ಧೋನಿ ನಿವೃತ್ತಿ ಮಾತು; ಗಾಯಕಿ ಲತಾ ಮಂಗೇಶ್ಕರ್ ಮನವಿ!

Published : Jul 12, 2019, 09:36 AM IST
ಧೋನಿ ನಿವೃತ್ತಿ ಮಾತು; ಗಾಯಕಿ ಲತಾ ಮಂಗೇಶ್ಕರ್ ಮನವಿ!

ಸಾರಾಂಶ

ಟೀಂ ಇಂಡಿಯಾ ನಾಯಕ ತವರಿಗೆ ವಪಾಸ್ಸಾದ ಬಳಿಕ ನಿವೃತ್ತಿ ಹೇಳಲಿದ್ದಾರೆ ಅನ್ನೋ ಮಾತು ಎಲ್ಲೆಡೆ ಹರಿದಾಡುತ್ತಿದೆ. ಧೋನಿ ಕ್ರಿಕೆಟ್ ಕರಿಯರ್ ನಿರ್ಧಾರ ಕುತೂಹಲದ ಜೊತೆ ಅಭಿಮಾನಿಗಳ ಆತಂಕಕ್ಕೂ ಕಾರಣವಾಗಿದೆ. ಇದರ ಬೆನ್ನಲ್ಲೇ ಗಾಯಕಿ ಲತಾ ಮಂಗೇಶ್ಕರ್ ಧೋನಿ ಬಳಿ ಮನವಿ ಮಾಡಿದ್ದಾರೆ.    

ನವದೆಹಲಿ(ಜು.12): ಟೀಂ ಇಂಡಿಯಾ ಮಾಜಿ ನಾಯಕ, ತಂಡದ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ ವಿಶ್ವಕಪ್ ಟೂರ್ನಿ ಬೆನ್ನಲ್ಲೇ ನಿವೃತ್ತಿ ನೀಡಲಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದೆ. ಮಾಜಿ ಕ್ರಿಕೆಟಿಗರು ಹಾಗೂ ಕೆಲ ದಿಗ್ಗಜ ಕ್ರಿಕೆಟಿಗರೂ ಧೋನಿ ನಿವೃತ್ತಿಗೆ ಆಗ್ರಹಿಸಿದ್ದರು. ಇದರ ಬೆನ್ನಲ್ಲೇ ಭಾರತದ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಧೋನಿ ಬಳಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಧೋನಿ ರನೌಟ್; ಅಂಪೈರ್ ತಪ್ಪಿಗೆ ಬಲಿಯಾಯ್ತಾ ಟೀಂ ಇಂಡಿಯಾ?

ಎಂ.ಎಸ್.ಧೋನಿ ಈಗಲೇ ನಿವೃತ್ತಿಯಾಗಬೇಡಿ ಎಂದು ಲತಾ ಮಂಗೇಶ್ಕರ್ ಟ್ವೀಟ್ ಮಾಡೋ ಮೂಲಕ ಮನವಿ ಮಾಡಿದ್ದಾರೆ.  ‘ನಮಸ್ಕಾರ ಧೋನಿ ಜೀ. ನೀವು ನಿವೃತ್ತಿ ನೀಡಬಹುದು ಎನ್ನುವ ಸುದ್ದಿ ನೋಡಿದೆ. ದಯಮಾಡಿ ಆ ಬಗ್ಗೆ ಯೋಚಿಸಬೇಡಿ. ನೀವು ಇನ್ನಷ್ಟುದಿ ಭಾರತದ ಪರ ಆಡಬೇಕು’ ಎಂದು ಲತಾ ಟ್ವೀಟ್ ಮಾಡಿದ್ದಾರೆ.  ಇಷ್ಟೇ ಅಲ್ಲ ಟೀಂ ಇಂಡಿಯಾಗಾಗಿ ಹಾಡೊಂದನ್ನು ಅರ್ಪಿಸಿದ್ದಾರೆ. 

 

ಇದನ್ನೂ ಓದಿ: ಧೋನಿ ಟೀಕಿಸುವ ಮುನ್ನ ಕೇನ್ ವಿಲಿಯಮ್ಸನ್ ಮಾತನ್ನೊಮ್ಮೆ ಕೇಳಿ...

ಧೋನಿ, ಇಂಗ್ಲೆಂಡ್‌ನಿಂದ ತವರಿಗೆ ವಾಪಸಾದ ಬಳಿಕ ನಿವೃತ್ತಿ ಘೋಷಿಸಬಹುದು ಎನ್ನುವ ಸುದ್ದಿ ಹರಿದಾಡುತ್ತಿದೆ. ಸಾಮಾಜಿಕ ತಾಣಗಳಲ್ಲೂ ಧೋನಿ ನಿವೃತ್ತಿ ವಿಚಾರ ಭಾರಿ ಚರ್ಚೆಗೆ ಕಾರಣವಾಗಿದೆ. ವಿಶ್ವಕಪ್ ಟೂರ್ನಿಯ ಆರಂಭಿಕ ಪಂದ್ಯಗಳಲ್ಲಿ ಧೋನಿ ನಿಧಾನಗತಿಯ ಬ್ಯಾಟಿಂಗ್ ಟೀಕೆಗೆ ಗುರಿಯಾಗಿತ್ತು. ಆದರೆ ಸೆಮಿಫೈನಲ್ ಪಂದ್ಯದಲ್ಲಿ ಧೋನಿ ಪ್ರದರ್ಶನ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ನ್ಯೂಜಿಲೆಂಡ್ ವಿರುದ್ದ  ಧೋನಿ 50 ರನ್ ಸಿಡಿಸಿದರೂ ಭಾರತ ಗೆಲುವು ಸಾಧಿಸಲಿಲ್ಲ. ಹೀಗಾಗಿ ಟೂರ್ನಿಗೆ ವಿದಾಯ ಹೇಳಿತು.
 

PREV
click me!

Recommended Stories

ವಿಶ್ವಕಪ್ ಫೈನಲ್ ವಿವಾದಾತ್ಮಕ ತೀರ್ಪು; ಮೌನ ಮುರಿದ ಅಂಪೈರ್ ಧರ್ಮಸೇನಾ!
ವಿಶ್ವಕಪ್ ಫೈನಲ್ ಗೆಲುವು ನ್ಯಾಯವಲ್ಲ; ಇಂಗ್ಲೆಂಡ್ ನಾಯಕ ವಿಷಾದ!