ದಕ್ಷಿಣ ಆಫ್ರಿಕಾಕ್ಕೆ ಸತತ 4ನೇ ಸೋಲಿನ ಭೀತಿ!

Published : Jun 10, 2019, 12:38 PM IST
ದಕ್ಷಿಣ ಆಫ್ರಿಕಾಕ್ಕೆ ಸತತ 4ನೇ ಸೋಲಿನ ಭೀತಿ!

ಸಾರಾಂಶ

ವೆಸ್ಟ್ ಇಂಡೀಸ್ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಪಂದ್ಯಕ್ಕೆ ಸೌಥಾಂಪ್ಟನ್‌ ಮೈದಾನ ಸಾಕ್ಷಿಯಾಗಲಿದ್ದು, ದಕ್ಷಿಣ ಆಫ್ರಿಕಾ ಮೊದಲ ಗೆಲುವಿನ ಕನವರಿಕೆಯಲ್ಲಿದೆ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ...

ಸೌಥಾಂಪ್ಟನ್‌[ಜೂ.10]: 2019ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ಹೀನಾಯ ಆರಂಭ ಪಡೆದುಕೊಂಡಿದೆ. ಆಡಿರುವ ಮೂರೂ ಪಂದ್ಯಗಳಲ್ಲಿ ಸೋತಿರುವ ಫಾಫ್‌ ಡು ಪ್ಲೆಸಿಸ್ ಪಡೆ, ರೌಂಡ್‌ ರಾಬಿನ್‌ ಹಂತದಲ್ಲೇ ಹೊರಬೀಳುವ ಆತಂಕಕ್ಕೀಡಾಗಿದ್ದು, ಸೋಮವಾರ ವೆಸ್ಟ್‌ಇಂಡೀಸ್‌ ವಿರುದ್ಧ ಇಲ್ಲಿ ನಡೆಯಲಿರುವ ಪಂದ್ಯದಲ್ಲಿ ಗೆಲ್ಲುವ ಕನಸು ಕಾಣುತ್ತಿದೆ.

ಸೆಮಿಫೈನಲ್‌ ಪೈಪೋಟಿಯಲ್ಲಿ ಉಳಿದುಕೊಳ್ಳಬೇಕಿದ್ದರೆ ದ.ಆಫ್ರಿಕಾ ಇನ್ನುಳಿದ ಆರೂ ಪಂದ್ಯಗಳಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಹೀಗಾಗಿ ಆಕ್ರಮಣಕಾರಿ ಆಟ ಅಳವಡಿಸಿಕೊಳ್ಳಬೇಕಿದೆ. ಆಡಿರುವ 2 ಪಂದ್ಯಗಳಲ್ಲಿ ತಲಾ 1 ಗೆಲುವು, ಸೋಲು ಕಂಡಿರುವ ವಿಂಡೀಸ್‌, ತನ್ನ ವೇಗದ ಬೌಲಿಂಗ್‌ ದಾಳಿಯಿಂದ ಹರಿಣಗಳನ್ನು ಕಟ್ಟಿಹಾಕಿ, ಗೆಲುವಿನ ಹಳಿಗೆ ಮರಳಲು ಎದುರು ನೋಡುತ್ತಿದೆ.

ವಿಶ್ವಕಪ್‌ನಲ್ಲಿ ದ.ಆಫ್ರಿಕಾ vs ವಿಂಡೀಸ್‌

ಪಂದ್ಯ: 06

ವಿಂಡೀಸ್‌: 02

ದ.ಆಫ್ರಿಕಾ: 04

ಸಂಭವನೀಯ ತಂಡಗಳು

ವಿಂಡೀಸ್‌: ಗೇಲ್‌, ಲೆವಿಸ್‌, ಹೋಪ್‌, ಪೂರನ್‌, ಹೆಟ್ಮೇಯರ್‌, ಹೋಲ್ಡರ್‌(ನಾಯಕ), ರಸೆಲ್‌, ಬ್ರಾಥ್‌ವೇಟ್‌, ನರ್ಸ್‌, ಕಾಟ್ರೆಲ್‌, ಥಾಮಸ್‌.

ದ.ಆಫ್ರಿಕಾ: ಆಮ್ಲಾ, ಡಿ ಕಾಕ್‌, ಡು ಪ್ಲೆಸಿ, ವಾನ್‌ ಡರ್‌ ಡುಸ್ಸೆನ್‌, ಮಿಲ್ಲರ್‌, ಡುಮಿನಿ, ಫೆಲುಕ್ವಾಯೋ, ಮೋರಿಸ್‌, ರಬಾಡ, ತಾಹಿರ್‌, ಶಮ್ಸಿ.

ಸ್ಥಳ: ಸೌಥಾಂಪ್ಟನ್‌ 
ಪಂದ್ಯ ಆರಂಭ: ಮಧ್ಯಾಹ್ನ 3ಕ್ಕೆ 
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ 1

PREV
click me!

Recommended Stories

ವಿಶ್ವಕಪ್ ಫೈನಲ್ ವಿವಾದಾತ್ಮಕ ತೀರ್ಪು; ಮೌನ ಮುರಿದ ಅಂಪೈರ್ ಧರ್ಮಸೇನಾ!
ವಿಶ್ವಕಪ್ ಫೈನಲ್ ಗೆಲುವು ನ್ಯಾಯವಲ್ಲ; ಇಂಗ್ಲೆಂಡ್ ನಾಯಕ ವಿಷಾದ!