
ಓವಲ್(ಜೂ.10): ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಸತತ 2ನೇ ಗೆಲುವು ಸಾಧಿಸಿ ಮುನ್ನುಗ್ಗುತ್ತಿದೆ. ಆಸ್ಟ್ರೇಲಿಯಾ ವಿರುದ್ಧ ಭಾರತ 36 ರನ್ ಗೆಲುವು ಸಾಧಿಸಿತು. ಬಾಲ್ ಟ್ಯಾಂಪರಿಂಗ್ ನಿಷೇಧದ ಬಳಿಕ ವಿಶ್ವಕಪ್ ಆಡುತ್ತಿರುವ ಸ್ಟೀವ್ ಸ್ಮಿತ್‌ಗೆ ಭಾರತೀಯ ಅಭಿಮಾನಿಗಳು ಅಣಕಿಸಿದ್ದರು. ಇದಕ್ಕೆ ಗರಂ ಆದ ವಿರಾಟ್ ಕೊಹ್ಲಿ ತಕ್ಷಣವೇ ಅಭಿಮಾನಿಗಳಿಗೆ ಅಣಕಿಸದಂತೆ ಸೂಚನೆ ನೀಡಿದ್ದರು. ಇಷ್ಟೇ ಅಲ್ಲ ಅಭಿಮಾನಿಗಳ ಪರವಾಗಿ ವಿರಾಟ್ ಕೊಹ್ಲಿ, ಸ್ಮಿತ್ ಬಳಿ ಕ್ಷಮೇ ಕೇಳಿದ್ದಾರೆ. ಕೊಹ್ಲಿ ನಡತೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿರಾಟ್ ಕೊಹ್ಲಿ ಕ್ರಿಕೆಟ್‌ನ ಜಂಟ್ಲಮೆನ್. ಕೊಹ್ಲಿ ನಡೆತ ಎಲ್ಲರಿಗೂ ಮಾದರಿ ಎಂದು ಸಾಮಾಜಿಕ ಜಾಲತಾಣದಲ್ಲಿ ಕ್ರಿಕೆಟ್ ದಿಗ್ಗಜರು, ಅಭಿಮಾನಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.