
ಬೆಂಗಳೂರು(ಜು.17): ವಿಶ್ವಕಪ್ ಟೂರ್ನಿ ಮುಗಿದರೂ ಟೂರ್ನಿಯ ವಿವಾದ ತಣ್ಣಗಾಗುವ ಲಕ್ಷಣಗಳು ಕಾಣುತ್ತಿಲ್ಲ. ಫೈನಲ್ ಪಂದ್ಯ ಎರಡು ಬಾರಿ ಟೈ ಆದಾಗ ಗರಿಷ್ಠ ಬೌಂಡರಿ ಸಿಡಿಸಿದ ಆಧಾರದಲ್ಲಿ ಇಂಗ್ಲೆಂಡ್ ತಂಡಕ್ಕೆ ಗೆಲುವು ಘೋಷಿಸಲಾಗಿದೆ. ಇದು ವಿವಾದಕ್ಕೂ ಕಾರಣವಾಗಿದೆ. ಇಷ್ಟೇ ಅಲ್ಲ ಈ ನಿಯಮ ಇದೀಗ ಟ್ರೋಲ್ ಆಗುತ್ತಿದೆ. ಕರ್ನಾಟಕ ರಾಜ್ಯ ರಾಜಕಾರಣಕ್ಕೂ ICC ನಿಯಮ ಅನ್ವಯಿಸಿ ಟ್ರೋಲ್ ಮಾಡಲಾಗುತ್ತಿದೆ.
ಇದನ್ನೂ ಓದಿ: ವಿಶ್ವಕಪ್ 2019: ಅಂಪೈರ್ ಗಳ ಭಾರೀ ಎಡವಟ್ಟು
ಸುಪ್ರೀಂ ಕೋರ್ಟ್ ಆದೇಶದಂತೆ ವಿಶ್ವಾಸ ಮತ ಯಾಚನೆಗೆ(ಜು.18) ಸಿಎಂ ಕುಮಾರ ಸ್ವಾಮಿ ಸಜ್ಜಾಗಿದ್ದಾರೆ. ಇದೀಗ ಕುಮಾರಸ್ವಾಮಿ ಹಾಗೂ ವಿಪಕ್ಷದಲ್ಲಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸಮಾನ ಮತ ಪಡೆದರೆ ಐಸಿಸಿ ನಿಯಮ ಏನು ಹೇಳುತ್ತೆ ಅನ್ನೋದು ಟ್ರೋಲ್ ಆಗುತ್ತಿದೆ.
ನಾಳೆ ವಿಶ್ವಾಸಮತ ಯಾಚನೆಯಲ್ಲಿ ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ಇಬ್ಬರೂ ಸಮಾನ ಮತ ಪಡೆದಲ್ಲಿ ಹೆಚ್ಚು ಹೆಂಡತಿ ಇರುವ ಆಧಾರದಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಆಯ್ಕೆಯಾಗಲಿದ್ದಾರೆ.
#ICC#WorldCup19 ನಿಯಮ
ನಿಮ್ಮ ಬಳಿ .2 ಸಾವಿರವಿದೆ. ನನ್ನ ಬಳಿಯೂ .2 ಸಾವಿರವಿದೆ. ನಿಮ್ಮ ಬಳಿ .2000ದ ಒಂದು ನೋಟಿದೆ. ನನ್ನ ಬಳಿ .500ರ 4 ನೋಟುಗಳಿವೆ. ನಮ್ಮಿಬ್ಬರಲ್ಲಿ ಯಾರು ಶ್ರೀಮಂತರು ಎಂದು ಐಸಿಸಿಯನ್ನು ಕೇಳಿದರೆ, ಯಾರ ಬಳಿ 500ರ 4 ನೋಟುಗಳಿವೆಯೋ ಅವರೇ ಶ್ರೀಮಂತರು ಎನ್ನಲಿದೆ.
- ಅಮಿತಾಭ್ ಬಚ್ಚನ್
ಎರಡೂ ತಂಡಗಳು ಬಾರಿಸಿದ ಒಟ್ಟು ಬೌಂಡರಿಗಳ ಸಂಖ್ಯೆಯೂ ಸಮಗೊಂಡರೆ, ಆಗ ಉಭಯ ತಂಡಗಳ ನಾಯಕ 10ನೇ ಇಲ್ಲವೇ 12ನೇ ತರಗತಿಯ ಅಂಕಪಟ್ಟಿಯಲ್ಲಿನ ಅಂಕಗಳನ್ನು ಪರಿಗಣಿಸಲಾಗುತ್ತದೆ.
#ICCRules
ಮುಂದಿನ ದಿನಗಳಲ್ಲಿ ಪಂದ್ಯ ಸೂಪರ್ ಓವರ್ ಟೈ ಆದರೆ ಎರಡೂ ತಂಡಗಳ ಆಟಗಾರರ ಜೆರ್ಸಿ ಸಂಖ್ಯೆಗಳನ್ನು ಕೂಡಿಸಿದಾಗ ಯಾರು ಹೆಚ್ಚು ಗಳಿಸುತ್ತಾರೋ ಅವರೇ ವಿಜೇತರು ಎಂದು ಐಸಿಸಿ ಘೋಷಿಸಬಹುದು.
#ICCRules
ಗುಂಡ ಮತ್ತು ಪುಂಡ ಲಡ್ಡು ತಿನ್ನುವ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಮೊದಲಿಗೆ ಇಬ್ಬರೂ ಕೊಟ್ಟ ಸಮಯದಲ್ಲಿ ಹತ್ತು ಹತ್ತು ಲಡ್ಡು ತಿಂದರು.
ಟೈ-ಬ್ರೇಕ್ ಮಾಡಲು ಮತ್ತೆ ನಾಲ್ಕು ಲಡ್ಡುಗಳನ್ನು ಕೊಡಲಾಯಿತು. ಅದನ್ನೂ ಇಬ್ಬರು ಒಂದೇ ಸಮಯಕ್ಕೆ ತಿಂದು ಮುಗಿಸಿದರು.
ಕೊನೆಗೆ ಗುಂಡ ತಿಂದ ಲಡ್ಡುಗಳಲ್ಲಿ ಒಣದ್ರಾಕ್ಷಿ ಜಾಸ್ತಿ ಇತ್ತು ಎಂಬ ಲೆಕ್ಕಾಚಾರದಲ್ಲಿ ಗುಂಡನನ್ನು ವಿಜಯಿ ಎಂದು ಘೋಷಿಸಲಾಯಿತು.
#ICCRules
ಶಿಕ್ಷಕ: ಇಂಗ್ಲೆಂಡ್‌ಗೆ ಮೊದಲ ರ್ಯಾಂಕ್
ನ್ಯೂಜಿಲೆಂಡ್: ನನಗೂ ಇಂಗ್ಲೆಂಡ್‌ನಷ್ಟೇ ಅಂಕಗಳು ಬಂದಿವೆ.
ಶಿಕ್ಷಕ: ನೋಡು, ಇಂಗ್ಲೆಂಡ್ 4 ಅಂಕಗಳ ಪ್ರಶ್ನೆಗೆ ಉತ್ತರಿಸಿದೆ. ನೀನು 2 ಅಂಕಗಳ ಪ್ರಶ್ನೆಗಳಿಗೆ ಉತ್ತರಿಸಿದ್ದೀಯ. ಹೀಗಾಗಿ ಇಂಗ್ಲೆಂಡ್ ವಿಜೇತ ತಂಡ.
- ಚೇತನ್ ಭಗತ್, ಖ್ಯಾತ ಲೇಖಕ
ಇತ್ತೀಚೆಗೆ ಜೋಕ್‌ಗಳಿಗಿಂತ ಐಸಿಸಿ ನಿಯಮಗಳೇ ಹೆಚ್ಚು ನಗು ತರಿಸುತ್ತಿವೆ.