ವಿಶ್ವಕಪ್ ಟೂರ್ನಿ ಭಾರತಕ್ಕೆ ವರ್ಗಾಯಿಸಲು ಅಮಿತಾಬ್ ಬಚ್ಚನ್ ಆಗ್ರಹ!

Published : Jun 14, 2019, 03:55 PM IST
ವಿಶ್ವಕಪ್ ಟೂರ್ನಿ ಭಾರತಕ್ಕೆ ವರ್ಗಾಯಿಸಲು ಅಮಿತಾಬ್ ಬಚ್ಚನ್ ಆಗ್ರಹ!

ಸಾರಾಂಶ

ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಪಂದ್ಯ ಮಳೆಯಿಂದ ರದ್ದಾದ ಬೆನ್ನಲ್ಲೇ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ವಿಶ್ವಕಪ್ ಟೂರ್ನಿಯನ್ನು ಭಾರತಕ್ಕೆ ವರ್ಗಾಯಿಸಲು ಆಗ್ರಹಿಸಿದ್ದಾರೆ. ಇದಕ್ಕೆ ಕಾರಣವನ್ನೂ ನೀಡಿದ್ದಾರೆ.  

ಮುಂಬೈ(ಜೂ.14): ವಿಶ್ವಕಪ್ ಟೂರ್ನಿಯ ಪಂದ್ಯಗಳು ಮಳೆಗೆ ಆಹುತಿಯಾಗುತ್ತಿದೆ. ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಪಂದ್ಯ ಮಳೆಯಿಂದ ರದ್ದಾದ ಬೆನ್ನಲ್ಲೇ, ಹಲವರು ಟೂರ್ನಿಯನ್ನೇ ಬೇರೆಡೆಗೆ ವರ್ಗಾಯಿಸಲು ಆಗ್ರಹಿಸಿದ್ದಾರೆ. ಇದರ ಬೆನ್ನಲ್ಲೇ ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ಟೂರ್ನಿಯನ್ನು ಭಾರತಕ್ಕೆ ಶಿಫ್ಟ್ ಮಾಡಲು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಇಂಗ್ಲೆಂಡ್‌ಗೆ ಭಾರತದ ಮಣ್ಣು; ನೋಡಿದ್ರೆ ಪುಳಕಿತರಾಗೋದು ಗ್ಯಾರಂಟಿ..!

ಭಾರತ ಹಾಗೂ ನ್ಯೂಜಿಲೆಂಡ್ ಸೇರಿದಂತೆ ಓಟ್ಟು 3 ಪಂದ್ಯಗಳು ಮಳೆಯಿಂದ ರದ್ದಾಗಿದೆ. ಹೀಗಾಗಿ ಅಮಿತಾಬ್ ಬಚ್ಚನ್ ತಮಾಷೆಯಾಗಿ ಟ್ವೀಟ್ ಮಾಡಿದ್ದಾರೆ. ವಿಶ್ವಕಪ್ ಟೂರ್ನಿಯನ್ನು ಭಾರತಕ್ಕೆ ವರ್ಗಾಯಿಸಿ, ಕಾರಣ ನಮಗೆ ಮಳೆ ಬೇಕು ಎಂದು ಬಚ್ಚನ್ ಟ್ವೀಟ್ ಮಾಡಿದ್ದಾರೆ.

 

 

ಇದನ್ನೂ ಓದಿ: ಮಳೆಯಿಂದ ಪಂದ್ಯ ರದ್ದು- 2019ರ ವಿಶ್ವಕಪ್‌ನಲ್ಲಿ ದಾಖಲೆ!

ಸೀನಿಯರ್ ಬಚ್ಚನ್ ಐಸಿಸಿ ಕಾಲೆಳೆದಿದ್ದರೆ, ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಂ.ಎಸ್.ಧೋನಿ ಗ್ಲೌಸ್ ವಿಚಾರವಾಗಿ ಐಸಿಸಿ ಹೆಚ್ಚಾಗಿ ತಲೆಕೆಡಿಸಿಕೊಂಡಿತ್ತು. ಇದೇ ಕಾಳಜಿಯನ್ನು ಐಸಿಸಿ ಮಳೆ ಹಾಗೂ ಪಂದ್ಯ ಕುರಿತು ವಹಿಸಿದ್ದರೆ ಟೂರ್ನಿ ಯಶಸ್ವಿಯಾಗಿ ನಡೆಯುತ್ತಿತ್ತು ಎಂದು ಟ್ವೀಟ್ ಮಾಡಿದ್ದಾರೆ.
 

PREV
click me!

Recommended Stories

ವಿಶ್ವಕಪ್ ಫೈನಲ್ ವಿವಾದಾತ್ಮಕ ತೀರ್ಪು; ಮೌನ ಮುರಿದ ಅಂಪೈರ್ ಧರ್ಮಸೇನಾ!
ವಿಶ್ವಕಪ್ ಫೈನಲ್ ಗೆಲುವು ನ್ಯಾಯವಲ್ಲ; ಇಂಗ್ಲೆಂಡ್ ನಾಯಕ ವಿಷಾದ!