ರೊಚ್ಚಿಗೆದ್ದ ಅಭಿಮಾನಿಗಳನ್ನು ನಾಜೂಕಾಗಿ ಸಮಾಧಾನ ಮಾಡಿದ ಕೋಚ್ ಶಾಸ್ತ್ರಿ

Published : Jun 14, 2019, 05:05 PM ISTUpdated : Jun 14, 2019, 05:15 PM IST
ರೊಚ್ಚಿಗೆದ್ದ ಅಭಿಮಾನಿಗಳನ್ನು ನಾಜೂಕಾಗಿ ಸಮಾಧಾನ ಮಾಡಿದ ಕೋಚ್ ಶಾಸ್ತ್ರಿ

ಸಾರಾಂಶ

ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಪಂದ್ಯಕ್ಕಾಗಿ ಕಾದು ಅಭಿಮಾನಿಗಳಿಗೆ ಮ್ಯಾಚ್ ರದ್ದಾಗುತ್ತಿದ್ದಂತೆ ತಾಳ್ಮೆಯ ಕಟ್ಟೆ ಒಡೆದಿದೆ. ಹೀಗಾಗಿ ಕೊನೆ ಪಕ್ಷ ಎಂ.ಎಸ್.ಧೋನಿಯನ್ನು ನೋಡಲು ಪಟ್ಟು ಹಿಡಿದಿದ್ದಾರೆ. ಪರಿಸ್ಥಿತಿ ಕೈಮೀರುತ್ತಿದ್ದಂತೆ ಕೋಚ್ ರವಿಶಾಸ್ತ್ರಿ ಐಡಿಯಾದಿಂದ ಅಭಿಮಾನಿಗಳು ಸಮಾಧಾನಗೊಂಡಿದ್ದಾರೆ. 

ನಾಟಿಂಗ್‌ಹ್ಯಾಮ್(ಜೂ.14): ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಪಂದ್ಯ ರದ್ದಾಗುತ್ತಿದ್ದಂತೆ ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳು ರೊಚ್ಚಿಗೆದ್ದಿದ್ದರು. ಪಂದ್ಯಕ್ಕಾಗಿ ಕಾದು ಕಾದು ಸುಸ್ತಾದ ಅಭಿಮಾನಿಗಳು ಕೊನೆಗೆ ಧೋನಿಯನ್ನು ನೋಡಲು ಬಯಸಿದ್ದರು. ಇದಕ್ಕಾಗಿ ಪೆವಿಲಿಯನ್ ಸನಿಹದಲ್ಲಿ ಧೋನಿ, ಧೋನಿ ಎಂದು ಕೂಗಿದ್ದಾರೆ. ಅಭಿಮಾನಿಗಳ ಇಂಗಿತ ಅರ್ಥ ಮಾಡಿಕೊಂಡ ಕೋಚ್ ರವಿ ಶಾಸ್ತ್ರಿ ವಿಶೇಷ ರೀತಿಯಲ್ಲಿ ಸಮಾಧಾನ ಮಾಡಿದ್ದಾರೆ.

ಇದನ್ನೂ ಓದಿ: ಪಂದ್ಯ ರದ್ದಾದ ಬೆನ್ನಲ್ಲೇ ಟ್ರೋಲ್ ಆದ ಕೋಚ್ ರವಿ ಶಾಸ್ಚ್ರಿ

ಧೋನಿ, ಧೋನಿ ಕೂಗು ಹೆಚ್ಚಾಗುತ್ತಿದ್ದಂತೆ ಪೆವಿಲಿಯನ್ ಹೊರಬಂದ ಕೋಚ್ ರವಿ ಶಾಸ್ತ್ರಿ, ಸದ್ಯ ಧೋನಿ ಪೆವಿಲಿಯನ್‌ನಲ್ಲಿ ಇಲ್ಲ ಎಂದಿದ್ದಾರೆ. ಆದರೆ ಅಭಿಮಾನಿಗಳು ಕೇಳೋ ಪರಿಸ್ಥಿತಿಯಲ್ಲಿ ಇರಲಿಲ್ಲ. ಕೊನೆಗೆ ದಾರಿ ಕಾಣದ ರವಿ ಶಾಸ್ತ್ರಿ ಡ್ರೆಸ್ಸಿಂಗ್ ರೂಂ ಒಳಹೊಕ್ಕು ಧೋನಿ ಜರ್ಸಿ ತಂದು ಅಭಿಮಾನಿಗಳಿಗೆ ತೋರಿಸಿದ್ದಾರೆ.

ಇದನ್ನೂ ಓದಿ: ಪ್ರತಿ ಪಂದ್ಯಕ್ಕೆ ಮೀಸಲು ದಿನ ಅಸಾಧ್ಯವೆಂದ ಐಸಿಸಿ

ಜರ್ಸಿ ನೋಡಿದ ಅಭಿಮಾನಿಗಳು ಸಮಾಧಾನಗೊಂಡಿದ್ದಾರೆ. ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಪಂದ್ಯ ಒಂದು ಬಾಲ್ ಎಸೆಯದೇ ರದ್ದಾಗಿದೆ. ಟಾಸ್‌ಗೂ ಮೊದಲು ಸುರಿದ  ಮಳೆ, ಪಂದ್ಯ ಆರಂಭಿಸಲು ಅನುವು ಮಾಡಿರಲಿಲ್ಲ. ಹೀಗಾಗಿ ಪಂದ್ಯವನ್ನು ರದ್ದು ಮಾಡಿ ಉಭಯ ತಂಡಗಳಿಗೆ ಒಂದೊಂದು ಅಂಕ ಹಂಚಲಾಗಿದೆ.

PREV
click me!

Recommended Stories

ವಿಶ್ವಕಪ್ ಫೈನಲ್ ವಿವಾದಾತ್ಮಕ ತೀರ್ಪು; ಮೌನ ಮುರಿದ ಅಂಪೈರ್ ಧರ್ಮಸೇನಾ!
ವಿಶ್ವಕಪ್ ಫೈನಲ್ ಗೆಲುವು ನ್ಯಾಯವಲ್ಲ; ಇಂಗ್ಲೆಂಡ್ ನಾಯಕ ವಿಷಾದ!