ಪಾಕ್ ವಿರುದ್ಧ ಭರ್ಜರಿ ಗೆಲವು-ಟ್ರೆಂಡ್ ಆಯ್ತು ಕೊಹ್ಲಿ ಸೈನ್ಯದ ಮಲ್ಹಾರಿ ಡ್ಯಾನ್ಸ್!

By Web Desk  |  First Published Jun 17, 2019, 7:56 PM IST

ಬಾಜಿರಾವ್ ಮಸ್ತಾನಿ ಬಾಲಿವುಡ್ ಚಿತ್ರದ ಮಲ್ಹಾರಿ ಹಾಡಿಗೆ ಇದೀಗ ವಿರಾಟ್ ಕೊಹ್ಲಿ ಹುಡುಗರನ್ನು ಕುಣಿಸಲಾಗಿದೆ. ಪಾಕಿಸ್ತಾನ ವಿರುದ್ಧ  ಭರ್ಜರಿ ಗೆಲುವಿನ ಬಳಿಕ ಟೀಂ ಇಂಡಿಯಾ ಸಂಭ್ರಮದ ಈ ವೀಡಿಯೋ ಇದೀಗ ಟ್ರೆಂಡ್ ಆಗಿದೆ. ಎಡಿಟಿಂಗ್ ಮೂಲಕ ಮಾಡಲಾಗಿರುವ ಈ ವೀಡಿಯೋ ಇಲ್ಲಿದೆ. 


ಬೆಂಗಳೂರು(ಜೂ.17): ವಿಶ್ವಕಪ್ ಲೀಗ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧದ ಗೆಲುವು ಅಭಿಮಾನಿಗಳಿಗೆ ವಿಶ್ವಕಪ್ ಪ್ರಶಸ್ತಿ ಗೆದ್ದಷ್ಟೇ ಖುಷಿ ನೀಡಿದೆ. ಸ್ಫೋಟಕ ಬ್ಯಾಟಿಂಗ್ ಹಾಗೂ ಮಾರಕ ಬೌಲಿಂಗ್ ದಾಳಿಯಿಂದ ಭಾರತ ಬದ್ಧವೈರಿ ಪಾಕ್ ವಿರುದ್ಧ 89 ರನ್ ಗೆಲುವು ಸಾಧಿಸಿದೆ.  ಈ ಗೆಲುವಿನ ಬಳಿಕ ಟೀಂ ಇಂಡಿಯಾ ಅಭಿಮಾನಿಗಳ ಸಂಭ್ರಮ ಇನ್ನೂ ನಿಂತಿಲ್ಲ.  ಇನ್ನು ಕೆಲವರು ಬಾಲಿವುಡ್ ನಟ ರಣವೀರ್ ಸಿಂಗ್ ಅಭಿನಯದ ಬಾಜಿರಾವ್ ಮಸ್ತಾನಿ ಚಿತ್ರದ ಮಲ್ಹಾರಿ ಹಾಡಿಗೆ ಟೀಂ ಇಂಡಿಯಾ ಕ್ರಿಕೆಟಿಗರನ್ನು ಕುಣಿಸಿದ್ದಾರೆ.

ಇದನ್ನೂ ಓದಿ: ಬದ್ಧವೈರಿಗಳ ಪಂದ್ಯಕ್ಕೂ ಮುನ್ನ ಪಾಕ್ ಕಿಕೆಟಿಗರ ಪಾರ್ಟಿ-ಅಭಿಮಾನಿಗಳ ಆಕ್ರೋಶ!

Tap to resize

Latest Videos

ಈಗಾಗಲೇ ಮಲ್ಹಾರಿ ಹಾಡಿಗೆ ಅಮೇರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಸೇರಿದಂತೆ ಹಲವರನ್ನು ವೀಡಿಯೋ ಎಡಿಟಿಂಗ್ ಮೂಲಕ ಕುಣಿಸಲಾಗಿದೆ. ಇದೀಗ ಟೀಂ ಇಂಡಿಯಾ ಕ್ರಿಕೆಟಿಗರ ಸರದಿ. ಮಲ್ಹಾರಿ ಹಾಡಿನ ವೀಡಿಯೋವನ್ನು ಟೀಂ ಇಂಡಿಯಾ ಕ್ರಿಕೆಟಿಗರ ಫೋಟೋ ಎಡಿಟ್ ಮಾಡಿ, ಅದ್ಬುತ ವೀಡಿಯೋವೊಂದು ಹರಿಬಿಡಲಾಗಿದೆ. ಇದೀಗ ಪಾಕ್ ವಿರುದ್ಧದ ಗೆಲುವಿನ ಸಂಭ್ರಮದ ಈ ವೀಡಿಯೋ ಟ್ರೆಂಡ್ ಆಗಿದೆ.

 

ಇದನ್ನೂ ಓದಿ: ಇಂಡೋ-ಪಾಕ್ ಪಂದ್ಯ: ರಿಶಬ್ ಪಂತ್-ಝೀವಾ ತುಂಟಾಟ ಪುಲ್ ವೈರಲ್

ರಣವೀರ್ ಸ್ಥಾನದಲ್ಲಿ ಕೊಹ್ಲಿ ಫೋಟೋ ಎಡಿಟ್ ಮಾಡಿದರೆ, ಎಂ.ಎಸ್.ಧೋನಿ,  ಜಸ್ಪ್ರೀತ್ ಬುಮ್ರಾ, ರೋಹಿತ್ ಶರ್ಮಾ, ರವೀಂದ್ರ ಜಡೇಜಾ, ಕೆಎಲ್ ರಾಹುಲ್ ಸೇರಿದಂತೆ ಹಲವು ಟೀಂ ಇಂಡಿಯಾ ಕ್ರಿಕೆಟಿಗರ ಫೋಟೋಗಳನ್ನು ಈ ಹಾಡಿಗೆ ಸೇರಿಸಿಕೊಳ್ಳಲಾಗಿದೆ. 

click me!