ಆಸ್ಟ್ರೇಲಿಯಾ ಮಣಿಸಿ ಸೇಡು ತೀರಿಸಿಕೊಂಡ ಟೀಂ ಇಂಡಿಯಾ!

By Web DeskFirst Published Jun 9, 2019, 11:15 PM IST
Highlights

ಭಾರತ ಹಾಗೂ  ಆಸ್ಟ್ರೇಲಿಯಾ ನಡುವಿನ ಲೀಗ್ ಪಂದ್ಯ ಅಭಿಮಾನಿಗಳಿಗೆ ಸಖತ್ ಮನರಂಜನೆ ನೀಡಿದೆ. ಭಾರತ 352 ರನ್ ಸಿಡಿಸಿದರೆ ಆಸ್ಟ್ರೇಲಿಯೂ 316 ರನ್ ಸಿಡಿಸಿ ಟೀಂ ಇಂಡಿಯಾ ಅಭಿಮಾನಿಗಳಲ್ಲಿ ಆತಂಕ ಸೃಷ್ಟಿಸಿತ್ತು. ರೋಚಕ ಪಂದ್ಯದಲ್ಲಿ ಟೀಂ ಇಂಡಿಯಾ 36 ರನ್ ಗೆಲುವು ಸಾಧಿಸಿದೆ. ಇಲ್ಲಿದೆ ಹೈಲೈಟ್ಸ್.

ಓವಲ್(ಜೂ.09): ವಿಶ್ವಕಪ್ ಟೂರ್ನಿಯ ಲೀಗ್ ಪಂದ್ಯದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ಮುಖಾಮುಖಿ ಹಲವು ರೋಚಕ ಕ್ಷಣಗಳಿಗೆ ಸಾಕ್ಷಿಯಾಯಿತು. ರನ್ ಸುರಿಮಳೆ ಪಂದ್ಯದಲ್ಲಿ ಟೀಂ ಇಂಡಿಯಾ 36 ರನ್ ಗೆಲುವು ಸಾಧಿಸಿದೆ. ಈ ಮೂಲಕ 2015ರ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಂಡಿದೆ.

353 ರನ್ ಟಾರ್ಗೆಟ್ ಪಡೆದ ಆಸ್ಟ್ರೇಲಿಯಾ ಕೂಡ ಉತ್ತಮ ಆರಂಭ ಪಡೆಯಿತು. ಡೇವಿಡ್ ವಾರ್ನರ್ ಹಾಗೂ ಆ್ಯರೋನ್ ಫಿಂಚ್ ಮೊದಲ ವಿಕೆಟ್ ವಿಕೆಟ್‌ಗೆ 61 ರನ್ ಜೊತೆಯಾಟ ನೀಡಿದರು. ಫಿಂಚ್ 36 ರನ್ ಸಿಡಿಸಿ ರನೌಟ್‌ಗೆ ಬಲಿಯಾದರು. ಆದರೆ ಸ್ಟೀವ್ ಸ್ಮಿತ್ ಹಾಗೂ ವಾರ್ನರ್ ಜೊತೆಯಾಟ ಆಸೀಸ್ ತಂಡಕ್ಕೆ ಚೇತರಿಕೆ ನೀಡಿತು.

ಹಾಫ್ ಸೆಂಚುರಿ ಸಿಡಿಸಿ ಆಸರೆಯಾಗಿದ್ದ ಡೇವಿಡ್ ವಾರ್ನರ್, ಸ್ಪಿನ್ನರ್ ಯಜುವೇಂದ್ರ ಚಹಾಲ್‌ಗೆ ವಿಕೆಟ್ ಒಪ್ಪಿಸಿದರು. ವಾರ್ನರ್ 56 ರನ್ ಸಿಡಿಸಿ ಔಟಾದರು. ಉಸ್ಮಾನ್ ಖವಾಜ 42 ರನ್ ಕಾಣಿಕೆ ನೀಡೋ ಮೂಲಕ ಆಸೀಸ್ ತಂಡದ ಆತ್ಮವಿಶ್ವಾಸ ಹೆಚ್ಚಿಸಿದರು.  ಸ್ಟೀವ್ ಸ್ಮಿತ್ ಅರ್ಧಶತಕ ಸಿಡಿಸಿ ನೆರವಾದರು.

ಭುವನೇಶ್ವರ್ ಕುಮಾರ್ ಎಸೆತದಲ್ಲಿ ಸ್ಮಿತ್ ಎಲ್‌ಬಿ ಬಲೆಗೆ ಬಿದ್ದರೂ  ಅಂಪೈರ್ ಔಟ್ ತೀರ್ಪು ನೀಡಲಿಲ್ಲ. ಹೀಗಾಗಿ ಡಿಆರ್‌ಎಸ್ ಮೊರೆ ಹೋದ  ಟೀಂ ಇಂಡಿಯಾ ಸ್ಮಿತ್ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಯಿತು. ಸ್ಮಿತ್ 69 ರನ್ ಸಿಡಿಸಿ ಔಟಾದರು. ಇದರ ಬೆನ್ನಲ್ಲೇ ಮಾರ್ಕಸ್ ಸ್ಟೊಯ್ನಿಸ್ ವಿಕೆಟ್ ಪತನಗೊಂಡಿತು. ಅಬ್ಬರಿಸೋ ಸೂಚನೆ ನೀಡಿದ ಗ್ಲೆನ್ ಮ್ಯಾಕ್ಸ್‌ವೆಲ್ 28 ರನ್ ಸಿಡಿಸಿ ಚಹಾಲ್‌ಗೆ ವಿಕೆಟ್ ಒಪ್ಪಿಸಿದರು.

ನಥನ್ ಕೌಲ್ಟರ್ ನೈಲ್ ವಿಕೆಟ್ ಪತನ ಆಸ್ಟ್ರೇಲಿಯಾ ಪಾಳಯದಲ್ಲಿ ಆತಂಕ ಹೆಚ್ಚಿಸಿತು. ಪ್ಯಾಟ್ ಕಮಿನ್ಸ್ 8 ರನ್ ಸಿಡಿಸಿ ಔಟಾದರು. ಆದರೆ ಅಲೆಕ್ಸ್ ಕ್ಯಾರಿ ಹಾಫ್ ಸೆಂಚುರಿ ಸಿಡಿಸಿ ಆಸರೆಯಾದರು. ಮಿಚೆಲ್ ಸ್ಟಾರ್ಕ್ 3 ರನ್ ಸಿಡಿಸಿ ರನೌಟ್‌ಗೆ ಬಲಿಯಾದರು. ಆ್ಯಡಂ ಝಂಪಾ ವಿಕೆಟ್ ಪತನದೊಂದಿದೆ  ಆಸ್ಟ್ರೇಲಿಯಾ 49.5 ಓವರ್‌ಗಳಲ್ಲಿ 316 ರನ್‌ಗೆ  ಆಲೌಟ್ ಆಯಿತು. ಈ ಮೂಲಕ ಭಾರತ 36 ರನ್ ಗೆಲುವು ಸಾಧಿಸಿತು. 

click me!