ವಿಶ್ವಕಪ್‌ನಿಂದ ಶಿಖರ್ ಧವನ್ ಔಟ್- ಟೀಂ ಇಂಡಿಯಾಗಾದ ನಷ್ಟವೇನು?

By Web DeskFirst Published Jun 20, 2019, 3:15 PM IST
Highlights

ವಿಶ್ವಕಪ್ ಟೂರ್ನಿಯಿಂದ ಶಿಖರ್ ಧವನ್ ಹೊರಬಿದ್ದಿರುವುದು ಟೀಂ ಇಂಡಿಯಾ ತಲೆನೋವು ಹೆಚ್ಚಿಸಿದೆ. ಐಸಿಸಿ ಟೂರ್ನಿಯಲ್ಲಿ ಧವನ್ ಅಲಭ್ಯತೆ ಟೀಂ ಇಂಡಿಯಾದ ಮೇಲೆ ಪರಿಣಾಮವೇನು? ಇಲ್ಲಿದೆ ವಿವರ

ಲಂಡನ್(ಜೂ.20): ಕೆಬೆರಳಿನ ಗಾಯಕ್ಕೆ ತುತ್ತಾಗಿರುವ ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಧವನ್ ಬದಲು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್‌ಗೆ ಸ್ಥಾನ ಲಭಸಿಸಿದೆ. ಆದರೆ ಧವನ್ ಅಲಭ್ಯತೆಯಿಂದ ಟೀಂ ಇಂಡಿಯಾ ತೀವ್ರ ಹಿನ್ನಡೆಯಾಗಿದೆ.

ಇದನ್ನೂ ಓದಿ: ಅಯ್ಯೋ ಪಾಪ: ಟ್ವೀಟ್ ಮಾಡಿ ಕೆಟ್ಟ ರಾಯುಡು!

ಐಸಿಸಿ ಟೂರ್ನಿಯಲ್ಲಿ ಶಿಖರ್ ಧವನ್ ಶ್ರೇಷ್ಠ ಪ್ರದರ್ಶನ ನೀಡಿದ್ದಾರೆ. 2013, 2017ರ ಚಾಂಪಿಯನ್ಸ್ ಟ್ರೋಫಿ ಹಾಗೂ  2015ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಪರ ಗರಿಷ್ಠ ರನ್ ಸಿಡಿಸಿದ ದಾಖಲೆ ಬರೆದಿದ್ದಾರೆ. 2014 ಹಾಗೂ 2018ರ ಏಷ್ಯಾಕಪ್ ಟೂರ್ನಿಯಲ್ಲೂ ಧವನ್ ಗರಿಷ್ಠ ರನ್ ಸಿಡಿಸಿದ ಸಾಧನೆ ಮಾಡಿದ್ದಾರೆ.

ಇದನ್ನೂ ಓದಿ: ಟ್ವಿಟರ್‌ನಲ್ಲಿ ಕೊಹ್ಲಿಗೆ ಮೂರು ಕೋಟಿ ಹಿಂಬಾಲಕರು..!

2019ರ ವಿಶ್ವಕಪ್ ಟೂರ್ನಿಯಲ್ಲೂ ಧವನ್ 2 ಪಂದ್ಯಗಳಿಂದ 25 ರನ್ ಸಿಡಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಮಹತ್ವದ ಪಂದ್ಯದಲ್ಲಿ ಧವನ್ ಸೆಂಚುರಿ ಸಿಡಿಸಿದ್ದರು. ಈ ಮೂಲಕ  ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದೀಗ ಧವನ್ ಅಲಭ್ಯರಾಗಿರೋದು ನಿರ್ಣಾಯಕ ಪಂದ್ಯಗಲ್ಲಿ ಟೀಂ ಇಂಡಿಯಾಗೆ ಸಮಸ್ಯೆ ಎದುರಾಗಲಿದೆ.
 

click me!