ವಿಶ್ವಕಪ್ ಸೋಲಿನ ಬೆನ್ನಲ್ಲೇ ವಿಂಡೀಸ್ ಪ್ರವಾಸಕ್ಕೆ ಭಾರತಕ್ಕೆ ಸಿದ್ಧತೆ!

By Web Desk  |  First Published Jul 12, 2019, 10:11 AM IST

ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದ ಟೀಂ ಇಂಡಿಯಾ ಇದೀಗ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಸಿದ್ದತೆ ನಡೆಸುತ್ತಿದೆ. 2 ವಾರದ ವಿಶ್ರಾಂತಿ ಬಳಿಕ ಟೀಂ ಇಂಡಿಯಾ ನೇರವಾಗಿ ಕೆರಿಬಿಯನ್ ನಾಡಿಗೆ ಹಾರಲಿದೆ. 


ಮ್ಯಾಂಚೆಸ್ಟರ್(ಜು.12): ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿರುವ ಟೀಂ ಇಂಡಿಯಾ ಸದ್ಯ ಇಂಗ್ಲೆಂಡ್‌ನಲ್ಲೇ ಬೀಡುಬಟ್ಟಿದೆ. ತಂಡದಲ್ಲಿನ ಕೆಲ ಆಟಗಾರರು ಇಂಗ್ಲೆಂಡ್‌ನಲ್ಲೇ ತಂಗಲಿದ್ದಾರೆ. ಬಳಿಕ ಅಲ್ಲಿಂದಲೇ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿದ್ದಾರೆ. ಆಗಸ್ಟ್ 3 ರಿಂದ ವೆಸ್ಟ್ ವಿರುದ್ದದ ಸರಣಿ ಆರಂಭಗೊಳ್ಳಲಿದೆ.

ಇದನ್ನೂ ಓದಿ: ವಿಶ್ವಕಪ್‌ನಲ್ಲಿ ಐಪಿಎಲ್‌ ಮಾದರಿ ಅಳವಡಿಸಲು ಕೊಹ್ಲಿ ಇಂಗಿತ!

Tap to resize

Latest Videos

ವಿಶ್ವಕಪ್ ಟೂರ್ನಿ ಸೋಲಿನ ಬಳಿಕ 2 ವಾರ ವಿಶ್ರಾಂತಿ ಪಡೆಯಲಿರುವ ಕ್ರಿಕೆಟಿಗರು ವೆಸ್ಟ್ ಇಂಡೀಸ್ ವಿರುದ್ಧದ ಸರಣಿ ಆಡಲಿದ್ದಾರೆ.  ಕೆಲ ಆಟಗಾರರು ತವರಿಗೆ ವಾಪಸಾಗಲಿದ್ದಾರೆ. ಇನ್ನೂ ಕೆಲವರು ಇಂಗ್ಲೆಂಡ್‌ನಲ್ಲೇ ಕೆಲ ದಿನಗಳ ವರೆಗೂ ಉಳಿಯಲಿದ್ದು, ಮತ್ತೆ ಕೆಲವರು ಪ್ರವಾಸಕ್ಕೆ ತೆರಳಲಿದ್ದಾರೆ ಎನ್ನಲಾಗಿದೆ. ಮುಂದಿನ ವಾರ ವಿಂಡೀಸ್‌ ಪ್ರವಾಸಕ್ಕೆ ಭಾರತ ತಂಡ ಪ್ರಕಟಗೊಳ್ಳಲಿದೆ. ಟಿ20, ಏಕದಿನ ಹಾಗೂ ಟೆಸ್ಟ್‌ ಸರಣಿಗಳನ್ನು ಭಾರತ ಆಡಲಿದೆ.
 

click me!