ವಿಶ್ವಕಪ್ 2019: ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್- 1 ಬದಲಾವಣೆ

Published : Jun 20, 2019, 02:36 PM ISTUpdated : Jun 20, 2019, 02:39 PM IST
ವಿಶ್ವಕಪ್ 2019: ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್- 1 ಬದಲಾವಣೆ

ಸಾರಾಂಶ

ವಿಶ್ವಕಪ್ ಟೂರ್ನಿಯ ಲೀಗ್ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಟಾಸ್ ಗೆದ್ದಿರುವ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ನಾಟಿಂಗ್‌ಹ್ಯಾಮ್ ಪಂದ್ಯಕ್ಕೆ ಉಭಯ ತಂಡಗಳ ಬದಲಾವಣೆ ಏನು? ಇಲ್ಲಿದೆ ವಿವರ.

ನಾಟಿಂಗ್‌ಹ್ಯಾಮ್(ಜೂ.20): ವಿಶ್ವಕಪ್ ಟೂರ್ನಿಯ 26ನೇ ಲೀಗ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಹಾಗೂ ಬಾಂಗ್ಲಾದೇಶ ತಂಡ ಮುಖಾಮುಖಿಯಾಗುತ್ತಿದೆ. ಟಾಸ್ ಗೆದ್ದಿರುವ ಆಸ್ಟ್ರೇಲಿಯಾ  ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಆಸ್ಟ್ರೇಲಿಯಾ ತಂಡದಲ್ಲಿ 1 ಬದಲಾವಣೆ ಮಾಡಲಾಗಿದೆ. ಆಲ್ರೌಂಡರ್ ಮಾರ್ಕಸ್ ಸ್ಟೊಯ್ನಿಸ್ ತಂಡ ಸೇರಿಕೊಂಡಿದ್ದಾರೆ. ಬಾಂಗ್ಲಾ ತಂಡದಲ್ಲಿ 2 ಬದಲಾವಣೆ ಮಾಡಲಾಗಿದೆ. ಸೈಫುದ್ದೀನ್ ಬದಲು ರುಬೆಲ್ ಹುಸೆನ್ ಹಾಗೂ, ಮೊಸಾದ್ದೆಕ್ ಬದಲು ಸಬ್ಬೀರ್ ರಹಮಾನ್ ತಂಡ ಸೇರಿಕೊಂಡಿದ್ದಾರೆ.

 

ಆಸ್ಟ್ರೇಲಿಯಾ ಆಡಿದ 5 ಪಂದ್ಯದಲ್ಲಿ 4 ಗೆಲುವು ಹಾಗೂ 1 ಪಂದ್ಯದಲ್ಲಿ ಸೋಲು ಅನುಭವಿಸಿದೆ. 8 ಅಂಕ ಸಂಪಾದಿಸಿರುವ ಆಸ್ಟ್ರೇಲಿಯಾ 3ನೇ ಸ್ಥಾನದಲ್ಲಿದೆ. ಇತ್ತ ಬಾಂಗ್ಲಾದೇಶ ಬಲಿಷ್ಠ ತಂಡಗಳನ್ನು ಸೋಲಿಸಿ 2 ಗೆಲುವಿನೊಂದಿಗೆ 5ನೇ ಸ್ಥಾನದಲ್ಲಿದೆ. 

PREV
click me!

Recommended Stories

ವಿಶ್ವಕಪ್ ಫೈನಲ್ ವಿವಾದಾತ್ಮಕ ತೀರ್ಪು; ಮೌನ ಮುರಿದ ಅಂಪೈರ್ ಧರ್ಮಸೇನಾ!
ವಿಶ್ವಕಪ್ ಫೈನಲ್ ಗೆಲುವು ನ್ಯಾಯವಲ್ಲ; ಇಂಗ್ಲೆಂಡ್ ನಾಯಕ ವಿಷಾದ!