರೋತ್ಸಾಹಿಸಿ ವಿಶ್ವದ ಗಮನಸೆಳೆದ ಚಾರುಲತಾ ಇದೀಗ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ.   

ಮ್ಯಾಂಚೆಸ್ಟರ್(ಜು.09): ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಆಟಗಾರರು ಮಿಂಚಿದಕ್ಕಿಂತ ಹೆಚ್ಚಾಗಿ 87ರ ಹರೆಯದ ಅಭಿಮಾನಿ ಚಾರುಲತಾ ಪಟೇಲ್ ಮಿಂಚಿದ್ದಾರೆ. ಒಂದೇ ಪಂದ್ಯದಲ್ಲಿ ಚಾರುಲತಾ ವಿಶ್ವ ಕ್ರಿಕೆಟ್ ಅಭಿಮಾನಿಗಳ ಗಮನಸೆಳೆದಿದ್ದಾರೆ. ಇದೀಗ ಸೊಶಿಯಲ್ ಮೀಡಿಯಾದಲ್ಲಿ ಸ್ಟಾರ್ ಆಗಿ ಮಿಂಚಿದ ಚಾರುಲತಾ ಈಗ  ಜಾಹೀರಾತಿಗೆ ಎಂಟ್ರಿಕೊಟ್ಟಿದ್ದಾರೆ.

ಇದನ್ನೂ ಓದಿ: ಇಂಡೋ-ಕಿವೀಸ್ ಸೆಮಿಫೈನಲ್: ಓವರ್ ಕಡಿತಗೊಂಡ್ರೆ ಭಾರತದ ಟಾರ್ಗೆಟ್ ವಿವರ!

ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಲೀಗ್ ಪಂದ್ಯದಲ್ಲಿ ಕಾಣಿಸಿಕೊಂಡ ಚಾರುಲತಾ, ಎಲ್ಲರ ಮನೆಮಾತಾಗಿದ್ದಾರೆ. ಇದೀಗ ತಂಪು ಪಾನಿಯಾದ  ಜಾಹೀರಾತಿನಲ್ಲಿ ಚಾರುಲತಾ ಕಾಣಿಸಿಕೊಂಡಿದ್ದಾರೆ. ಪೆಪ್ಸಿ ಜಾಹೀರಾತಿನಲ್ಲಿ ಇದೀಗ ಚಾರುಲತಾ ಮಿಂಚಿದ್ದಾರೆ. 

ಇದನ್ನೂ ಓದಿ: ಭಾರತ -ನ್ಯೂಜಿಲೆಂಡ್ ಸೆಮಿಫೈನಲ್ ಪಂದ್ಯಕ್ಕೆ ಮಳೆ ಅಡ್ಡಿ!

ತಂಪು ಪಾನಿಯ ಕಂಪನಿಯ ಡಿಜಿಟಲ್ ಜಾಹೀರಾತಿನಲ್ಲಿ ಚಾರುಲತಾ ಮಿಂಚುತ್ತಿದ್ದಾರೆ. ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಪಂದ್ಯದ ನಡುವೆ ಚಾರುಲತಾ ಪಟೇಲ್ ಜಾಹೀರಾತಿನಲ್ಲಿ ಮೋಡಿ ಮಾಡುತ್ತಿದ್ದಾರೆ. ಮೊದಲ ಸೆಮಿಫೈನಲ್ ಪಂದ್ಯಕ್ಕೆ ಹಾಜರಾಗಿರುವ ಚಾರುಲತಾ ಮೈದಾನದಲ್ಲಿ ಮಾತ್ರವಲ್ಲ,  ಜಾಹೀರಾತಿನಲ್ಲೂ ಕಾಣಿಸಿಕೊಂಡಿದ್ದಾರೆ.
 

PREV
click me!

Recommended Stories

ವಿಶ್ವಕಪ್ ಫೈನಲ್ ವಿವಾದಾತ್ಮಕ ತೀರ್ಪು; ಮೌನ ಮುರಿದ ಅಂಪೈರ್ ಧರ್ಮಸೇನಾ!
ವಿಶ್ವಕಪ್ ಫೈನಲ್ ಗೆಲುವು ನ್ಯಾಯವಲ್ಲ; ಇಂಗ್ಲೆಂಡ್ ನಾಯಕ ವಿಷಾದ!