ವಿಶ್ವಕಪ್ 2019: ಬಾಂಗ್ಲಾಗೆ 322 ರನ್ ಟಾರ್ಗೆಟ್ ನೀಡಿದ ವೆಸ್ಟ್ ಇಂಡೀಸ್!

Published : Jun 17, 2019, 06:49 PM IST
ವಿಶ್ವಕಪ್ 2019: ಬಾಂಗ್ಲಾಗೆ 322 ರನ್ ಟಾರ್ಗೆಟ್ ನೀಡಿದ ವೆಸ್ಟ್ ಇಂಡೀಸ್!

ಸಾರಾಂಶ

ಬಾಂಗ್ಲಾ ವಿರುದ್ಧ ಟಾಸ್ ಸೋತು ಆರಂಭಿಕ ಆಘಾತ ಅನುಭವಿಸಿದರೂ, ದಿಟ್ಟ ಹೋರಾಟ ನೀಡುವಲ್ಲಿ ವೆಸ್ಟ್ ಇಂಡೀಸ್ ಯಶಸ್ವಿಯಾಗಿದೆ. ವೆಸ್ಟ್ ಇಂಡೀಸ್ 8 ವಿಕೆಟ್ ನಷ್ಟಕ್ಕೆ 321 ರನ್ ಸಿಡಿಸಿದೆ. 

ಟೌಂಟನ್(ಜೂ.17): ಬಾಂಗ್ಲಾದೇಶ ವಿರುದ್ಧದ ವಿಶ್ವಕಪ್ ಲೀಗ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಅಬ್ಬರಿಸಿದೆ. ಶೈ ಹೋಪ್ 96 ರನ್, ಇವಿನ್ ಲಿವೀಸ್ ಹಾಗೂ ಶಿಮ್ರೊನ್ ಹೆಟ್ಮೆಯರ್ ಅರ್ಧಶತಕದ ನೆರವಿನಿಂದ ವೆಸ್ಟ್ ಇಂಡೀಸ್ 7 ವಿಕೆಟ್ ನಷ್ಟಕ್ಕೆ 321 ರನ್ ಸಿಡಿಸಿದೆ.  

ಟಾಸ್ ಸೋತು ಬ್ಯಾಟಿಂಗ್ ಇಳಿದ ವೆಸ್ಟ್ ಇಂಡೀಸ್ ಆರಂಭದಲ್ಲೇ ಕ್ರಿಸ್ ಗೇಲ್ ವಿಕೆಟ್ ಕಳೆದುಕೊಂಡಿತು. ಗೇಲ ಶೂನ್ಯಕ್ಕೆ ಔಟಾದರು. ಇವಿನ್ ಲಿವಿಸ್ ಹಾಗೂ ಶೈ ಹೋಪ್ ಬಾಂಗ್ಲಾ ಬೌಲರ್‌ಗಳಿಗೆ ತಿರುಗೇಟು ನೀಡಿದರು. ಲಿವಿಸ್ 70 ರನ್ ಸಿಡಿಸಿ ಔಡಾದರು. ಆದರೆ ಶೈ ಹೋಪ್ ಅಬ್ಬರ ಮುಂದುವರಿಸಿದರು.

ನೀಕೋಲಸ್ ಪೂರ್ 25 ರನ್ ಸಿಡಿಸಿದರೆ, ಶಿಮ್ರೊನ್ ಹೆಟ್ಮೆಯರ್ 50 ರನ್ ಕಾಣಿಕೆ ನೀಡಿದರು. ಆ್ಯಂಡ್ರೆ ರಸೆಲ್ ಡಕೌಟ್ ಆದರೆ ನಾಯಕ ಜೇಸನ್ ಹೋಲ್ಡರ್ 33 ರನ್ ಸಿಡಿಸಿ ಔಟಾದರು. ಹೋರಾಟ ನೀಡಿದ ಶೈ ಹೋಪ್  96 ರನ್ ಸಿಡಿಸಿ ಔಟಾದರು. ಈ ಮೂಲಕ ಕೇವಲ 4 ರನ್‌ಗಳಿಂದ  ಶತಕ ವಂಚಿತರಾದರು.  ಡರೆನ್ ಬ್ರಾವೋ 19 ರನ್ ಸಿಡಿಸಿದರು. ಈ ಮೂಲಕ ವೆಸ್ಟ್ ಇಂಡೀಸ್ 8 ವಿಕೆಟ್ ನಷ್ಟಕ್ಕೆ 321 ರನ್ ಸಿಡಿಸಿತು. 

PREV
click me!

Recommended Stories

ವಿಶ್ವಕಪ್ ಫೈನಲ್ ವಿವಾದಾತ್ಮಕ ತೀರ್ಪು; ಮೌನ ಮುರಿದ ಅಂಪೈರ್ ಧರ್ಮಸೇನಾ!
ವಿಶ್ವಕಪ್ ಫೈನಲ್ ಗೆಲುವು ನ್ಯಾಯವಲ್ಲ; ಇಂಗ್ಲೆಂಡ್ ನಾಯಕ ವಿಷಾದ!